For Quick Alerts
ALLOW NOTIFICATIONS  
For Daily Alerts

Asian Games 2023: ಏಷ್ಯನ್ ಗೇಮ್ಸ್ ಇತಿಹಾಸ ಮತ್ತು ಭಾರತದ ಪದಕಗಳ ಸಾಧನೆ

ಏಷ್ಯನ್ ಗೇಮ್ಸ್‌ನ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿಯ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದ ಭಾರತವು, 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದೆ.

1951ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 51 ಪದಕಗಳನ್ನು ಬಾಚಿಕೊಂಡಿತ್ತು. ಅದರಲ್ಲಿ 15 ಚಿನ್ನ, 16 ಬೆಳ್ಳಿ ಮತ್ತು 20 ಕಂಚಿನ ಪದಕಗಳು ಸೆರಿದ್ದವು. ಜಪಾನ್‌ (60 ಪದಕಗಳು) ನಂತರ ಎರಡನೇ ಸ್ಥಾನ ಗಳಿಸಿತ್ತು. ಇದು ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಮುಕ್ತಾಯವಾಗಿದೆ.

Asian Games 2023: Asian Games History And Indias Medal Record

ನವದೆಹಲಿಯಲ್ಲಿ ನಡೆದ 1951ರ ಏಷ್ಯನ್ ಗೇಮ್ಸ್‌ನಲ್ಲಿ ಈಜುಗಾರ ಸಚಿನ್ ನಾಗ್ 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯನ್ನು ಗೆದ್ದು ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.

ಅದೇ ವರ್ಷದ ಏಷ್ಯನ್ ಗೇಮ್ಸ್‌ನಲ್ಲಿ ರೋಶನ್ ಮಿಸ್ತ್ರಿ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಪಡೆದಾಗ, ಏಷ್ಯನ್ ಗೇಮ್ಸ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗರಿಮೆಗೆ ಪಾತ್ರರಾದರು.

ಅಂದಿನಿಂದ ಈವರೆಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 155 ಚಿನ್ನ, 201 ಬೆಳ್ಳಿ ಮತ್ತು 316 ಕಂಚು ಸೇರಿದಂತೆ 672 ಪದಕಗಳನ್ನು ಗೆದ್ದುಕೊಂಡಿದೆ. ಪ್ರತಿ ಆವೃತ್ತಿಯಲ್ಲಿ ಭಾರತ ಚಿನ್ನದ ಪದಕದೊಂದಿಗೆ ಮರಳಿದೆ ಮತ್ತು ಈ ಏಷ್ಯನ್ ಗೇಮ್ಸ್‌ನಲ್ಲಿ ಐದನೇ ಅತ್ಯಂತ ಯಶಸ್ವಿ ರಾಷ್ಟ್ರವಾಗಿದೆ.

ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧಿಗಳು ಅತ್ಯುತ್ತಮ ಸಾಧನೆ ತೋರಿಸಿದ್ದಾರೆ. ಏಷ್ಯಾದ ಅತಿ ದೊಡ್ಡ ಕ್ರೀಡಾಕೂಟದಲ್ಲಿ 18 ವಿಭಾಗಗಳಲ್ಲಿ 254 ಪದಕಗಳನ್ನು ಗೆದ್ದಿದ್ದಾರೆ.

2023ರ ಸೆಪ್ಟೆಂಬರ್ 23ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2022ರಲ್ಲಿ ಭಾರತವು ಕಬಡ್ಡಿ, ಕ್ರಿಕೆಟ್, ಹಾಕಿ, ಕುಸ್ತಿ ಸೇರಿದಂತೆ ವೈಯಕ್ತಿಕ ವಿಭಾಗದಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಲು ಉತ್ಸುಕವಾಗಿದೆ.

ಇದೇ ವೇಳೆ ಭಾರತದ ಕಬಡ್ಡಿ ತಂಡ ಅತ್ಯಂತ ಪ್ರಭಾವಶಾಲಿ ಪ್ರದರ್ಶನ ನೀಡಿದೆ. 1990ರ ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಪ್ರಾರಂಭವಾದಾಗಿನಿಂದ ಎಂಟು ಆವೃತ್ತಿಗಳಲ್ಲಿ ಏಳು ಬಾರಿ ಚಿನ್ನಕ್ಕೆ ಕೊರಳೊಡ್ಡಿದೆ. ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2018ರಲ್ಲಿ ಇರಾನ್ ವಿರುದ್ಧದ ಏಕೈಕ ಸೋಲು ಅನುಭವಿಸಿದೆ.

Story first published: Monday, July 10, 2023, 19:47 [IST]
Other articles published on Jul 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+