For Quick Alerts
ALLOW NOTIFICATIONS  
For Daily Alerts

2030 Commonwealth Games ಬಿಗ್‌ ಅಪ್‌ಡೇಟ್‌: ಭಾರತ ಈ ನಗರಕ್ಕೆ ಆತಿಥ್ಯದ ಹಕ್ಕು

ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟವನ್ನು ಭಾರತದಲ್ಲಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ವೇಳೆ 2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್‌ ಸಿಕ್ಕಿದೆ. ಬುಧವಾರ ಕಾರ್ಯಕಾರಿ ಮಂಡಳಿಯು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಹಮದಾಬಾದ್ ಅನ್ನು ಆತಿಥೇಯ ನಗರವಾಗಿ ಶಿಫಾರಸು ಮಾಡಿದೆ. ಇನ್ನು ಈ ಬಗ್ಗೆ ನವೆಂಬರ್‌ 26 ರಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗವುದು. ಭಾರತ ಈ ಆತಿಥ್ಯಕ್ಕಾಗಿ ನೈಜೀರಿಯಾ ವಿರುದ್ಧ ಪ್ರಬಲ ಸ್ಪರ್ಧೆಯನ್ನು ಎದುರಿಸಿದೆ. ಇನ್ನು ಇದೇ ವೇಳೆ 2034ರ ಕಾಮನ್‌ವೆಲ್ತ್ ಕ್ರೀಡಾಕುಟವನ್ನು ನೈಜೀರಿಯಾದಲ್ಲಿ ನಡೆಸಲು ಚರ್ಚೆಗಳನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟವು ಬಿಡುಗಡೆ ಮಾಡಿದ ಪ್ರತಿಕಾ ಪ್ರಕಟಣೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟವು ಶತಮಾನೋತ್ಸವ ಸಂಭ್ರಮದಲ್ಲಿದ್ದಾಗ, ಈ ಕ್ರೀಡಾ ಕೂಟ ಭಾರತದ ಅಹಮದಾಬಾದ್‌ ನಗರದಲ್ಲಿ ಮಾಡಲು ಶಿಫಾರಸ್ಸು ಮಾಡುವುದಾಗಿ ಕಾಮನ್‌ವೆಲ್ತ್ ಗೇಮ್ಸ್‌ ತೀರ್ಮಾನಿಸಿದೆ. ಗುಜರಾತ್‌ನ ಅಹಮದಾಬಾದ್ ನಗರವನ್ನು ಈಗ ಪೂರ್ಣ ಕಾಮನ್‌ವೆಲ್ತ್ ಕ್ರೀಡಾಕೂಟದ ಸದಸ್ಯತ್ವಕ್ಕೆ ಪ್ರಸ್ತಾಪಿಸಲಾಗಿದ್ದು, ಈ ಬಗ್ಗೆ ಅಂತಿಮ ತೀರ್ಮಾನವನ್ನು ನವೆಂಬರ್‌ 26 ರಂದು ಕೈಗೊಳ್ಳಲಾಗುವುದು.

Ahmedabad Recommended to Host 2030 Centenary Commonwealth Games

ಭಾರತ ಈ ಹಿಂದೆ 2010ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಆಯೋಜಿಸಿತ್ತು. ಆಗ ಈ ಆತಿಥ್ಯ ರಾಷ್ಟ್ರ ರಾಜ್ಯಧಾನಿ ನವದೆಹಲಿಯಲ್ಲಿ ನಡೆದಿತ್ತು. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಮ್ಮ ಅನಿಸಿಕೆ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾರೆ. ಭಾರತಕ್ಕೆ ಇದು ಅತ್ಯಂತ ಹೆಮ್ಮೆ ಮತ್ತು ಸಂತೋಷದ ದಿನ. 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಲು ಅಹಮದಾಬಾದ್‌ ನಗರಕ್ಕೆ ಹಕ್ಕು ನೀಡಿದ್ದಕ್ಕಾಗ ದೇಶದ ಜನರಿಗೆ ಅಭಿನಂದನೆಗಳು ಎಂದು ಬರೆದು ಕೊಂಡಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟ 2030ರ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿದೆ. ಕಾಮನ್‌ವೆಲ್ತ್ ಗೇಮ್ಸ್‌ನ್ನು 1930ರಲ್ಲಿ ಮೊದಲ ಕಾಮನ್‌ವೆಲ್ತ್‌ ಗೇಮ್ಸ್‌ನ್ನು ಕೆನಡಾದ ಹ್ಯಾಮಿಲ್ಟನ್‌ನಲ್ಲಿ ಆಯೋಜಿಸಲಾಗಿತ್ತು. 2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ ನೂರನೇ ವರ್ಷದ ಸಂಭ್ರಮಾಚರಣೆ ಆಚರಿಸಿಕೊಳ್ಳಲಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡುತ್ತಿದೆ. ಇನ್ನು ಭಾರತ 2036ರ ಒಲಿಂಪಕ್ ಕ್ರೀಡಾ ಕೂಟವನ್ನು ಆಯೋಜಿಸಲು ಭಾರತ ಯೋಜನೆ ನಡೆಸುತ್ತಿದೆ. ಭಾರತವು ಒಲಿಂಪಿಕ್ ಕ್ರೀಡಾಕೂಟ-2036 ಅನ್ನು ಆಯೋಜಿಸಲು ತನ್ನ ಬಿಡ್ ಅನ್ನು ಮಂಡಿಸಿದೆ.

ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜನೆಗಾಗಿ ಭಾರತದ ಹೆಸರನ್ನು ಶಿಫಾರಸು ಮಾಡಿರುವ ಬಗ್ಗೆ ರಿಲಯನ್ಸ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಸಂತಸ ಹಾಗೂ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

Story first published: Wednesday, October 15, 2025, 23:25 [IST]
Other articles published on Oct 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+