
ಜಕಾರ್ತಾ, ಆಗಸ್ಟ್ 23: ಏಷ್ಯಾನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶಾರ್ದೂಲ್ ವಿಹಾನ್ ಬೆಳ್ಳಿ ಪದಕ ಗೆದ್ದಿದ್ದಾರೆ. ಶೂಟಿಂಗ್ ನ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಶಾರ್ದೂಲ್ ಗೆ ಬೆಳ್ಳಿ ಒಲಿದಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಗುರುವಾರ ನಡೆದ ಇಂಡೋನೇಷ್ಯಾ ಏಷ್ಯಾನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 15ರ ಹರೆಯದ ಕಿರಿಯ ಶೂಟರ್ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದಾರೆ. ಭಾರತದ ಪದಕ ಪಟ್ಟಿಗೆ ಒಟ್ಟು 17ನೇ ಪದಕ ಸೇರಿಕೊಂಡಂತಾಗಿದೆ.
ಶೂಟಿಂಗ್ ವಿಭಾಗದಲ್ಲೇ ಹೆಚ್ಚಿನ ಪದಕ ಭಾರತದ ಪಾಲಾಗಿವೆ. ಈ ವರೆಗೆ ಶೂಟಿಂಗ್ ನಲ್ಲಿ ಒಟ್ಟು 8 ಪದಕಗಳು ಬಂದಿವೆ. ರಾಹಿ ಜೀವನ್ ಸರ್ನೊಬಾತ್ ಅವರು ನಾಲ್ಕನೇ ದಿನ (ಆಗಸ್ಟ್ 22) ಶೂಟಿಂಗ್ ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದರು.