Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್: 800 ಮೀ.ನಲ್ಲಿ ಮನ್ಜೀತ್ ಗೆ ಬಂಗಾರ, ಜಿನ್ಸನ್ ಗೆ ಬೆಳ್ಳಿ ಪದಕ!

Asian Games 2018: Manjit Singh wins gold, Johnson wins silver

ಜಕಾರ್ತಾ, ಆಗಸ್ಟ್ 28: ಈ ಬಾರಿಯ ಏಷ್ಯನ್ ಗೇಮ್ಸ್ ಒಂದರ್ಥದಲ್ಲಿ ಭಾರತದ ಅಥ್ಲೆಟಿಕ್ಸ್ ವಿಭಾಗಕ್ಕೆ ಬಂಗಾರದ ಕ್ರೀಡಾಕೂಟವಾಗಿ ಪರಿಣಮಿಸಿದೆ. ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಮನ್ಜೀತ್ ಸಿಂಗ್ ಗೆ ಬಂಗಾರ ಒಲಿದರೆ, ಜಿನ್ಸನ್ ಜಾನ್ಸನ್ ಗೆ ಬೆಳ್ಳಿಯ ಪದಕ ದೊರೆತಿದೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಮಂಗಳವಾರ ನಡೆದ ಪುರುಷರ 800 ಮೀ. ಓಟದಲ್ಲಿ ಮನ್ಜೀತ್ ಮತ್ತು ಜಿನ್ಸನ್ ಇಬ್ಬರೂ ಬಂಗಾರದ ಓಟ ಓಡಿದರು. ಏಷ್ಯನ್ ಅಥ್ಲೆಟಿಕ್ಸ್ ನಲ್ಲಿ ಭಾರತ ಮಿಂಚಿದ ಅಪರೂಪದ ಕ್ಷಣವಿದು. 800 ಮೀ. ಓಟವನ್ನು ಮನ್ಜೀತ್ 1:46.15 ಸೆಕೆಂಡ್ ಗಳಲ್ಲಿ ಮುಗಿಸಿ ಚಿನ್ನ ಬಾಚಿಕೊಂಡರು. ಜಿನ್ಸನ್ 1:46.35 ಕಾಲಾವಧಿಯಲ್ಲಿ ಬೆಳ್ಳಿಗೆ ಕೊರಳೊಡ್ಡಿದರು.

ಭಾರತದ ಮಿಶ್ರ ರಿಲೇ ತಂಡವೂ ಚಿನ್ನ ಗೆಲ್ಲುವ ನಿರೀಕ್ಷೆಯಿದೆ. ಮಿಶ್ರ ರಿಲೇ ತಂಡದಲ್ಲಿ ಇದೇ ಏಷ್ಯನ್ ಗೇಮ್ಸ್ ನ ಪುರುಷರ 400 ಮೀ. ಓಟದಲ್ಲಿ ಬೆಳ್ಳಿ ಗೆದ್ದ ಮೊಹಮ್ಮದ್ ಅನಾಸ್, ಪ್ರತಿಭಾನ್ವಿತ ಓಟಗಾರ್ತಿ-ಕನ್ನಡತಿ ಎಂಆರ್ ಪೂವಮ್ಮ, ಅರೋಕಿಯಾ ರಾಜೀವ್ ಮತ್ತು ಏಷ್ಯನ್ ಮಹಿಳಾ ವಿಭಾಗದ 400 ಮೀ. ಬೆಳ್ಳಿ ವಿಜೇತೆ ಹಿಮಾದಾಸ್ ಕೂಡ ಸೇರಿಕೊಂಡಿದ್ದಾರೆ.

Story first published: Tuesday, August 28, 2018, 18:43 [IST]
Other articles published on Aug 28, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+