ರಿಯೋ 2016: ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಕ್ವಾರ್ಟರ್ ಫೈನಲಿಗೆ
ರಿಯೋ ಡಿ ಜನೈರೋ, ಆಗಸ್ಟ್ 10: ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವ ಭರವಸೆ ಮೂಡಿಸಿದ್ದ ಭಾರತದ ಆಟಗಾರರ ಕಳಪೆ ಪ್ರದರ್ಶನ ಮುಂದುವರೆದಿದ್ದರೆ, ಆರ್ಚರಿ (ಬಿಲ್ಲುಗಾರಿಕೆ) ವೈಯಕ್ತಿಕ ವಿಭಾಗದಲ್ಲಿ ಭಾರತದ ಬಿಲ್ಲುಗಾರ ಅತನು ದಾಸ್ ತಮ್ಮ ಗೆಲುವನ್ನು ಮುಂದುವರಿಸಿ ಕ್ವಾರ್ಟರ್ಫೈನಲ್ಗೆ ಪ್ರವೇಶ ಮಾಡಿದ್ದಾರೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಮಂಗಳವಾರ (ಅ.09) ರಂದು ನಡೆದ ಆರ್ಚರಿ (ಬಿಲ್ಲುಗಾರಿಕೆ) ವೈಯಕ್ತಿಕ ವಿಭಾಗದ ಪಂದ್ಯದಲ್ಲಿ ಅತನು ಮೊದಲನೇ ಪಂದ್ಯದಲ್ಲಿ ನೇಪಾಳದ ಜಿತ್ ಬಹದ್ದೂರ್ ಮುಕ್ತಾನ್ರನ್ನು 6-0 ಅಂತರದಿಂದ ಸುಲಭವಾಗಿ ಸೋಲಿಸಿದ್ದರು.

ಇನ್ನು 32ರ ಘಟ್ಟದ ಎರಡನೇ ಪಂದ್ಯದಲ್ಲಿ ದಾಸ್ 6-4ರಿಂದ ಕ್ಯೂಬಾದ ಆಡ್ರಿಯನ್ ಪ್ಯುಂಟೇಸ್ ಪರೇಜ್ರನ್ನು ಮಣಿಸಿ ಶುಭಾರಂಭ ಮಾಡುವ ಮೂಲಕ ಕ್ವಾರ್ಟರ್ ಫೈನಲ್ ಎಂಟ್ರಿಕೊಟ್ಟಿದ್ದಾರೆ.
ಶುಕ್ರವಾರ (ಅ.12) ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಹಿಂದೆ ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದ ದಕ್ಷಿಣ ಕೊರಿಯಾದ ಆಟಗಾರ ಲೀ ಸಿಯುಂಗ್ ಯುನ್ರನ್ನು ಎದುರಿಸಲಿದ್ದಾರೆ.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Archer Atanu Das in round of 16
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications