Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಈವರೆಗೆ ಭಾರತಕ್ಕೆ 5 ಪದಕ; ಯಾರು, ಯಾವ ವಿಭಾಗ; ಇಲ್ಲಿದೆ ಪಟ್ಟಿ
ಚೀನಾದ ಹ್ಯಾಂಗ್‌ಝೌನಲ್ಲಿ 2023ರ ಏಷ್ಯನ್ ಗೇಮ್ಸ್ ನಡೆಯುತ್ತಿದ್ದು, 19ನೇ ಏಷ್ಯಾಡ್‌ಗೆ ಶನಿವಾರ, ಸೆಪ್ಟೆಂಬರ್ 23ರಂದು ಅಧಿಕೃತವಾಗಿ ಅದ್ಧೂರಿ ಚಾಲನೆ ನೀಡಲಾಗಿದೆ.
2023ರ ಏಷ್ಯನ್ ಗೇಮ್ಸ್‌ನಲ್ಲಿ ಸೆಪ್ಟೆಂಬರ್ 24ರಂದು ಭಾರತೀಯ ಕ್ರೀಡಾಪಟುಗಳು ತಮ್ಮ ಪದಕದ ಬೇಟೆ ಆರಂಭಿಸಿದ್ದಾರೆ ಮತ್ತು ಇನ್ನಷ್ಟು ಪದಕಗಳು ಬರಲಿವೆ.

2018ರ ಜಕಾರ್ತಾ ಪಂದ್ಯಾವಳಿಯಲ್ಲಿ ಒಟ್ಟು 570-ಸದಸ್ಯರ ಪ್ರಬಲ ತುಕಡಿಯಿಂದ 80 ಪದಕಗಳನ್ನು ಗಳಿಸುವ ಮೂಲಕ ಭಾರತೀಯ ಕ್ರೀಡಾ ಪಡೆ ತನ್ನ ಅತಿದೊಡ್ಡ ಪದಕಗಳನ್ನು ಗಳಿಸಿತ್ತು.
ಹ್ಯಾಂಗ್‌ಝೌ 2023ರ ಆವೃತ್ತಿಯಲ್ಲಿ ಭಾರತೀಯ ಕ್ರೀಡಾಪಟುಗಳು 100ಕ್ಕೂ ಅಧಿಕ ಪದಕಗಳ ಗುರಿಯೊಂದಿಗೆ ತಮ್ಮ ಹಿಂದಿನ ಅತ್ಯುತ್ತಮವನ್ನು ಮೀರಿಸುವ ಭರವಸೆಯನ್ನು ಹೊಂದಿದ್ದಾರೆ.
ಭಾನುವಾರ, ಸೆಪ್ಟೆಂಬರ್ 24ರಂದು ಹ್ಯಾಂಗ್‌ಝೌನಲ್ಲಿ ಮಹಿಳಾ ಶೂಟಿಂಗ್ ತಂಡವು ಭಾರತದ ಪದಕ ಖಾತೆಯನ್ನು ತೆರೆಯಿತು. ಈವರೆಗೆ ಭಾರತದ ಕ್ರೀಡಾಳುಗಳು 3 ಬೆಳ್ಳಿ ಮತ್ತು 2 ಕಂಚಿನ ಪದಕಗಳೊಂದಿಗೆ ದಿನ ಆರಂಭಿಸಿದ್ದಾರೆ.

1. ಶೂಟಿಂಗ್, ಮಹಿಳೆಯರ 10 ಮೀ ಏರ್ ರೈಫಲ್ ತಂಡ
ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಅವರನ್ನೊಳಗೊಂಡ ಮಹಿಳಾ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್ ಪೂರ್ಣಗೊಂಡ ನಂತರ ಬೆಳ್ಳಿ ಪದಕವನ್ನು ಪಡೆದರು. ಅವರು ಒಟ್ಟು 1886 ಅಂಕಗಳೊಂದಿಗೆ ಆಟವನ್ನು ಮುಗಿಸಿದರು.
2. ರೋಯಿಂಗ್, ಪುರುಷರ ಡಬಲ್ಸ್ ಸ್ಕಲ್ಸ್
ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿಯು ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್‌ನಲ್ಲಿ 6:28.18 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ಗೆದ್ದರು.
3. ರೋಯಿಂಗ್, ಪುರುಷರ ಜೋಡಿ
ಭಾರತದ ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಜೋಡಿ 6:50.41 ಸಮಯದೊಂದಿಗೆ ಕಂಚಿನ ಪದಕವನ್ನು ಗಳಿಸುವ ಮೂಲಕ ಭಾರತಕ್ಕೆ ಮೂರನೇ ಸ್ಥಾನವನ್ನು ಗಳಿಸಲು ನೆರವಾದರು.

4. ರೋಯಿಂಗ್, ಪುರುಷರ 8 ಸ್ಪರ್ಧೆ
ರೋಯಿಂಗ್‌ನಲ್ಲಿ ಪದಕದ ಬೇಟೆಯನ್ನು ಮುಂದುವರೆಸಿದ ಭಾರತ, ಈ ಬಾರಿ ಪುರುಷರ ಎಂಟು ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.
5. ಶೂಟಿಂಗ್, ಮಹಿಳೆಯರ 10 ಮೀ ಏರ್ ರೈಫಲ್ ವೈಯಕ್ತಿಕ
ರಮಿತಾ ಜಿಂದಾಲ್, ಈ ಮೊದಲು ಮಹಿಳೆಯರ ಟೀಮ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. 10 ಮೀ ಏರ್ ರೈಫಲ್ ವಿಭಾಗದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ 230.1 ಸಂಚಿತ ಸ್ಕೋರ್‌ನೊಂದಿಗೆ ಕಂಚಿನ ಪದಕವನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications