ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್‌ಗೆ ಕಂಚಿನ ಪದಕ

ಜಕಾರ್ತಾ, ಆಗಸ್ಟ್ 27: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ನಂಬರ್ ಒನ್ ಶ್ರೇಯಾಂಕಿತೆ ತೈವಾನ್‌ನ ತಾಯ್ ತ್ಸು ಯಿಂಗ್ ವಿರುದ್ಧ 21-17, 21-14 ನೇರ ಸೆಟ್‌ಗಳಿಂದ ಸೈನಾ ಪರಾಭವಗೊಂಡರು.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಸೈನಾ ಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿದ್ದರು. ಆದರೆ, ಸೋಮವಾರದ ಪಂದ್ಯದಲ್ಲಿ ತ್ಸು ಯಿಂಗ್ ಅವರ ಚುರುಕಿನ ಆಟದ ಎದುರು ಸೈನಾ ಮಂಕಾದರು.
ಮೊದಲ ಸೆಟ್‌ನಲ್ಲಿ ಸೈನಾ ಕೊಂಚ ಪ್ರತಿರೋಧ ನೀಡಿದ್ದರು. ಎರಡನೆಯ ಸೆಟ್‌ನಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ಬಳಿಕ ಹೋರಾಟ ನಡೆಸಿ 12-13ರ ಮುನ್ನಡೆ ಪಡೆದುಕೊಂಡರು. ಆದರೆ, ತ್ಸು ಯಿಂಗ್, ಭಾರತದ ಆಟಗಾರ್ತಿಯನ್ನು ಕೆಲವೇ ಕ್ಷಣಗಳಲ್ಲಿ ಹಿಂದಿಕ್ಕಿದ್ದಲ್ಲದೆ, ಸತತವಾಗಿ ಪಾಯಿಂಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಅಲ್ಲಿಂದ ಸೈನಾ ಕೇವಲ ಒಂದು ಪಾಯಿಂಟ್ ಪಡೆಯಲು ಮಾತ್ರ ಶಕ್ತರಾದರು.
ಉತ್ತಮ ಲಯದಲ್ಲಿದ್ದ ಸೈನಾ ಅವರಿಂದ ನಿಕಟ ಪೈಪೋಟಿ ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆ ಹುಸಿಯಾಯಿತು. ಒಂದೆರಡು ಬಾರಿ ಮಾತ್ರ ಸೈನಾ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಉಳಿದಂತೆ ಎರಡೂ ಸೆಟ್‌ಗಳಲ್ಲಿ ತ್ಸು ಯಿಂಗ್ ಪ್ರಾಬಲ್ಯ ಮೆರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications