ವಿಶ್ವ ದಾಖಲೆ ಸಮಕ್ಕೆ ನಿಂತ ದೀಪಿಕಾಗೆ ಸಚಿನ್ ರಿಂದ ಬಹುಪರಾಕ್!
ಶಾಂಘೈ, ಏಪ್ರಿಲ್ 28: ಭಾರತದ ಹೆಮ್ಮೆಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಬುಧವಾರ ಇಲ್ಲಿ ನಡೆದ ಮಹಿಳೆಯ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.ದೀಪಿಕಾ ಅವರ ಸಾಧನೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಬಹುಪರಾಕ್ ಹೇಳಿದ್ದಾರೆ.
21ರ ಹರೆಯದ ದೀಪಿಕಾ ಅವರು ಶಾಂಘೈನಲ್ಲಿ ಮಹಿಳಾ ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಸದ್ಯ ಇರುವ ದಾಖಲೆ 686/720 ಅಂಕಗಳಿಗೆ ಸಮವಾದ ಅಂಕಗಳಿಸಿದ್ದಾರೆ. [ಒಲಿಂಪಿಕ್ಸ್ 2012 : ಭಾರತ ಕ್ರೀಡಾಕಲಿಗಳ ಸಂಪೂರ್ಣ ಪಟ್ಟಿ]

ಕಳೆದ ವರ್ಷ ಕೊಪೆನ್ಹೇಗನ್ನಲ್ಲಿ ನಡೆದ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ರಿಯೋ ಒಲಿಂಪಿಕ್ಸ್ಗೂ ದೀಪಿಕಾ ಅರ್ಹತೆ ಪಡೆದುಕೊಂಡಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ್ತಿ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 686 ಅಂಕ ಗಳಿಸಿ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಕೊರಿಯಾದ ಕಿ ಬೊ ಬೊಯಿ ಸಾಧನೆಯನ್ನು ಸಮಗಟ್ಟಿದರು. [ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಜಿಮ್ನಾಸ್ಟ್ ದೀಪಾ]
ಪದ್ಮಶ್ರೀ ಪುರಸ್ಕೃತ ಆಟಗಾರ್ತಿ ದೀಪಿಕಾ ಅವರು ಈ ಹಿಂದೆ 2011, 12, 13ನೇ ವಿಶ್ವಕಪ್ನ ವೈಯಕ್ತಿಕ ಸ್ಪರ್ಧೆಗಳಲ್ಲಿ ಬೆಳ್ಳಿಪದಕ ಗಳಿಸಿದ್ದರು. ನವೀನ್ ಜಿಂದಾಲ್ :
ಮಾಜಿ ಕ್ರಿಕೆಟರ್ ಮಹಮ್ಮದ್ ಕೈಫ್:
ಸಚಿನ್ ತೆಂಡೂಲ್ಕರ್ ರಿಂದ ಹೊಗಳಿಕೆ:
ಎಂಟರ ಘಟ್ಟದಲ್ಲಿ ದೀಪಿಕಾ ಅವರು 12ನೇ ಶ್ರೇಯಾಂಕದ ಅತನು ದಾಸ್ (671 ಅಂಕಗಳು) ಜತೆಗೂಡಿ ಟರ್ಕಿಯ ಮಿಶ್ರ ಡಬಲ್ಸ್ ಜೋಡಿಯನ್ನು 5-3 ಅಂತರದಿಂದ ಸೋಲಿಸಿದರು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Deepika Kumari equals world record
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications