ಆರ್ಚರ್ ಹಿಮಾನಿ ಮಲಿಕ್‌ಗೆ ಕೊರೊನಾವೈರಸ್ ಸೋಂಕು

ನವದೆಹಲಿ: ಆರ್ಚರ್ ಹಿಮಾನಿ ಮಲಿಕ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಮಲಿಕ್ ಸದ್ಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ (ಎಎಸ್‌ಐ)ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಯಾಂಪ್‌ನಲ್ಲಿದ್ದಾರೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಈ ವಿಚಾರವನ್ನು ಗುರುವಾರ (ನವೆಂಬರ್ 5) ತಿಳಿಸಿದೆ.

ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!

ಕ್ಯಾಂಪ್‌ಗೆ ಸಂಬಂಧಿಸಿ ಸಾಯ್, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ನಡೆಸುತ್ತಿದೆ. ರಾಷ್ಟ್ರೀಯ ಕ್ಯಾಂಪ್‌ಗೆ ಬರುವ ಪ್ರತಿಯೊಬ್ಬರೂ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕಾಗುತ್ತದೆ. ಸೋಂಕು ತಗುಲಿರುವ ಮಲಿಕ್‌ಗೆ ರೋಗದ ಯಾವುದೇ ಗುಣಲಕ್ಷಣಗಳಿರಲಿಲ್ಲ. ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

'ರಾಷ್ಟ್ರೀಯ ಕ್ಯಾಂಪ್‌ಗೆ ಬಂದಿದ್ದ 23 ಕ್ರೀಡಾಪಟುಗಳಲ್ಲಿ ಹಿಮಾನಿ ಮಲಿಕ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಇನ್ನುಳಿದ 22 ಮಂದಿಗೆ ನೆಗೆಟಿವ್ ಬಂದಿದೆ' ಎಂದು ಸಾಯ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿ

'ಮಲಿಕ್‌ಗೆ ಸದ್ಯ ರೋಗ ಲಕ್ಷಣಗಳಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ಸಾಯ್ ಮಾಹಿತಿ ನೀಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 5, 2020, 20:34 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X