For Quick Alerts
ALLOW NOTIFICATIONS  
For Daily Alerts

Arshad Nadeem: ಕ್ರಿಕೆಟ್‌ ಆಟಗಾರ ಆಗಬೇಕಿದ್ದ ಅರ್ಷದ್‌ ನದೀಮ್ ಪಾಕ್‌ನ ಯುಗ ಪುರುಷ

ಗುರುವಾರ ರಾತ್ರಿ ಕಳೆದು ಶುಕ್ರವಾರ ಬೆಳಗಿನ ಸೂರ್ಯನ ಕಿರಣಗಳು ಭೂಮಿಯನ್ನು ಮುಟ್ಟುವ ಮುನ್ನವೇ ಪ್ಯಾರಿಸ್‌ನಲ್ಲಿ ಪಾಕ್‌ನ ಜಾವೆಲಿನ್‌ ಅಥ್ಲಿಟ್‌ ತಮ್ಮ ಸಾಧನೆಯ ಬೆಳಕನ್ನು ಜಗತ್ತಿನ ತುಂಬ ಪಸರಿಸಿದರು. ಒಲಿಂಪಿಕ್ಸ್‌ ಇತಿಹಾಸದಲ್ಲಿ ಯಾವೊಬ್ಬ ಪಾಕಿಸ್ತಾನ ಕ್ರೀಡಾಪಟು ಕಳೆದ ನಾಲ್ಕು ದಶಕದಲ್ಲಿ ಮಾಡದ ಸಾಧನೆಯನ್ನು ಅರ್ಷದ್ ನದೀಮ್ ಮಾಡಿದ್ದಾರೆ.

ಪ್ಯಾರಿಸ್‌ ಅಂಗಳದಲ್ಲಿ ಅರ್ಷದ್‌ ಜಾವೆಲಿನ್‌ ಹಿಡಿದು ಅಂಗಳಕ್ಕೆ ಇಳಿಯುವ ಹೊತ್ತಿಗೆ ನಿಜಕ್ಕೂ ಪಾಕಿಸ್ತಾನ ಗಾಢ ನಿದ್ರೆಯಲ್ಲಿತ್ತು. ಕ್ರೀಡೆಯನ್ನು ಫಾಲೋ ಮಾಡುವ ಜನ ಮಾತ್ರ ಟಿವಿಗಳ ಮುಂದೆ ಕುಳಿತಿದ್ದರು. ಭರವಸೆಯ ಅಥ್ಲೀಟ್‌ ತಮ್ಮ ಪ್ರಯತ್ನದಲ್ಲಿ 90ರ ಗಡಿ ದಾಟುತ್ತಿದ್ದಂತೆ ಪಾಕ್‌ನಲ್ಲಿ ಸಂಭ್ರಮ ಮನೆ ಮಾಡಿತು. ಪಾಕಿಸ್ತಾನ ನೂತನ ಪೋಸ್ಟರ್‌ ಬಾಯ್‌ ಜನನ ಒಲಿಂಪಿಕ್ಸ್‌ ಅಂಗಳದಲ್ಲಿ ಆಯಿತು.

Arshad Nadeem The Man of the Era for Pakistan

ಪಾಕ್‌ನ ಆಶಾ ಕಿರಣ್

ಇಲ್ಲಿಯವರೆಗೆ ಪಾಕಿಸ್ತಾನದ ಯಾವುದೇ ಕ್ರೀಡಾಪಟು ಒಲಿಂಪಿಕ್ ಇತಿಹಾಸದಲ್ಲಿ ವೈಯಕ್ತಿಕ ಚಿನ್ನ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಅರ್ಷದ್ ನದೀಮ್ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಪಾಕಿಸ್ತಾನ ಹಾಕಿಯಲ್ಲಿ ಮಾತ್ರ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅರ್ಷದ್‌ ನದೀಮ್ ಈ ಹಿಂದೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ 90 ಮೀಟರ್‌ ದಾಟಿದ್ದರು. ಅಲ್ಲದೆ, ಅರ್ಷದ್ ನದೀಮ್ 90 ಮೀಟರ್ ಎಸೆದ ದಕ್ಷಿಣ ಏಷ್ಯಾದ ಏಕೈಕ ಎಸೆತಗಾರರಾಗಿದ್ದಾರೆ.

ಯುಗ ಪುರುಷ

ಎಸ್‌.. ಅರ್ಷದ್‌ ನದೀಮ್‌ ಪಾಕಿಸ್ತಾನ ಪಾಲಿಗೆ ನಿಜಕ್ಕೂ ಯುಗ ಪುರಷನೇ ಸರಿ. ಪಾಕಿಸ್ತಾನ ಕಳೆದ ನಾಲ್ಕು ದಶಗಳಿಂದ ಅನುಭವಿಸಿದ್ದ ಒಲಿಂಪಿಕ್ಸ್‌ ಪದಕದ ಬರವನ್ನು ನೀಗಿಸಿದ ಪುಣ್ಯಾತ್ಮ. ಜಾವೆಲಿನ್‌ ಅರ್ಷದ್ ಅವರ ಮೊದಲ ಆಯ್ಕೆ ಕ್ರೀಡೆ ಆಗಿರಲಿಲ್ಲ. ಇವರು ಎಲ್ಲರಂತೆ ಯಾವ ಕ್ರೀಡೆಗೆ ಹೆಚ್ಚಿನ ಮಹತ್ವ ಇದೆಯೋ. ಅದನ್ನೇ ಆಡಲು ಇಚ್ಛಿಸಿದ್ದರು. ಆದರೆ ವಿಧಿ ಆಟವೇ ಬೇರೆಯದ್ದಾಗಿತ್ತು.

ಕ್ರಿಕೆಟ್‌ ಮೇಲೆ ಮೊದಲ ಪ್ರೀತಿ

ಅರ್ಷದ್ ನದೀಮ್ ಸಹ ಏಷ್ಯಾ ಖಂಡದಲ್ಲಿ ಹೆಚ್ಚು ಪ್ರಚಲಿತ ಇರುವ ಕ್ರಿಕೆಟ್‌ ಆಟವನ್ನೇ ಆಡಬೇಕೆಂದು ಆಶಯ ಹೊಂದಿದ್ದರು. ಅರ್ಷದ್ ನದೀಮ್ ಜನವರಿ 2, 1997 ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಲಾಹೋರ್‌ನಿಂದ ಈ ನಗರ 300 ಕಿಲೋ ಮೀಟರ್ ದೂರದಲ್ಲಿದೆ. ಬಡ ಕುಟುಂಬದಲ್ಲೇ ಹುಟ್ಟಿದ ಅರ್ಷದ್‌ ನದೀಮ್‌, ಕಟ್ಟಡ ಕಾರ್ಮಿಕನ ಮಗ. ಏಳು ಒಡಹುಟ್ಟಿದವರನ್ನು ಹೊಂದಿರುವ ಅರ್ಷದ್‌ ಮೊದಲ ಪ್ರೀತಿ ಕ್ರಿಕೆಟ್‌ ಆಗಿತ್ತು. ಆದರೆ ಅವರ ಮನೆಯಲ್ಲಿ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಹೀಗಾಗಿಯೇ ವೃತ್ತಿಪರ ಜಾವೆಲಿನ್ ಎಸೆತಗಾರರಾದರು.

Arshad Nadeem The Man of the Era for Pakistan

ಕೋಚ್ ಫೈಸಲ್ ಅಹಮದ್ ಅರ್ಷದ್‌ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡಿದ್ದಾರೆ. ಅರ್ಷದ್‌ ಅವರ ಸಾಧನೆಯ ಹಿಂದೆ ಫೈಸಲ್‌ ಅಹಮದ್‌ ಅವರ ಬೆವರು ಹನಿಯೂ ಇದೆ. ಫೈಸಲ್ ಅಹ್ಮದ್ ಅವರು ಅರ್ಷದ್ ನದೀಮ್‌ಗೆ ಮೊದಲಿನಿಂದಲೂ ತರಬೇತಿ ನೀಡಿ ಅವರನ್ನು ವಿಶ್ವ ಮಟ್ಟದ ಕ್ರೀಡಾಪಟುವಾಗಿಸಿದ್ದಾರೆ.

Story first published: Friday, August 9, 2024, 16:54 [IST]
Other articles published on Aug 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+