Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಗಾನ್ ಟೆನಿಸ್: ಕ್ವಾರ್ಟರ್ ಫೈನಲ್ ಗೆ ಲಿಯಾಂಡರ್ ಪೇಸ್

ಇಲ್ಕಲೇ (ಉತ್ತರ ಇಂಗ್ಲೆಂಡ್), ಜೂನ್ 21: ಇಲ್ಲಿ ನಡೆಯುತ್ತಿರುವ ಏಗಾನ್ ಎಟಿಪಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಆದಿಲ್ ಶಮಾಸ್ದಿನ್ (ಕೆನಡಾ) ಜೋಡಿ, ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಭಾರತದ ಮತ್ತೊಂದು ಜೋಡಿಯಾದ ಡಿವಿಜ್ ಶರಣ್ ಹಾಗೂ ಪುರವ್ ರಾಜಾ ಜೋಡಿ, ಅಂತಿಮ ಎಂಟರ ಘಟ್ಟಕ್ಕೆ ಕಾಲಿಡುವಲ್ಲಿ ಯಶಸ್ವಿಯಾಗಿದೆ.

Aegon Championships: Indians advance to quarterfinals

ಲಿಯಾಂಡರ್ ಪೇಸ್ ಹಾಗೂ ಅವರ ಆದಿಲ್ ಅವರ ಪಂದ್ಯ ತೀವ್ರ ರೋಚಕವಾಗಿತ್ತು. ಪಂದ್ಯದ ಒಂದು ಹಂತದಲ್ಲಿ ಸೋಲಿನ ತುದಿಗೆ ಸಾಗಿದ್ದ ಈ ಜೋಡಿ, ಆನಂತರ ಪುಟಿದೆದ್ದು, ಎದುರಾಳಿಗಳಾಗಿದ್ದ ಆಸ್ಟ್ರೇಲಿಯಾದ ಮ್ಯಾಟ್ ರೇಯ್ಡ್ ಹಾಗೂ ಜಾನ್ ಪ್ಯಾಟ್ರಿಕ್ ವಿರುದ್ಧ 4-6, 6-3, 12-10 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿತು.

ಇನ್ನು, ಪುರವ್ ರಾಜ್ ಹಾಗೂ ಡಿವಿಜ್ ಶರಣ್ ಅವರು ಪಾಲ್ಗೊಂಡಿದ್ದ ಪಂದ್ಯ ಬಹುತೇಕ ಏಕಪಕ್ಷೀಯವಾಗಿತ್ತು. ಈ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತದ ಜತೆಗಾರರು ಎದುರಾಳಿ ಜೋಡಿಯಾದ ಅವಳಿ ಸಹೋದರರಾದ ವಿಕ್ಟರ್ ಎಸ್ಟ್ರೇಲ್ಲಾ ಬರ್ಗೋಸ್ ಹಾಗೂ ಡೇರಿಯನ್ ಕಿಂಗ್ 6-2, 6-4 ಸೆಟ್ ಗಳ ಅಂತರದಲ್ಲಿ ಗೆಲುವು ಪಡೆದರು.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+