Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಕುದುರೆ ಸವಾರಿ ವೈಯಕ್ತಿಕ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಅನುಷ್ ಅಗರ್ವಾಲಾ

ಕುದುರೆ ಸವಾರಿ (ಡ್ರೆಸ್ಸೇಜ್) ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಅನುಷ್ ಅಗರ್ವಾಲಾ ಅವರು ಐತಿಹಾಸಿಕ ಕಂಚಿನ ಪದಕ ಗೆಲ್ಲುವ ಮೂಲಕ ಭಾರತವು ಹ್ಯಾಂಗ್‌ಝೌನಲ್ಲಿನ ಟಿಎಲ್ ಈಕ್ವೆಸ್ಟ್ರಿಯನ್ ಸೆಂಟರ್‌ನಲ್ಲಿ ಇತಿಹಾಸ ರಚಿಸಿತು.

ಗುರುವಾರ, ಸೆಪ್ಟೆಂಬರ್ 28ರಂದು ನಡೆದ 2023ರ ಏಷ್ಯನ್ ಗೇಮ್ಸ್ 15 ಸದಸ್ಯರ ಫೈನಲ್‌ನಲ್ಲಿ 24 ವರ್ಷದ ಅನುಷ್ ಅಗರ್ವಾಲಾ ಕುದುರೆ ಎಟ್ರೋ ಪ್ರಭಾವಶಾಲಿ ಪ್ರದರ್ಶನ ನೀಡಿತು.

Asian Games 2023: Anush Agarwalla Wins Bronze Medal in Equestrian dressage

ಏಷ್ಯನ್ ಗೇಮ್ಸ್‌ನ ಡ್ರೆಸ್ಸೇಜ್ (ಕುದುರೆ ಸವಾರಿ) ವೈಯಕ್ತಿಕ ಫೈನಲ್‌ನಲ್ಲಿ ಅನುಷ್ ಅಗರ್ವಾಲಾ ಕಂಚಿನ ಪದಕ ಗೆದ್ದಿದ್ದು, ಈ ವಿಭಾಗದಲ್ಲಿ ಭಾರತ ಪದಕ ಗೆದ್ದಿರುವುದು ಇದೇ ಮೊದಲ ನಿದರ್ಶನವಾಗಿದೆ.

ಭಾರತದ ಕುದುರೆ ಸವಾರಿ (ಡ್ರೆಸ್ಸೇಜ್) ತಂಡವು ಹ್ಯಾಂಗ್‌ಝೌನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಎರಡು ದಿನಗಳ ನಂತರ ಕೋಲ್ಕತ್ತಾದ ರೈಡರ್‌ನಿಂದ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಸಾಧನೆ ಬಂದಿದೆ.

Asian Games 2023: Anush Agarwalla Wins Bronze Medal in Equestrian dressage

ಮಂಗಳವಾರದಂದು ಭಾರತದ ಹೃದಯ ಛೇಡಾ, ಅನುಷ್ ಅಗರ್ವಾಲಾ, ದಿವ್ಯಾಕೃತಿ ಸಿಂಗ್ ಮತ್ತು ಸುದೀಪ್ತಿ ಹಜೇಲಾ ಅವರ ತಂಡ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ದೇಶಕ್ಕೆ ಮೊದಲ ಡ್ರೆಸ್ಸೇಜ್ ಪದಕವನ್ನು ಗೆದ್ದುಕೊಟ್ಟರು ಮತ್ತು ಇದು ಐತಿಹಾಸಿಕ ಚಿನ್ನದ ಪದಕವಾಗಿತ್ತು.

ಅನುಷ್ ಅಗರ್ವಾಲಾ ತಂಡ ಫೈನಲ್‌ನಲ್ಲೂ ಮಿಂಚಿದ್ದು, ತಂಡದ ಕೊನೆಯ ರೈಡರ್ ಆಗಿ ಉತ್ತಮ ಪ್ರಯತ್ನದ ಮೂಲಕ ಭಾರತದ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದರು.

ಡ್ರೆಸ್ಸೇಜ್ ವೈಯಕ್ತಿಕ ಫೈನಲ್‌ನಲ್ಲಿ ತೀರ್ಪುಗಾರರನ್ನು ಮೆಚ್ಚಿಸಿದ ಅನುಷ್ ಅಗರ್ವಾಲಾ ಮತ್ತು ಎಟ್ರೋ ಕುದುರೆ ಸಂಗೀತಕ್ಕೆ ಪರಿಪೂರ್ಣ ಸಿಂಕ್‌ನಲ್ಲಿ ಸಂಯೋಜಿಸಲ್ಪಟ್ಟರು. ಜನಪ್ರಿಯ ಸಾಂಗ್ ಜೈ ಹೋ, ಫೈನಲ್‌ನಲ್ಲಿ ಭಾರತೀಯ ಪ್ರದರ್ಶನದ ಸಮಯದಲ್ಲಿ ನುಡಿಸಲಾದ ಹಾಡುಗಳಲ್ಲಿ ಒಂದಾಗಿದೆ.

ಫೈನಲ್‌ನಲ್ಲಿ ಎರಡನೇ ಕೊನೆಯ ರೈಡರ್ ಆಗಿದ್ದ ಅನುಷ್ ಅಗರ್ವಾಲಾ ಉತ್ತಮ ಪ್ರದರ್ಶನದೊಂದಿಗೆ ಪದಕದ ಸ್ಥಾನಕ್ಕೆ ಮುನ್ನಡೆದರು. ಅನುಷ್ ಮತ್ತು ಅವರ ಎಟ್ರೊ ಕುದುರೆಗೆ 69.900 ತಾಂತ್ರಿಕ ಶೇಕಡಾವಾರು ಅಂಕಗಳನ್ನು ಗಳಿಸಿದರು.

ಅನುಷ್ ಅಗರ್ವಾಲಾ ಅವರು ಮತ್ತು ಎಟ್ರೊ ಗುರುವಾರ ಮೈದಾನದಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಪ್ರಭಾವ ಬೀರಿದ್ದರಿಂದ ಅಗ್ರ ಎರಡು ರೈಡರ್‌ಗಳು ಕಾತರದಿಂದ ಕಾಯುವಂತೆ ಮಾಡಿದರು.

ಮಲೇಷ್ಯಾದ ಮಹಮದ್ ಬಿನ್ ಫಾಥಿಲ್ ಮತ್ತು ಅವರ ಕುದುರೆ ರೋಸೆನ್‌ಸ್ಟೋಲ್ಜ್ ಶೇಕಡಾ 75.780 ಸ್ಕೋರ್‌ನೊಂದಿಗೆ ಚಿನ್ನ ಗೆದ್ದರೆ, ಹಾಂಗ್ ಕಾಂಗ್‌ನ ವಿಂಗ್ ಯಿಂಗ್ ಮತ್ತು ಕುದುರೆ ಜಾಕಿ ಕ್ಲಬ್ ಹುಯಿತಾರಿಯನ್ ಒಟ್ಟು ಶೇಕಡಾ 73.450 ಸ್ಕೋರ್ ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಜಪಾನ್‌ನ ಕುರೊಡಾ ರ್ಯುನೊಸುಕೆ ಮತ್ತು ಅವರ ಕುದುರೆ ಬೆಲ್ಟ್ರೆ ಡಿಇಎಸ್ ಪ್ರಭಾವಿ 72.405 ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದರು. ಅವರು ಕೊನೆಯ ರೈಡರ್ ಆಗಿದ್ದರು ಮತ್ತು ಮೊದಲ ಮೂವರು ಫಲಿತಾಂಶಗಳು ಬರುವಾಗ ಕಾತರದಿಂದ ಕಾಯುತ್ತಿದ್ದರು.

Story first published: Thursday, September 28, 2023, 16:33 [IST]
Other articles published on Sep 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+