ಏಷ್ಯನ್ ಗೇಮ್ಸ್ 2023: ಸ್ಕ್ವಾಷ್, ಜಿಮ್ನಾಸ್ಟಿಕ್‌ನಲ್ಲಿ ಭಾಗವಹಿಸುವ ಭಾರತೀಯ ಆಟಗಾರರು
2023ರ ಏಷ್ಯನ್ ಗೇಮ್ಸ್ ಪಂದ್ಯಾವಳಿಯೂ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.
ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಏಷ್ಯನ್ ಪಂದ್ಯಾವಳಿಯಲ್ಲಿ ಭಾರತ ದೊಡ್ಡ ಇತಿಹಾಸವನ್ನು ಹೊಂದಿದೆ. ಕಳೆದೆರಡು ದಶಕಗಳಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸ್ಪರ್ಧಿಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ.

2022ರಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು ಕೋವಿಡ್-19 ಕಾರಣದಿಂದಾಗಿ 2023ಕ್ಕೆ ಬದಲಾಯಿಸಲಾಗಿದೆ. 15 ದಿನಗಳ ಕಾಲ ನಡೆಯುವ ಏಷ್ಯಾಡ್‌ನಲ್ಲಿ ಈ ಬಾರಿ ಏಷ್ಯಾದ ಅತ್ಯುತ್ತಮ 40 ಕ್ರೀಡೆಗಳನ್ನು ಒಳಗೊಂಡಿರುತ್ತದೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದ ಭಾರತ ನಂತರದ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದೆ.
2018ರಲ್ಲಿ ಜಕಾರ್ತಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570 ಸ್ಪರ್ಧಿಗಳನ್ನು ಕಳುಹಿಸಿತ್ತು.

ಮುಂಬರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಅಧಿಕೃತವಾಗಿ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲವಾಗಿ ಕಳೆದ ವರ್ಷ 2022ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿತ್ತು.
2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತೀಯ ಸ್ಕ್ವಾಷ್, ಜಿಮ್ನಾಸ್ಟಿಕ್‌ನಲ್ಲಿ ಆಟಗಾರರ ಪಟ್ಟಿ ಇಲ್ಲಿದೆ.
ಜಿಮ್ನಾಸ್ಟಿಕ್ ಆಟಗಾರರು
1. ಯೋಗೇಶ್ವರ್ ಸಿಂಗ್ - ಪುರುಷರ
2. ರಾಕೇಶ್ ಪಾತ್ರ - ಪುರುಷರ ವಿಭಾಗ
3. ತಪನ್ ಮೊಹಂತಿ - ಪುರುಷರ ವಿಭಾಗ
4. ಗೌರವ್ ಕುಮಾರ್ - ಪುರುಷರ ವಿಭಾಗ
5. ಸತ್ಯಜಿತ್ ಮೊಂಡಲ್ - ಪುರುಷರ ವಿಭಾಗ
6. ಅನಸ್ ಅಲಿ ಶೇಖ್ - ಪುರುಷರ ಮೀಸಲು
7. ಸೈಫ್ ತಾಂಬೋಲಿ - ಪುರುಷರ ಮೀಸಲು
8. ದೀಪಾ ಕರ್ಮಾಕರ್ - ಮಹಿಳಾ ವಿಭಾಗ
9. ಪ್ರಣತಿ ದಾಸ್ - ಮಹಿಳಾ ವಿಭಾಗ
10. ಪ್ರಣತಿ ನಾಯಕ್ - ಮಹಿಳಾ ವಿಭಾಗ
11. ಪ್ರತಿಷ್ಠಾ ಸಮಂತಾ - ಮಹಿಳಾ ವಿಭಾಗ
12. ಬಿದಿಶಾ ಗಯೆನ್ - ಮಹಿಳಾ ಮೀಸಲು
ಸ್ಕ್ವಾಷ್ ಆಟಗಾರರು
1. ಸೌರವ್ ಘೋಸಲ್ - ಪುರುಷರ ವಿಭಾಗ
2. ಅಭಯ್ ಸಿಂಗ್ - ಪುರುಷರ ವಿಭಾಗ
3. ಮಹೇಶ್ ಮಂಗಾಂವ್ಕರ್ - ಪುರುಷರ ವಿಭಾಗ
4. ಹರಿಂದರ್ಪಾಲ್ ಸಿಂಗ್ ಸಂಧು - ಪುರುಷರ ವಿಭಾಗ
5. ಜೋಷ್ನಾ ಚಿನ್ನಪ್ಪ - ಮಹಿಳಾ ವಿಭಾಗ
6. ದೀಪಿಕಾ ಪಲ್ಲಿಕಲ್ ಕಾರ್ತಿಕ್ - ಮಹಿಳಾ ವಿಭಾಗ
7. ಅನಾಹತ್ ಸಿಂಗ್ - ಮಹಿಳಾ ವಿಭಾಗ
8. ತನ್ವಿ ಖನ್ನಾ - ಮಹಿಳಾ ವಿಭಾಗ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications