ಜಂಟಿ ಜೀವನಕ್ಕೆ ಕಾಲಿರಿಸಿದ ಆರ್ಚರ್ಸ್ ದೀಪಿಕಾ ಕುಮಾರಿ-ಅತನು ದಾಸ್

ರಾಂಚಿ, ಜುಲೈ 1: ಭಾರತದ ಟಾಪ್ ಆರ್ಚರ್‌ಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಮಂಗಳವಾರ (ಜೂನ್ 30) ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದಾರೆ. ಕೊರೊನಾವೈರಸ್ ಕಾರಣ ಕಡಿಮೆ ಜನ ಸೇರಿದ್ದ ಸಮಾರಂಭದ ಮೂಲಕ ರಾಂಚಿಯಲ್ಲಿ ದೀಪಿಕಾ-ಅತನು ಮದುವೆ ನೆರವೇರಿದೆ.
ದೀಪಿಕಾ ಕುಮಾರಿ ಮತ್ತು ಅತನು ಮದುವೆ ಸಮಾರಂಭದಲ್ಲಿ ಕೊರೊನಾ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸಲಾಗಿತ್ತು ಮತ್ತು ಕಡಿಮೆ ಅತಿಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು.
ಝಾರ್ಖಂಡ್‌ನ ಮುಖ್ಯಮಂತ್ರಿ, ಹೇಮಂತ್ ಸೊರೇನ್ ಮತ್ತು ಭಾರತದ ಆರ್ಚರಿ (ಬಿಲ್ಗಾರಿಕೆ) ಅಸೋಸಿಯೇಶನ್‌ನ (ಎಎಐ)ಯ ನೂತನ ಚುನಾಯಿತ ಅಧ್ಯಕ್ಷ ಅರ್ಜುನ್ ಮುಂಡ ಮದುವೆ ಸಮಾರಂಭದಲ್ಲಿ ಪಾಲ್ಗೊಂಡವರಲ್ಲಿ ಪ್ರಮುಖರು.
ಮದುವೆಗೆ ಕೇವಲ 60 ಆಹ್ವಾನ ಪತ್ರಿಕೆಗಳನ್ನು ಮಾತ್ರ ಪ್ರಿಂಟ್ ಮಾಡಲಾಗಿತ್ತು. ಅತಿಥಿಗಳನ್ನು 50ರ ಎರಡು ಬ್ಯಾಚ್‌ಗಳಾಗಿ ವಿಂಗಡಿಸಲಾಗಿತ್ತು. ಮೊದಲ ಬ್ಯಾಚ್ 7:00 PMಗೆ ಮದುವೆ ಮಂಟಪಕ್ಕೆ ಪ್ರವೇಶಿಸಿದರೆ, ಈ ಬ್ಯಾಚ್ ಹೊರ ಹೋದ ಅರ್ಧ ಗಂಟೆಯ ಬಳಿಕ ಮತ್ತೊಂದು ಬ್ಯಾಚ್ ಪ್ರವೇಶಕ್ಕೆ ಅವಕಾಶ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications