ಏಷ್ಯನ್ ಗೇಮ್ಸ್ 2018: ಕುರಷ್ ನಲ್ಲಿ ಕಂಚು ಗೆದ್ದ ಕನ್ನಡತಿ ಮಲಪ್ರಭಾ

ಜಕಾರ್ತಾ, ಆಗಸ್ಟ್ 28: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚು ಕನ್ನಡತಿ ಪಾಲಾಗಿದೆ. ಮಹಿಳಾ 52 ಕೆಜಿ ವಿಭಾಗದ ಕುರಷ್ ಸಮರಕಲೆಯಲ್ಲಿ ಮಲಪ್ರಭ ಯಲ್ಲಪ್ಪ ಜಾಧವ್ ಕಂಚಿನ ಪದಕ ತನ್ನದಾಗಿಸಿದ್ದಾರೆ. 4X400 ಮೀ. ಮಿಶ್ರ ರಿಲೇಯಲ್ಲೂ ಕನ್ನಡತಿ ಎಂಆರ್ ಪೂವಮ್ಮ ಬೆಳ್ಳಿ ಜಯಿಸಿದ್ದಾರೆ.
ಮಂಗಳವಾರ (ಆಗಸ್ಟ್ 28) ನಡೆದ 52 ಕೆಜಿ ಮಹಿಳಾ ಕುರಷ್ ಅಂತಿಮ 16 ಸುತ್ತಿನ ಪಂದ್ಯದಲ್ಲಿ ಭಾರತದ ಮಲಪ್ರಭಾ ಅವರು ತುರ್ಕಮೆನಿಸ್ತಾನದ ಸಪರೋವಾ ಅವರನ್ನು ಸೋಲಿಸಿ ಕಂಚು ಗೆದ್ದಿದ್ದರು. ಮಲಪ್ರಭಾ ಅವರು ಮೂಲತಃ ಕರ್ನಾಟಕದ ಬೆಳಗಾವಿ ತಾಲೂಕಿನ ತುರಮರಿ ಗ್ರಾಮದವರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಮಲಪ್ರಭಾ, ತ್ರಿವೇಣಿ ಸಿಂಗ್ ಮತ್ತು ಜಿತೇಂದ್ರ ಸಿಂಗ್ ಅವರಿಂದ ಸಮರಕಲೆಯಾದ ಕುರಷ್ ಅನ್ನು ಅಭ್ಯಾಸ ಮಾಡಿದ್ದರು. ಏಷ್ಯನ್ ಗೇಮ್ಸ್ 10ನೇ ದಿನ ಎರಡು ಪದಕಗಳು ಕರ್ನಾಟಕಕ್ಕೆ ಲಭಿಸಿವೆ. ಒಂದು ಮಲಪ್ರಭಾ ಅವರ ಕಂಚಾದರೆ, ಕೊಡಗಿನ ಗೋಣಿಕೊಪ್ಪದವರಾದ ಎಂಆರ್ ಪೂವಮ್ಮ 4X400 ಮೀ. ಮಿಶ್ರ ರಿಲೇಯಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಮಲಪ್ರಭ ಕಂಚು ಜಯಿಸಿದ್ದು ತಿಳಿಯುತ್ತಲೇ ಹುಟ್ಟೂರು ತುರಮರಿಯಲ್ಲಿ ಗ್ರಾಮಸ್ಥರು ಪಠಾಕಿ ಸಿಡಿಸಿ ಸಂಭ್ರಮಿಸಿದ್ದು ಕಂಡುಬಂತು. ಮಂಗಳವಾರ ಇದೇ ವಿಭಾಗದ ಸ್ಪರ್ಧೆಯಲ್ಲಿ ಪಿಂಕಿ ಬಲ್ಹರಾ ಭಾರತಕ್ಕೆ ಬೆಳ್ಳಿ ತಂದಿದ್ದರು. ಕ್ರೀಡಾಕೂಟದ 10ನೇ ದಿನ ಮುಕ್ತಾಯಕ್ಕೆ ಭಾರತ ಭರ್ತಿ 50 ಪದಕಗಳೊಂದಿಗೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications