ಭಾರತದ ಕ್ರೀಡಾಭಿಮಾನಿಗಳಿಗೆ ಬುಧವಾರ ಗುಡ್‌ನ್ಯೂಸ್ ಸಿಕ್ಕಿದೆ. ಭಾರತ 2030 ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ. ಈ ಕ್ರೀಡಾಕೂಟಕ್ಕೆ ಅಹಮದಾಬಾದ್‌ನಲ್ಲಿ ನಡೆಯಲಿದೆ ಎಂದು, ಗ್ಲ್ಯಾಸ್ಗೋದಲ್ಲಿ ನಡೆದ 74 ಕಾಮನ್‌ವೆಲ್ತ್ ಸದಸ್ಯರ ಸಭೆಯಲ್ಲಿ ಆತಿಥ್ಯದ ಹಕ್ಕುಗಳನ್ನು ದೃಢಪಡಿಸಲಾಗಿದೆ. ಭಾರತವೂ ಈ ಕ್ರೀಡಾಕೂಟಕ್ಕೆ ಅಹಮದಾಬಾದ್ ನಗರವನ್ನು ನಾಮನಿರ್ದೇಶನವನ್ನು ಮಾಡಿತ್ತು. ಈ ಮೂಲಕ ಅಹಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಶತಮಾನೋತ್ಸವ ಆಚರಿಸಲು ಸಜ್ಜಾಗಿದೆ.
ಈ ಬಗ್ಗೆ ಕಾಮನ್‌ವೆಲ್ತ್ ಸ್ಪೋರ್ಟ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಹಮದಾಬಾದ್‌ಗೆ 2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ಸಿಗುತ್ತಿದ್ದಂತೆ, 20 ನೃತ್ಯಗಾರರು, 30 ಡ್ರಮ್ಮರ್‌ಗಳು ನೃತ್ಯ ಹಾಗೂ ಹಾಡುಗಳನ್ನು ಹಾಡಿ ಕುಣಿದಾಡಲು ಆರಂಭಿಸಿದರು. ಈ ಪ್ರದರ್ಶನವು ನೆರೆದಿದ್ದ ಪ್ರೇಕ್ಷರಿಗೆ ಅಚ್ಚರಿಗೊಳಿಸಿತು.

ಭಾರತವು ಇದಕ್ಕೂ ಮೊದಲು ಸಹ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದಕ್ಕೂ ಮೊದಲು 2010ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾರತ 101 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಕೆನಾಡದಲ್ಲಿ 1930ರಲ್ಲಿ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈಗ ಭಾರತದ ಅಹಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಶತಕದ ಸಂಭ್ರವನ್ನು ಆಚರಿಸಲು ವೇದಿಕೆ ನಿರ್ಮಿಸಲಿದೆ.
ಕಾಮನ್ವೆಲ್ತ್ ಸ್ಪೋರ್ಟ್ ತೋರಿಸಿದ ನಂಬಿಕೆಗೆ ಹರ್ಷವನ್ನು ವ್ಯಕ್ತ ಪಡಿಸಿದೆ. 2030ರ ಕಾಮನ್‌ವೆಲ್ತ್ ಕ್ರೀಡಾಕೂಟವು ಸ್ಮರಣೀಯವಾಗಿದೆ. ಅಹಮದಾಬಾದ್‌ನಲ್ಲಿ 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ನಡೆಸಲು ತೀರ್ಮಾನಿಸಲಾಗಿದೆ. ಕ್ರೀಡಾಪಟುಗಳು ಭವಿಷ್ಯದ ಆಟಗಾರರಿಗೆ ಪ್ರೇರಣೆ ನೀಡಲಿದ್ದಾರೆ. ಈ ಕ್ರೀಡಾಪಟುಗಳು ಸಂಸ್ಕೃತಿ, ಸಮುದಾಯ ಸ್ನೇಹ ಮತ್ತು ಪ್ರಗತಿಯ ಮನೋಭಾವವನ್ನು ಒಟ್ಟಿಗೆ ತರುತ್ತಾರೆ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಭಾರತೀಯ ಅಧ್ಯಕ್ಷ ಪಿ.ಟಿ. ಉಷಾ ಹೇಳಿದ್ದಾರೆ.
ಭಾರತ ಈ ವರೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಭಾರತ 1934ರಲ್ಲಿ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಭಾಗವಹಿಸಿತ್ತು. ಇಲ್ಲಿಂದ ಈ ವರೆಗೆ ಭಾರತ ಒಟ್ಟಾರೆ 564 ಪದಕಗಳನ್ನು ಗೆದ್ದಿದೆ. ಇದರಲ್ಲಿ 202 ಬಂಗಾರ, 190 ಬೆಳ್ಳಿ, 171 ಕಂಚಿನ ಪದಕ ಗೆದ್ದೊದೆ. ಭಾರತ 2010ರಲ್ಲಿ ನಡೆದಿದ್ದ ಕ್ರೀಡಾ ಕೂಟದಲ್ಲಿ ಅಮೋಘ ಪ್ರದರ್ಶನ ನಿಡಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರತ ಒಟ್ಟು 61 ಪದಕ ತನ್ನದಾಗಿಸಿಕೊಂಡಿದೆ.
2030ರಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ 15 ರಿಂದ 17 ಕ್ರೀಡೆಗಳು ನಡೆಯಲಿವೆ ಎಂದು ಕಾಮನ್‌ವೆಲ್ತ್ ಸ್ಪೋರ್ಟ್ ಖಚಿತ ಪಡಿಸಿದೆ. ಅಹಮದಾಬಾದ್ ನಗರಕ್ಕೆ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯ ಸಿಕ್ಕಿದ್ದಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾರತಕ್ಕೆ ಇದು ಅಪಾರ ಹೆಮ್ಮೆಯ ಕ್ಷಣ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿ, ಗೃಹ ಸಚಿವ ಅಮಿತ್ ಶಾ ಅವರ ಪ್ರಯತ್ನವನ್ನು ಗುಜರಾತ್ ಸಿಎಂ ಶ್ಲಾಘಿಸಿದ್ದಾರೆ.