ಏಷ್ಯನ್ ಗೇಮ್ಸ್ 2018: ಮಹಿಳಾ 200 ಮೀ.ನಲ್ಲಿ ದ್ಯುತೀಗೆ ಬೆಳ್ಳಿ ಪದಕ

ಜಕಾರ್ತಾ, ಆಗಸ್ಟ್ 29: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಅಥ್ಲೆಟಿಕ್ಸ್ ನಲ್ಲಿ ಮತ್ತೆ ಮಿಂಚತೊಡಗಿದೆ. ಭಾರತದ ಸ್ಪ್ರಿಂಟರ್ ದ್ಯುತೀ ಚಂದ್ ಅವರು 200 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದು ಭಾರತಕ್ಕೆ ಮಭಿಸಿದ 52ನೇ ಪದಕವಾಗಿದೆ.
ಆಗಸ್ಟ್ 28ರ ಬುಧವಾರ ನಡೆದ ಮಹಿಳಾ ವಿಭಾಗದ 200 ಮೀ. ಫೈನಲ್ ಸ್ಪರ್ಧೆಯಲ್ಲಿ ದ್ಯುತೀ ದ್ವಿತೀಯ ಸ್ಥಾನಿಗರಾಗುವ ಮೂಲಕ ಬೆಳ್ಳಿಗೆ ಮುತ್ತಿಕ್ಕಿದರು. 200 ಮೀ. ಓಟವನ್ನು ಚಂದ್ 23.20 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದರು.
ಕ್ರೀಡಾಕೂಟದ 10ನೇ ದಿನವಾದ ಇಂದು ಟೇಬಲ್ ಟೆನಿಸ್ ನಲ್ಲಿ ಭಾರತಕ್ಕೆ ಕಂಚು ಲಭಿಸಿತ್ತು. ಟಿಟಿ ಮಿಶ್ರ ಡಬಲ್ಸ್ ನಲ್ಲಿ ಭಾರತದ ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ ಜೋಡಿ ಕಂಚು ಜಯಿಸಿದ್ದರು. ಭಾರತ ಪದಕ ಪಟ್ಟಿಯಲ್ಲಿ ಈಗ 9ನೇ ಸ್ಥಾನದಲ್ಲಿದೆ.
Story first published: Wednesday, August 29, 2018, 17:39 [IST]
Other articles published on Aug 29, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications