ಏಷ್ಯನ್ ಗೇಮ್ಸ್: ಪುರುಷರ ಆರ್ಚರಿ ಸ್ಪರ್ಧೆ: ಭಾರತಕ್ಕೆ ಬೆಳ್ಳಿ ಪದಕ

ಜಕಾರ್ತಾ, ಆಗಸ್ಟ್ 28: ಪುರುಷರ ಕಾಂಪೌಂಡ್ ಆರ್ಚರಿ ಸ್ಪರ್ಧೆಯ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಒಲಿದಿದೆ.
ದಕ್ಷಿಣ ಕೊರಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಶೂಟೌಟ್‌ನಲ್ಲಿ ಸೋಲು ಕಂಡಿತು. ರಜತ್, ಅಭಿಷೇಕ್ ಮತ್ತು ಅಮನ್ ಅವರು ತೀವ್ರ ಪೈಪೋಟಿಯ ನಡುವೆಯೂ ಚಿನ್ನ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡರು.
ಆರಂಭದಿಂದಲೂ ಭಾರತದ ಪುರುಷರು ಮುನ್ನಡೆ ಪಡೆದುಕೊಂಡಿದ್ದರು. ನಾಲ್ಕನೆಯ ಸೆಟ್‌ನಲ್ಲಿ ಭಾರತ 229-227 ಅಂಕದೊಂದಿಗೆ ಎರಡು ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ, ಅಂಕಗಳ ಪರಿಷ್ಕರಣೆ ಬಳಿಕ ಕೊರಿಯಾ ಎರಡು ಅಂಕ ಪಡೆದುಕೊಂಡು ಕೊರಿಯಾ 229-229ರ ಟೈ ಸಾಧಿಸಿತು.
ಹೀಗಾಗಿ ವಿಜೇತರನ್ನು ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. ಆದರೆ, ಶೂಟೌಟ್‌ನಲ್ಲಿ ಪುರುಷರ ತಂಡ ಹಿನ್ನಡೆ ಅನುಭವಿಸಿತು.
ಭಾರತದ ಮಹಿಳೆಯರ ತಂಡವೂ ದಕ್ಷಿಣ ಕೊರಿಯಾ ವಿರುದ್ಧ ಫೈನಲ್‌ನಲ್ಲಿ ನಿಕಟ ಪೈಪೋಟಿ ನೀಡಿ ಸೋಲು ಅನುಭವಿಸುವ ಮೂಲಕ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
Story first published: Tuesday, August 28, 2018, 13:57 [IST]
Other articles published on Aug 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications