Asian Games: ಈವರೆಗೆ ಏಷ್ಯನ್ ಗೇಮ್ಸ್ ಆತಿಥ್ಯ ವಹಿಸಿದ ನಗರಗಳು
ಏಷ್ಯನ್ ಗೇಮ್ಸ್ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಕ್ಯಾಲೆಂಡರ್‌ನಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ಕ್ರೀಡಾಕೂಟವಾಗಿದೆ. ಇದು 1951ರಲ್ಲಿ ಚೊಚ್ಚಲ ಆವೃತ್ತಿಯನ್ನು ಆಯೋಜಿಸಲಾಯಿತು.
ಒಲಂಪಿಕ್ ಕ್ರೀಡಾಕೂಟದಂತೆ ಏಷ್ಯನ್ ಗೇಮ್ಸ್ ಕೂಡ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಾಂಗ್‌ನಲ್ಲಿ 2018ರ ಏಷ್ಯನ್ ಗೇಮ್ಸ್ 18ನೇ ಆವೃತ್ತಿಯಾಗಿದೆ.
ಏಷ್ಯನ್ ಗೇಮ್ಸ್ ಸಹ ಒಲಿಂಪಿಕ್ಸ್‌ನ ಕ್ರೀಡಾವನ್ನು ಅನುಸರಿಸುತ್ತದೆ. ಅಥ್ಲೆಟಿಕ್ಸ್ ಮತ್ತು ಈಜು ಪ್ರಮುಖ ಕ್ರೀಡೆಗಳಾಗಿದ್ದು, ಜೊತೆಗೆ ಆಗ್ನೇಯ ಏಷ್ಯಾದ ಸೆಪಕ್ ತಕ್ರಾ, ದಕ್ಷಿಣ ಏಷ್ಯಾದ ಕಬಡ್ಡಿ ಮತ್ತು ಪೂರ್ವ ಏಷ್ಯಾದ ವುಶುಗಳಂತಹ ಏಷ್ಯಾ ಖಂಡದ ವೈವಿಧ್ಯಮಯ ಕ್ರೀಡಾ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಭಾಗಗಳನ್ನು ಒಳಗೊಂಡಿದೆ.

ಏಷ್ಯನ್ ಕ್ರೀಡಾಕೂಟದ ಮೊದಲ ಆವೃತ್ತಿಯು ಮಾರ್ಚ್ 1951ರಲ್ಲಿ ನವದೆಹಲಿಯಲ್ಲಿ ನಡೆಯಿತು. ಎರಡನೆಯ ಮಹಾಯುದ್ಧದ ನಂತರದ ಪರಿಣಾಮವಾಗಿ, 1948ರ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಿಂದ ಜಪಾನ್ ದೇಶವನ್ನು ನಿರ್ಬಂಧಿಸಲಾಯಿತು.
1949ರಲ್ಲಿ ಏಷ್ಯನ್ ಗೇಮ್ಸ್ ಫೆಡರೇಶನ್ ಸಂಸ್ಥಾಪಕ ಸಭೆಗೆ ಜಪಾನ್ ಅನ್ನು ಆಹ್ವಾನಿಸಲಾಗಿಲ್ಲ. ಆದರೆ ಚೊಚ್ಚಲ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಜಪಾನ್‌ಗೆ ಅವಕಾಶ ನೀಡಲಾಯಿತು.
ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ 11 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಂದ ಒಟ್ಟು 489 ಕ್ರೀಡಾಪಟುಗಳು 12 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.
ಏಷ್ಯನ್ ಗೇಮ್ಸ್ ಆತಿಥ್ಯ ವಹಿಸಿದ ನಗರಗಳು:
1. ನವದೆಹಲಿ 1951: ಮೊದಲ ಏಷ್ಯನ್ ಗೇಮ್ಸ್‌ನಲ್ಲಿ 11 ದೇಶಗಳ 489 ಕ್ರೀಡಾಪಟುಗಳು ಭಾಗವಹಿಸಿದ್ದರು.
2. ಮನಿಲಾ 1954: ಎರಡನೇ ಏಷ್ಯನ್ ಗೇಮ್ಸ್‌ನಲ್ಲಿ 18 ದೇಶಗಳ 970 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
3. ಟೊಕಿಯೋ 1958: 16 ದೇಶಗಳ 1820 ಕ್ರೀಡಾಪಟುಗಳು
4. ಜಕಾರ್ತಾ 1962: 12 ದೇಶಗಳ 1460 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
5. ಬ್ಯಾಂಕಾಕ್ 1966: 16 ದೇಶಗಳ 1945 ಕ್ರೀಡಾಪಟುಗಳು
6. ಬ್ಯಾಂಕಾಕ್ 1970: 16 ದೇಶಗಳ 2400 ಕ್ರೀಡಾಪಟುಗಳು ಭಾಗಿ
7. ತೆಹೆರಾನ್ 1974: 19 ದೇಶಗಳ 3010 ಕ್ರೀಡಾಪಟುಗಳು
8. ಬ್ಯಾಂಕಾಕ್ 1978: 19 ದೇಶಗಳ 3842 ಕ್ರೀಡಾಪಟುಗಳು
9. ನವದೆಹಲಿ 1982: 23 ದೇಶಗಳ 3411 ಕ್ರೀಡಾಪಟುಗಳು
10. ಸಿಯೋಲ್ 1986: 22 ದೇಶಗಳ 4839 ಕ್ರೀಡಾಪಟುಗಳು
11. ಬೀಜಿಂಗ್ 1990: 36 ದೇಶಗಳ 6122 ಕ್ರೀಡಾಪಟುಗಳು
12. ಹಿರೋಶಿಮಾ 1994: 42 ದೇಶಗಳ 6828 ಕ್ರೀಡಾಪಟುಗಳು ಭಾಗಿ
13. ಬ್ಯಾಂಕಾಕ್ 1998: 41 ದೇಶಗಳ 6554 ಕ್ರೀಡಾಪಟುಗಳು ಭಾಗಿ
14. ಬೂಸಾನ್ 2002: 44 ದೇಶಗಳ 7711 ಕ್ರೀಡಾಪಟುಗಳು ಭಾಗಿ
15. ದೋಹಾ 2006: 45 ದೇಶಗಳ 9520 ಕ್ರೀಡಾಪಟುಗಳು ಭಾಗಿ
16. ಗುವಾಂಗ್ಝೌ 2010: 45 ದೇಶಗಳ 9704 ಕ್ರೀಡಾಪಟುಗಳು ಭಾಗಿ
17. ಇಂಚಿಯಾನ್ 2014: 45 ದೇಶಗಳ 9501 ಕ್ರೀಡಾಪಟುಗಳು ಭಾಗಿ
18. ಜಕಾರ್ತಾ 2018: 45 ದೇಶಗಳ 11300 ಕ್ರೀಡಾಪಟುಗಳು ಭಾಗಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications