ಏಷ್ಯನ್ ಗೇಮ್ಸ್: ಕುರಷ್ ನಲ್ಲಿ ಪಿಂಕಿಗೆ ಬೆಳ್ಳಿ, ಮಲಪ್ರಭಾಗೆ ಕಂಚಿನ ಗೌರವ

ಜಕಾರ್ತಾ, ಆಗಸ್ಟ್ 28: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕುರಷ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು ಭಾರತದ ಪಾಲಾಗಿವೆ. ಮಹಿಳಾ ವಿಭಾಗದಲ್ಲಿ ಪಿಂಕಿ ಬಲ್ಹರಾ ಭಾರತಕ್ಕೆ ಬೆಳ್ಳಿ ತಂದರೆ, ಮಲಪ್ರಭಾ ಜಾಧವ್ ಕಂಚಿನ ಪದಕ ಗೆದ್ದಿದ್ದಾರೆ.
ಮಂಗಳವಾರ ನಡೆದ ಮಹಿಳಾ ಕುರಷ್ 52 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಪಿಂಕಿ ಬೆಳ್ಳಿ ಪದಕ ಗೆದ್ದರು. ಮಲಪ್ರಭಾ ಕಂಚನ್ನು ಸಂಭ್ರಮಿಸಿದರು. ಭಾರತದ ಪದಕ ಖಾತೆಯಲ್ಲಿ ಇಲ್ಲಿಗೆ 49 ಪದಕಗಳು ಸೇರ್ಪಡೆಗೊಂಡಿದ್ದು, ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಮಾನ್ಜೀತ್ ಸಿಂಗ್ ಗೆ ಬಂಗಾರ ಒಲಿದರೆ, ಜಿನ್ಸನ್ ಜಾನ್ಸನ್ ಗೆ ಬೆಳ್ಳಿಯ ಪದಕ ದೊರೆತಿತ್ತು. ಏಷ್ಯನ್ ಗೇಮ್ಸ್ 10ನೇ ದಿನ ಮಾನ್ಜೀತ್, ಜಾನ್ಸನ್ ಇಬ್ಬರೂ ಅಥ್ಲೆಟಿಕ್ ವಿಭಾಗ ಮಿನುಗುವಂತೆ ನೋಡಿಕೊಂಡಿದ್ದರು.
Story first published: Tuesday, August 28, 2018, 19:20 [IST]
Other articles published on Aug 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications