Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೀರಜ್ ಸೇರಿ 4 ಅಥ್ಲೀಟ್‌ಗಳ ಹೆಸರು ಕ್ರೀಡಾ ಪುರಸ್ಕಾರಕ್ಕೆ ಶಿಫಾರಸು

AFI confirms Khel Ratna recommendation for Neeraj Chopra

ನವದೆಹಲಿ, ಜೂನ್ 4: ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಹೆಸರನ್ನು ಭಾರತದ ಅತ್ಯುತ್ತನ್ನ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಿರುವುದಾಗಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್‌ ಇಂಡಿಯಾ ಬುಧವಾರ (ಜೂನ್ 3) ಖಾತರಿಪಡಿಸಿದೆ.

ಅಥ್ಲೆಟಿಕ್ಸ್ ಫೆಡರೇಶನ್ ಆಫ್‌ ಇಂಡಿಯಾವು ಅಥ್ಲೀಟ್‌ ನೀರಜ್ ಚೋಪ್ರಾ ಹೆಸರು ಖೇಲ್ ರತ್ನಕ್ಕೆ, ಭಾರತ ಮಿಂಚಿನ ವೇಗದ ಮಹಿಳೆ ದ್ಯುತೀ ಚಂದ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರುವುದನ್ನು ಪಿಟಿಐ ಈಗಾಗಲೇ ವರದಿ ಮಾಡಿದೆ.

ದ್ಯುತೀ ಚಂದ್ ಸೇರಿ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅರ್ಪೀಂದರ್ ಸಿಂಗ್ (ಟ್ರಿಪಲ್ ಜಂಪ್), ಮನ್ಜಿತ್ ಸಿಂಗ್ (800 ಮೀ. ಓಟ), ಏಷ್ಯನ್ ಚಾಂಪಿಯನ್ ಮಿಡ್ಲ್ ಡಿಸ್ಟ್ಯಾನ್ಸ್ ರನ್ನರ್ ಪಿಯು ಚೈತ್ರಾ ಹೆಸರುಗಳು ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿವೆ.

ಭಾರತ ಹಾಕಿ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ, ರಸ್ಲರ್ ವಿನೇಶ್ ಫೋಗಟ್, ಕ್ರಿಕೆಟರ್ ರೋಹಿತ್ ಶರ್ಮಾ, ಬಾಕ್ಸರ್ ಅಮಿತ್ ಪಂಘಲ್ ಹೆಸರುಗಳು ಖೇಲ್ ರತ್ನಕ್ಕೆ ನಾಮನಿರ್ದೇಶನಗೊಂಡಿವೆ.

Story first published: Thursday, June 4, 2020, 9:34 [IST]
Other articles published on Jun 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+