Asian Games 2023: ಅರುಣಾಚಲ ಪ್ರದೇಶದ 3 ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿದ ಚೀನಾ; ಠಾಕೂರ್ ಚೀನಾ ಪ್ರವಾಸ ರದ್ದು
ಶನಿವಾರ, ಸೆಪ್ಟೆಂಬರ್ 23ರಂದು ಹ್ಯಾಂಗ್‌ಝೌನಲ್ಲಿ ಅಧಿಕೃತವಾಗಿ ಆರಂಭವಾಗಲಿರುವ 19ನೇ ಏಷ್ಯನ್ ಗೇಮ್ಸ್ ಕ್ಷಣಗಣನೆ ಶುರುವಾಗಿದೆ. ಆದರೆ, ಉದ್ಘಾಟನಾ ಸಮಾರಂಭಕ್ಕೂ ಮುನ್ನ ಚೀನಾ ಎಡವಟ್ಟು ಮಾಡಿಕೊಂಡಿದೆ.
ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳಿಗೆ ಚೀನಾ ನಿಯಮಿತ ವೀಸಾ ನಿರಾಕರಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಭಾರತದ ಮೂವರು ವುಶು ಆಟಗಾರರಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರುಗೆ ಚೀನಾ ಪ್ರವೇಶವನ್ನು ನಿರಾಕರಿಸಲಾಗಿದೆ. ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಏಷ್ಯನ್ ಗೇಮ್ಸ್‌ಗಾಗಿ ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಇತರ 7 ಆಟಗಾರರು ಮತ್ತು ಸಿಬ್ಬಂದಿಯನ್ನು ಒಳಗೊಂಡಿರುವ ಭಾರತೀಯ ವುಶು ತಂಡದ ಉಳಿದವರು ಹಾಂಗ್ ಕಾಂಗ್‌ಗೆ ಹಾರಿದ್ದು, ಅಲ್ಲಿಂದ ಚೀನಾದ ಹ್ಯಾಂಗ್‌ಝೌಗೆ ವಿಮಾನ ಏರಿದ್ದಾರೆ.
ಭಾರತ ವುಶು ತಂಡದ ಮೂವರು ಆಟಗಾರರು ಅರುಣಾಚಲ ಪ್ರದೇಶದವರಾಗಿದ್ದಾರೆ. ಅವರಲ್ಲಿ ಒಬ್ಬರು ಮಾನ್ಯತೆ ಪಡೆದಿದ್ದರು ಮತ್ತು ಇಬ್ಬರು ಮಾನ್ಯತೆಗಾಗಿ ಕಾಯುತ್ತಿದ್ದರು. ಆದರೆ ತಂಡವು ಸೆಪ್ಟೆಂಬರ್ 20ರಂದು ಬುಧವಾರ ಚೀನಾಕ್ಕೆ ತೆರಳಿದ ನಂತರ, ಬೋರ್ಡಿಂಗ್‌ಗೆ ಸರಿಯಾದ ಅನುಮತಿ ಇಲ್ಲದ ಕಾರಣ ಅವರನ್ನು ವಿಮಾನವನ್ನು ಹತ್ತಲು ಅನುಮತಿ ನೀಡದೆ ವಾಪಸ್ ಕಳುಹಿಸಿದೆ.
ಹೊಸದಿಲ್ಲಿಯ ಜೆಎಲ್‌ಎನ್ ಸ್ಟೇಡಿಯಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ಗೆ ಆಟಗಾರರನ್ನು ಮರಳಿ ಕರೆತರಲಾಯಿತು.
ನಾವು ಏಷ್ಯನ್ ಗೇಮ್ಸ್‌ನ ಸಂಘಟನಾ ಸಮಿತಿಯೊಂದಿಗೆ ಮತ್ತು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಜೊತೆಗೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ವುಶು ತಂಡದೊಂದಿಗೆ ಚೀನಾದ ಉನ್ನತ ಮೂಲವು ತಿಳಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆ ನಮಗಿದೆ ಎಂದಿದೆ.
"ಚೀನಾದ ಈ ಕ್ರಮದ ವಿರುದ್ಧ ನಮ್ಮ ಪ್ರತಿಭಟನೆಯ ಸಂಕೇತವಾಗಿ, ಭಾರತದ ಮಾಹಿತಿ, ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಏಷ್ಯನ್ ಕ್ರೀಡಾಕೂಟಕ್ಕಾಗಿ ಚೀನಾಕ್ಕೆ ತಮ್ಮ ನಿಗದಿತ ಭೇಟಿಯನ್ನು ರದ್ದುಗೊಳಿಸಿದ್ದಾರೆ. ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಸರ್ಕಾರ ಹೊಂದಿದೆ," ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ (ಎಂಇಎ) ವಕ್ತಾರರು ಹೇಳಿದರು.
ಚೀನಾದ ಅಧಿಕಾರಿಗಳು ತನ್ನ ಆಟಗಾರರನ್ನು ಈ ರೀತಿ ನಡೆಸಿಕೊಳ್ಳುವುದನ್ನು ಭಾರತ ತಿರಸ್ಕರಿಸುತ್ತದೆ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ.
"ಚೀನಾದ ಅಧಿಕಾರಿಗಳು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ಗೆ ಮಾನ್ಯತೆ ಮತ್ತು ಪ್ರವೇಶವನ್ನು ನಿರಾಕರಿಸುವ ಮೂಲಕ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳ ವಿರುದ್ಧ ಉದ್ದೇಶಪೂರ್ವಕ ತಾರತಮ್ಯ ಮಾಡುತ್ತಿದೆ ಎಂದು ಭಾರತ ಸರ್ಕಾರವು ತಿಳಿದುಕೊಂಡಿದೆ," ಎಂದು ಹೇಳಿದೆ.
2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಆಯೋಜನಾ ಸಮಿತಿಯಿಂದ ಭಾಗವಹಿಸಲು ಅನುಮೋದಿಸಲಾದ ಅರುಣಾಚಲ ಪ್ರದೇಶದ ಇಬ್ಬರು ವುಶು ಆಟಗಾರರಾದ, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ತಮ್ಮ ಮಾನ್ಯತೆ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ, ಇದು ಚೀನಾಕ್ಕೆ ಪ್ರವೇಶಿಸಲು ವೀಸಾಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂವರು ಅಥ್ಲೀಟ್‌ಗಳು ಭಾನುವಾರ ನಡೆಯಲಿರುವ ವುಶು ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications