ಏಷ್ಯನ್ ಗೇಮ್ಸ್ 2018: ಪುರುಷರ 1500 ಮೀ.ನಲ್ಲಿ ಜಿನ್ಸನ್ ಚಾಂಪಿಯನ್

ಜಕಾರ್ತಾ, ಆಗಸ್ಟ್ 30: ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಅಥ್ಲೀಟ್ ಜಿನ್ಸನ್ ಜಾನ್ಸನ್ ಬಂಗಾರ ಗೆದ್ದಿದ್ದಾರೆ. ಪುರುಷರ 1500 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ ಚಾಂಪಿಯನ್ ಆಗಿ ಮೂಡಿ ಬಂದರು. ಮತ್ತೊಬ್ಬ ಸ್ಪರ್ಧಿ ಮನ್ಜೀತ್ ಸಿಂಗ್ ನಾಲ್ಕನೇ ಸ್ಥಾನಿಗರಾಗಿ ಓಟ ಮುಗಿಸಿದರು.
ಆಗಸ್ಟ್ 30ರ ಗುರುವಾರ ನಡೆದ ಪುರುಷರ 1500 ಮೀಟರ್ ಓಟದಲ್ಲಿ ಜಿನ್ಸನ್ ಬಂಗಾರಕ್ಕೆ ಕೊರಳೊಡ್ಡಿದರು. 800 ಮೀಟರ್ ಓಟದಲ್ಲಿ ಜಿನ್ಸನ್ ಬೆಳ್ಳಿ ಗೆದ್ದರೆ, ಮನ್ಜೀತ್ ಚಿನ್ನ ಗೆದ್ದಿದ್ದರು. ಆದರೆ 1500 ಓಟದಲ್ಲಿ ಮಾತ್ರ ಮನ್ಜೀತ್ ಪದಕ ಪಡೆಯದೆ ನಾಲ್ಕನೇ ಸ್ಥಾನಿಗರಾದರು.
ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅಥ್ಲೆಟಿಕ್ಸ್ ವಿಭಾಗ ಭರ್ಜರಿ ಪಾರಮ್ಯ ಮೆರೆದಿದೆ. ಜಿನ್ಸನ್ ಬಂಗಾರವನ್ನು ಸೇರಿಸಿ ಭಾರತ ಒಟ್ಟು 57 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕಳೆದ ಬಾರಿ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟು 57 ಪದಕಗಳನ್ನು ಗೆದ್ದಿತ್ತು.
Story first published: Thursday, August 30, 2018, 18:59 [IST]
Other articles published on Aug 30, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications