Asian Games 2023: ಪುರುಷರ ವಿಂಡ್‌ಸರ್ಫರ್ RS:Xನಲ್ಲಿ ಕಂಚಿನ ಪದಕ ಗೆದ್ದ ಭಾರತದ ಇಯಾಬಾದ್ ಅಲಿ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ವಿಂಡ್‌ಸರ್ಫರ್ ಆರ್‌ಎಸ್:ಎಕ್ಸ್ ಸ್ಪರ್ಧೆಯಲ್ಲಿ ಭಾರತದ ಇಯಾಬಾದ್ ಅಲಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಮಂಗಳವಾರ, ಸೆಪ್ಟೆಂಬರ್ 26ರಂದು ನಿಂಗ್ಬೋದಲ್ಲಿರುವ ಎನ್‌ಬಿಎಕ್ಸ್ ಸೇಲಿಂಗ್ ಸೆಂಟರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪುರುಷರ ಸೈಲಿಂಗ್ ವಿಂಡ್‌ಸರ್ಫರ್ ಆರ್‌ಎಸ್:ಎಕ್ಸ್ ಸ್ಪರ್ಧೆಯಲ್ಲಿ ಇಯಾಬಾದ್ ಅಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.
ಇಯಾಬಾದ್ ಅಲಿ 52 ಸ್ಕೋರ್‌ನೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದರೆ, ಥಾಯ್ಲೆಂಡ್‌ನ ನತ್ತಫಾಂಗ್ ಫೋನೊಪ್ಪಾರಾಟ್ ಅವರು 29 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ಇನ್ನು ದಕ್ಷಿಣ ಕೊರಿಯಾದ ಚೋ ವೊನ್ವೂ ಅವರು 13 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನದ ಪದಕ ಗೆದ್ದರು.
ಬೆಳ್ಳಿ ಗೆದ್ದ ನೇಹಾ ಠಾಕೂರ್
ಇದಕ್ಕೂ ಮೊದಲು 17 ವರ್ಷದ ನೇಹಾ ಠಾಕೂರ್ ಅವರು ಏಷ್ಯನ್ ಗೇಮ್ಸ್ ಸೈಲಿಂಗ್ ಸ್ಪರ್ಧೆಗಳಲ್ಲಿ ಬಾಲಕಿಯರ ಡಿಂಗಿ - ILCA4 ಇವೆಂಟ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಖಾತೆಯನ್ನು ತೆರೆದಿದ್ದರು.
ಮಧ್ಯಪ್ರದೇಶದ 12ನೇ ತರಗತಿ ವಿದ್ಯಾರ್ಥಿನಿ ನೇಹಾ ಠಾಕೂರ್, ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನಲ್ಲಿ ಚಿಕ್ಕ ವಯಸ್ಸಿನಲ್ಲೇ ನೌಕಾಯಾನ ತರಬೇತಿ ಪ್ರಾರಂಭಿಸಿದರು. ಈ ವಿಭಾಗದಲ್ಲಿ 11 ರೇಸ್‌ಗಳ ನಂತರ ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್ ನಂತರ ಎರಡನೇ ಸ್ಥಾನ ಪಡೆದು ಬೆಳ್ಳಿ ಗೆದ್ದರು.

10ನೇ ರೇಸ್‌ನ ಕೊನೆಯಲ್ಲಿ ಥಾಯ್ಲೆಂಡ್‌ನ ನಾವಿಕಳ 14ಕ್ಕೆ ಹೋಲಿಸಿದರೆ ನೇಹಾ 23 ನೆಟ್ ಸ್ಕೋರ್ (ಪೆನಾಲ್ಟಿ ಅಂಕಗಳು) ಹೊಂದಿದ್ದರು. ರಿಪಬ್ಲಿಕ್ ಆಫ್ ಕೊರಿಯಾದ ಜೇಕ್ಯೊಂಗ್ ಸಿಯೋಲ್ ನಿವ್ವಳ ಸ್ಕೋರ್ 27 ನೆಟ್ ಸ್ಕೋರ್‌ನೊಂದಿಗೆ ಮೂರನೇ ಸ್ಥಾನ ಪಡೆದರು.
ಮಂಗಳವಾರ ನಡೆದ 11ನೇ ರೇಸ್‌ನಲ್ಲಿ ನೇಹಾ ಠಾಕೂರ್ ನಾಲ್ಕನೇ ಸ್ಥಾನ ಪಡೆದು 4 ರೇಸ್ ಪಾಯಿಂಟ್‌ಗಳನ್ನು ಗಳಿಸಿದರೆ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ನಂತರ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಕೊರಿಯಾದ ಸಿಯೋಲ್ 11ನೇ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದರು. ಆದರೆ ನೇಹಾ ಅವರನ್ನು ಎರಡನೇ ಸ್ಥಾನಕ್ಕೆ ಹಿಂದಿಕ್ಕಲು ಅವರ ಲಾಭಗಳು ಸಾಕಾಗಲಿಲ್ಲ.

ಯಾಚಿಂಗ್ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಜಿತೇಂದ್ರ ದೀಕ್ಷಿತ್ ಅವರು, ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಸ್ಪರ್ಧಿಗಳ ಬಗ್ಗೆ ಹೆಚ್ಚಿನ ಭರವಸೆ ಹೊಂದಿದ್ದಾರೆ ಮತ್ತು ಬುಧವಾರದ ಅಂತಿಮ ದಿನದ ಸ್ಪರ್ಧೆಯ ವೇಳೆಗೆ ಹೆಚ್ಚಿನ ಪದಕಗಳನ್ನು ನಿರೀಕ್ಷಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications