ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಚಿನ್ನ

ಜಕಾರ್ತಾ, ಸೆಪ್ಟೆಂಬರ್ 01: ಏಷಿಯನ್ ಗೇಮ್ಸ್ 2018 ರಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದ್ದು ಇಂದು ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಬಂದಿದೆ.
ಬಾಕ್ಸರ್ ಅಮಿತ್ ಪಂಗಲ್ ಅವರು ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ದುಸ್ಮಾಟೋವ್ ಅವರನ್ನು ಸೋಲಿಸಿದ್ದಾರೆ.
22 ವರ್ಷದ ಅಮಿತ್ ಪಂಗಲ್ ಅವರು ಕಳೆದ ಒಲಿಂಪಿಕ್ ಚಾಂಪಿಯನ್‌ಶಿನಲ್ಲಿ ಸೋತು ನಿರಾಸೆ ಅನುಭವಿಸಿದ್ದರು. ಆದೆರ ಈಗ ವಿಜಯ ಸಾಧಿಸಿ ವಿಶ್ವಾಸ ಗಳಿಸಿದ್ದಾರೆ.
ಭಾರತ ಮತ್ತೊಂದು ಚಿನ್ನದ ಪದಕವನ್ನು ಸಹ ಬ್ರಿಡ್ಜ್ ಇವೆಂಟ್‌ನಲ್ಲಿ ಗಳಿಸಿದೆ. ಭಾರದ ಪುರುಷರ ಜೋಡಿಯು ಬ್ರಿಡ್ಜ್ ಇವೆಂಟ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ.
ಏಷ್ಯನ್ ಕಪ್ 2018 ಮುಗಿಯಲು ಇನ್ನೊಂದು ದಿನ ಬಾಕಿ ಇದ್ದು ಈವರೆಗೆ ಭಾರತವು 67 ಪದಕಗಳನ್ನು ಜಯಿಸಿದೆ ಅದರಲ್ಲಿ 15 ಚಿನ್ನದ ಪದಕಗಳಿವೆ.
Story first published: Saturday, September 1, 2018, 14:45 [IST]
Other articles published on Sep 1, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications