Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 'ಬೆಳ್ಳಿ'ಗೆ ಗುರಿಯಿಟ್ಟ ಭಾರತ ತಂಡ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023 ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳ ಪದಕ ಬೇಟೆ ಮುಂದುವರೆದಿದೆ. ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು.

ಶುಕ್ರವಾರ, ಸೆಪ್ಟೆಂಬರ್ 29ರಂದು 18 ವರ್ಷದ ಶೂಟರ್ ಇಶಾ ಸಿಂಗ್ ನೇತೃತ್ವದ ಭಾರತ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ತಂಡ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತು. ಭಾರತದ 14ನೇ ಶೂಟಿಂಗ್ ಪದಕವಾಯಿತು. ಇದಾದ ಬಳಿಕ ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿತು.

Asian Games 2023: Indian Womens Team Wins Silver Medal In 10m Air Pistol Event

ಭಾರತದ ಇಶಾ ಸಿಂಗ್ (579), ಪಾಲಕ್ (577) ಮತ್ತು ದಿವ್ಯಾ ಟಿಎಸ್ (575) ಅಂಕಗಳೊಂದಿಗೆ ಭಾರತಕ್ಕೆ ಬೆಳ್ಳಿ ಪದಕಕ್ಕಾಗಿ 1731 ಅಂಕಗಳನ್ನು ಒಟ್ಟುಗೂಡಿಸಿದರು.

ಚೀನಾ ಒಟ್ಟು 1736 ಅಂಕಗಳೊಂದಿಗೆ ಚಿನ್ನವನ್ನು ಗೆದ್ದುಕೊಂಡಿದ್ದು, ಇದು ಏಷ್ಯನ್ ಗೇಮ್ಸ್‌ನ ಹೊಸ ದಾಖಲೆಯಾಗಿದೆ. ಚೈನೀಸ್ ತೈಪೆ ಒಟ್ಟು 1723 ಕಂಚಿನ ಪಂದಕದೊಂದಿಗೆ ಮುಗಿಸಿತು.

ಅರ್ಹತಾ ಸುತ್ತಿನ ನಂತರ, ಐದನೇ ಮತ್ತು ಏಳನೇ ಸ್ಥಾನ ಪಡೆದು ಎಂಟು ಶೂಟರ್‌ಗಳ ಫೈನಲ್‌ಗೆ ಪ್ರವೇಶಿಸಿದ ಕಾರಣ, ಇಶಾ ಸಿಂಗ್ ಮತ್ತು ಪಾಲಕ್ ವೈಯಕ್ತಿಕ ವಿಭಾಗದಲ್ಲಿ ಪದಕಗಳನ್ನು ಗೆಲ್ಲುವ ಅವಕಾಶ ಹೊಂದಿರುತ್ತಾರೆ. ದಿವ್ಯಾ 10ನೇ ಸ್ಥಾನ ಪಡೆದು ವೈಯಕ್ತಿಕ ಫೈನಲ್ ತಪ್ಪಿಸಿಕೊಂಡರು.

ಅರ್ಹತಾ ಸುತ್ತಿನ ಅಂಕಗಳು ತಂಡದ ಪದಕ ವಿಜೇತರನ್ನು ನಿರ್ಧರಿಸುತ್ತವೆ. ಆದರೆ ಎಂಟು ಅಗ್ರ-ಸ್ಕೋರಿಂಗ್ ಶೂಟರ್‌ಗಳು ವೈಯಕ್ತಿಕ ಪದಕ ಗೆಲ್ಲಲು ಫೈನಲ್‌ಗೆ ತೆರಳಲಿದ್ದಾರೆ.

ಬುಧವಾರ, ಸೆಪ್ಟೆಂಬರ್ 27ರಂದು ನಡೆದ ಮಹಿಳೆಯರ ವೈಯಕ್ತಿಕ 25 ಮೀಟರ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಬೆಳ್ಳಿ ಪದಕ ಗೆದ್ದಿದ್ದರೆ, ಅದೇ ದಿನ ಮಹಿಳೆಯರ 25 ಮೀಟರ್‌ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ತ್ರಿವಳಿ ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಶೂಟಿಂಗ್‌ಗೆ ಸಂಬಂಧಿಸಿದಂತೆ, ಪುರುಷರ 5 ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೋರಾನ್ ಚಿನ್ನದ ಪದಕ ಗೆದ್ದಿದ್ದರಿಂದ ಭಾರತದ ಪದಕ ಬೇಟೆ ಅಲ್ಲಿಗೆ ಮುಗಿದಿಲ್ಲ.

Asian Games 2023: Indian Womens Team Wins Silver Medal In 10m Air Pistol Event

ಈ ತ್ರಿವಳಿ ಜೋಡಿ 1769 ಅಂಕಗಳೊಂದಿಗೆ ಮುಗಿಸಿದರು. ಕುಸಾಲೆ ಮತ್ತು ತೋಮರ್ ಕೂಡ ವೈಯಕ್ತಿಕ ಈವೆಂಟ್‌ಗೆ ಅರ್ಹತೆ ಪಡೆದರು. ಕುಸಾಲೆ ಒಟ್ಟು 591 ಅಂಕಗಳೊಂದಿಗೆ ಅರ್ಹತಾ ಹಂತದಲ್ಲಿ ಅಗ್ರಸ್ಥಾನ ಪಡೆದರು. ತೋಮರ್ ದ್ವಿತೀಯ ಸ್ಥಾನ ಪಡೆದರು.

ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಈ ಮೂವರು ಭಾರತಕ್ಕೆ ಏಳನೇ ಚಿನ್ನದ ಪದಕಕ್ಕೆ ಮಾರ್ಗದರ್ಶನ ಮಾಡಿದರು. ಶೂಟಿಂಗ್ ಇವೆಂಟ್‌ನಲ್ಲಿ ಒಟ್ಟು 15ನೇ ಪದಕ ಇದಾಯಿತು.

ಏಷ್ಯನ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಭಾರತವು ಶೂಟಿಂಗ್‌ನಲ್ಲಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. 2006ರಲ್ಲಿ ಭಾರತ ದೋಹಾದಲ್ಲಿ 14 ಶೂಟಿಂಗ್ ಪದಕಗಳನ್ನು ಗೆದ್ದಿತ್ತು. ಪುರುಷರ 5 ರೈಫಲ್ 3 ಪೊಸಿಷನ್‌ನಲ್ಲಿ ಚಿನ್ನ ಗೆದ್ದ ನಂತರ, ಭಾರತ ಈ ದಾಖಲೆ ಮಾಡಿದೆ.

Story first published: Friday, September 29, 2023, 9:20 [IST]
Other articles published on Sep 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+