For Quick Alerts
ALLOW NOTIFICATIONS  
For Daily Alerts

ಏಷ್ಯನ್ 1500 ಮೀ.ನಲ್ಲಿ ಪದಕದಾಸೆ ಮೂಡಿಸಿದ ಮನ್ಜೀತ್, ಜಿನ್ಸನ್

Asian Games 2018: Manjit, Jinson qualifies for 1500m final

ಜಕಾರ್ತಾ, ಆಗಸ್ಟ್ 29: ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಭಾರತದ ಪಾಲಿಗೆ ಮಹತ್ತರ ಕ್ರೀಡಾಕೂಟ ವೆನಿಸಿದೆ. ವಿವಿಧ ಕ್ರೀಡಾಕೂಟಗಳಲ್ಲಿ ಭಾರತದಿಂದ ಐತಿಹಾಸಿಕ ದಾಖಲೆಗಳಾಗಿದ್ದು, ಅಪೂರ್ವ ಸಾಧನೆಗಳಿಗೂ ಭಾರತ ಗುರುತಿಸಿಕೊಂಡಿದ್ದು ಈ ಕ್ರೀಡಾಕೂಟದಲ್ಲೇ.

ಜಕಾರ್ತಾ-ಪಾಲೆಂಬಂಗ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದಿಂದ 11ನೇ ದಿನದಾಂತ್ಯಕ್ಕೆ ಬರೋಬ್ಬರಿ 14 ಪದಕಗಳು ಭಾರತದ ಪಾಲಾಗಿದ್ದವು. ಇದರಲ್ಲಿ 5 ಬಂಗಾರದ ಪದಕಗಳೂ ಸೇರಿದ್ದವು. ಈ ನಡುವೆ 1500 ಮೀ. ಓಟದಲ್ಲಿ ಮಿಡ್ಲ್ ಡಿಸ್ಟ್ಯಾಂಸ್ ರನ್ನರ್ ಗಳಾದ ಮನ್ಜೀತ್ ಸಿಂಗ್ ಮತ್ತು ಜಿನ್ಸನ್ ಮತ್ತೆರಡು ಪದಕದಾಸೆ ಮೂಡಿಸಿದ್ದಾರೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಆಗಸ್ಟ್ 29ರ ಬುಧವಾರ ನಡೆದ ಪುರುಷರ 1500 ಮೀ. ಓಟದ ಹೀಟ್ಸ್ ನಲ್ಲಿ ಮನ್ಜೀತ್ ಮತ್ತು ಜಿನ್ಸನ್ ಇಬ್ಬರೂ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಹೀಟ್ಸ್ ನಲ್ಲಿ ಮನ್ಜೀತ್ 3:50.59 ಸೆಕೆಂಡ್ ಗಳಲ್ಲಿ, ಜಿನ್ಸನ್ 3:46.50 ಸೆಕೆಂಡ್ ಗಳಲ್ಲಿ 1500 ಮೀ. ಓಟ ಮುಗಿಸಿದರು.

ಯಾಕೆ ಈ ಇಬ್ಬರು ಫೈನಲ್ ಪ್ರವೇಶಿಸಿದ ಕೂಡ್ಲೇ ಪದಕದ ಆಸೆ ಪಡಬೇಕೆಂದರೆ ಇಬ್ಬರೂ ಈ ಮೊದಲು ಇದೇ ಕ್ರೀಡಾಕೂಟದ 800 ಮೀ. ಓಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಹೀಟ್ಸ್ ನಲ್ಲೂ ಇಬ್ಬರೂ ಎಲ್ಲಾ ಶಕ್ತಿ ಉಪಯೋಗಿಸಿ ಓಡದೆ ಫೈನಲ್ ಗೆ ಆಯ್ಕೆಯಾಗಲು ತಕ್ಕಷ್ಟು ಶ್ರಮವಷ್ಟನ್ನೇ ವ್ಯಯಿಸಿದ್ದು ಗಮನಿಸಿದರೆ, ಫೈನಲ್ ನಲ್ಲಿ ಎರಡು ಪದಕ ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.

Story first published: Wednesday, August 29, 2018, 22:15 [IST]
Other articles published on Aug 29, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+