
ಜಕಾರ್ತಾ, ಆಗಸ್ಟ್ 28: ಭಾರತದ ಮಹಿಳಾ ಬಿಲ್ಲು ತಂಡ ಆರ್ಚರಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ.
ಮಸ್ಕನ್ ಕಿರಾರ್, ಮಧುಮಿತಾ ಮತ್ತು ಜ್ಯೋತಿ ಅವರನ್ನು ಒಳಗೊಂಡ ತಂಡ ಕಾಂಪೌಂಡ್ ವಿಮೆನ್ಸ್ ಆರ್ಚರಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ 228-231 ಸೋಲು ಅನುಭವಿಸಿತು.
ಆರಂಭದಲ್ಲಿಯೂ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಎರಡೂ ತಂಡಗಳು ಸಮ ಅಂಕ ಸಾಧಿಸುತ್ತಿದ್ದರಿಂದ ಪಂದ್ಯ ಹೆಚ್ಚು ರೋಚಕತೆ ಮೂಡಿಸಿತ್ತು. ಆದರೆ, ನಾಲ್ಕನೆಯ ಸುತ್ತಿನ ಕೊನೆಯಲ್ಲಿ ಭಾರತದ ವನಿತೆಯರು ಗುರಿ ತಪ್ಪಿದರು.
ನಿಖರವಾಗಿ ಗುರಿ ಇಡುವುದರಲ್ಲಿ ಕೊಂಚ ಎಡವಿದ್ದರಿಂದ ಕೆಲವು ಅಂಕಗಳನ್ನು ತಪ್ಪಿಸಿಕೊಂಡರು. ಕೊರಿಯಾದ ಆಟಗಾರ್ತಿಯರು ಕೂಡ ಕೊನೆಯಲ್ಲಿ ಏಕಾಗ್ರತೆ ಕಳೆದುಕೊಂಡರೂ ಭಾರತ ತಂಡಕ್ಕಿಂತ ಮೂರು ಅಂಕಗಳ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.