Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್: ಭಾರತದ ಮಡಿಲಿಗೆ 5 ಪದಕಗಳು

Asian Athletics Championships: Indians bag 5 medals

ದೋಹಾ, ಏಪ್ರಿಲ್ 22: ಕತಾರ್‌ನ ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಆರಂಭಿಕ ದಿನದಲ್ಲಿ ಭಾರತೀಯ ಅಥ್ಲೀಟ್‌ಗಳು ಒಟ್ಟು 5 ಪದಕಗಳನ್ನು ಜಯಿಸಿದ್ದಾರೆ. ಎರಡು ಬೆಳ್ಳಿ ಮತ್ತು ಮೂರು ಪಂಚಿನ ಪದಕಗಳು ಭಾರತದ ಪಾಲಾಗಿವೆ.

ಭಾನುವಾರ (ಏಪ್ರಿಲ್ 21) ಆರಂಭಗೊಂಡ ಕ್ರೀಡಾ ಕೂಟದ ಮಹಿಳಾ ವಿಭಾಗದ ಜಾವೆಲಿನ್ ಥ್ರೋನಲ್ಲಿ ಅಣ್ಣು ರಾಣಿ ಬೆಳ್ಳಿ (60.22m) ಪದಕಕ್ಕೆ ಮುತ್ತಿಕ್ಕಿದರೆ, ಪುರುಷರ ವಿಭಾಗದ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಬ್ಲೆ ಕೂಡ ರಜತ ಪದಕ (8:30.19s) ಜಯಿಸಿದರು.

ಇನ್ನು ವನಿತಾ ವಿಭಾಗದ 400 ಮೀಟರ್ ಓಟದಲ್ಲಿ ಕನ್ನಡತಿ ಎಂಆರ್ ಪೂವಮ್ಮ, 5000 ಮೀ. ಓಟದಲ್ಲಿ ಪರೂಲ್ ಚೌಧರಿ, ಪುರುಷರ 10000 ಮೀ. ಓಟದಲ್ಲಿ ಗವಿತ್ ಮುರಳಿ ಕುಮಾರ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಉಳಿದಂತೆ ಆಕರ್ಷಣೀಯ ಓಟಗಾರ್ತಿ ಹಿಮಾದಾಸ್ ಗಾಯಾಳಾಗಿ ಹೀಟ್‌ನಲ್ಲಿ ಅರ್ಹತೆ ಕೈ ಚೆಲ್ಲಿದ್ದರೆ, ವನಿತಾ 100 ಮೀ.ನಲ್ಲಿ ದ್ಯುತೀ ಚಾಂದ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

Story first published: Monday, April 22, 2019, 13:56 [IST]
Other articles published on Apr 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+