2018ರ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾತಾರೆಗಳು ಇವರು
ಪ್ರಸ್ತುತ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಏಷ್ಯಾದ ರಾಷ್ಟ್ರಗಳು ಸಿದ್ಧವಾಗುತ್ತಿದೆ. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಬಳಿಕ ಏಷ್ಯಾದ ರಾಷ್ಟ್ರಗಳ ಪಾಲಿಗೆ ಮತ್ತೊಂದು ಕ್ರೀಡಾಕೂಟ ಇದಾಗಿದ್ದು ಇಲ್ಲಿ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಕೌಶಲ್ಯವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವ ಅವಕಾಶ ಇಲ್ಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತ ಈ ಹಿಂದಿಗಿಂತ ಉತ್ತಮ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡಿದೆ.
ಇನ್ನು ಕಳೆದ ಬಾರಿ ನಡೆದ 18ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತ ಉತ್ತಮ ಸಾಧನೆ ಮಾಡಿತ್ತು. 16 ಚಿನ್ನದ ಪದಕ, 23 ಬೆಳ್ಳಿ ಸೇರಿದಂತೆ ಒಟ್ಟು 70 ಪದಕಗಳನ್ನು ಗೆದ್ದಿದ್ದ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿಯೂ ಸಾಕಷ್ಟು ನಿರೀಕ್ಷೆಗಳು ಭಾರತದ ಕ್ರೀಡಾಪಟುಗಳ ಮೇಲೆ ಇದೆ.
ಇನ್ನು ಕಳೆದ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಪದಕವನ್ನು ಗೆದ್ದ ಕ್ರೀಡಾಪಟುಗಳ ಪೈಕಿ ಕರ್ನಾಟಕದ ಕ್ರೀಡಾಪಟುಗಳು ಎಷ್ಟು? ಯಾರೆಲ್ಲಾ ಈ ಪ್ರತಿಷ್ಠಿತ ಸಾಧನೆ ಮಾಡಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಎಂಆರ್ ಪೂವಮ್ಮ: ಚಿನ್ನ ಮತ್ತು ಬೆಳ್ಳಿ ಪದಕ
ದಕ್ಷಿಣ ಕನ್ನಡ ಮೂಲದ ಎಂಆರ್ ಪೂವಮ್ಮ 2018ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ರಿಲೇ ಮತ್ತು ಮಿಶ್ರ ಲಿಲೇ ವಿಭಾಗವನ್ನು ಪ್ರತಿನಿಧಿಸಿದ್ದರು. ಈ ಎರಡು ವಿಭಾಗದಲ್ಲಿಯೂ ಪದಕವನ್ನು ಗೆದ್ದಿದ್ದಾರೆ ಎಂಎಸ್ ಪೂವಮ್ಮ. ಮಹಿಳೆಯರ ರಿಲೇಯಲ್ಲಿ ಚಿನ್ನದ ಪದಕ ಮತ್ತು ಮಿಶ್ರ ರಿಲೇ ವಿಭಾಗದಲ್ಲಿ ಬಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಎರಡು ಪದಕಗಳನ್ನು ಗೆಲ್ಲುವಲ್ಲಿ ಈ ಕನ್ನಡತಿ ಪ್ರಮುಖ ಪಾತ್ರವಹಿಸಿದ್ದರು.
ರೋಹನ್ ಬೋಪಣ್ಣ: ಚಿನ್ನದ ಪದಕ
ಕಳೆದ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಕರ್ನಾಟಕ ಮೂಲದ ಮತ್ತೋರ್ವ ಕ್ರೀಡಾಪಟು ಅಂತಾರಾಷ್ಟ್ರೀಯ ಟೆನಿಸ್ನಲ್ಲಿ ಹೆಮ್ಮೆಯ ಆಟಗಾರ ಎನಿಸಿರುವ ರೋಹನ್ ಬೋಪಣ್ಣ. ಮಡಿಕೇರಿ ಮೂಲದ ರೋಹನ್ ಬೋಪಣ್ಣ ಪುರುಷರ ಡಬಲ್ಸ್ ವಿಭಾಗದಲ್ಲಿ ದಿವಿಜ್ ಸರಣ್ ಜೊತೆಗೂಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.

ಮಲಪ್ರಭಾ ಯಲ್ಲಪ್ಪ ಜಾಧವ್: ಕಂಚಿನ ಪದಕ
ಮಧ್ಯ ಏಷ್ಯಾದ ಕುಸ್ತಿಯ ಮಾದರಿಯಾದ ಕುರಶ್ನಲ್ಲಿ ಬೆಳಗಾವಿ ಮೂಲದ ಮಲಪ್ರಭಾ ಯಲ್ಲಪ್ಪ ಜಾಧವ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಬೆಳಗಾವಿಯ ತುರ್ಮುರಿ ಪ್ರದೇಶದವರಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಶ್ರೇಷ್ಠ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಭಾರತದವರೇ ಆದ ಪಿಂಕಿ ಬಲ್ಹಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಉಷಾ ರಾಣಿ: ಬೆಳ್ಳಿ ಪದಕ
ಮಹಿಳಾ ಕಬಡ್ಡಿ ತಂಡದ ಭಾಗವಾಗಿ ಬೆಳ್ಳಿ ಪದಕವನ್ನು ಗೆದ್ದುಕೊಂಡ ಕರ್ನಾಟಕದ ಕ್ರೀಡಾಪಟು ಉಷಾ ರಾಣಿ. ದೊಡ್ಡ ಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಯಲ್ಲಿ ಈ ಸಾಧನೆ ಮಾಡಿದ್ದಾರೆ ಉಷಾ ರಾಣಿ. ಇವರ ಸೋದರಿ ದಿವ್ಯಶ್ರೀ ಕೂಡ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ.

ಫವಾದ್ ಮಿರ್ಜಾ: ಬೆಳ್ಳಿ ಪದಕ
ಬೆಂಗಳೂರಿನ ಫವಾದ್ ಮಿರ್ಜಾ 1982ರ ಬಳಿಕ ಈಕ್ವೆಸ್ಟ್ರಿಯನ್(ಕುದುರೆ ಸವಾರಿ)ನಲ್ಲಿ ಭಾರತದಲ್ಲಿ ವೈಯಕ್ತಿಕ ಪದಕ ಗೆದ್ದುಕೊಟ್ಟ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 2018ರ ವೇಳೆಗೆ 26ರ ಹರೆಯದವರಾಗಿದ್ದ ಫಾವದ್ ಎರಡನೇ ಸ್ಥಾನವನ್ನು ಪಡೆದು ಬೆಳ್ಳಿಪದಕ ಗೆದ್ದಿಕೊಂಡಿದ್ದರು. ಜಪಾನ್ನ ಒಯಿವಾ ಯಶಿಯಾಕಿ ಈ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications