Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ಕ್ರೀಡಾಪಟುಗಳ ಪಟ್ಟಿ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಸೆಪ್ಟೆಂಬರ್ 23ರಂದು ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತವಾಗಿ ಆರಂಭವಾಗಲಿದ್ದು, ಅಕ್ಟೋಬರ್ 8ರವರೆಗೆ ನಡೆಯಲಿದೆ.

ಇನ್ನು ಶನಿವಾರ, ಸೆಪ್ಟೆಂಬರ್ 23ರಂದು ಹ್ಯಾಂಗ್‌ಝೌನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಭಾರತ ನಿಯೋಗದ ಧ್ವಜಧಾರಿಗಳಾಗಲಿದ್ದಾರೆ.

Asian Games 2023 List of Athletes From Karnataka

ಏಷ್ಯನ್ ಪಂದ್ಯಾವಳಿಗಾಗಿ ಜಂಟಿ ಧ್ವಜಧಾರಿಗಳನ್ನು ಹೊಂದಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ನಿರ್ಧಾರ ಕೈಗೊಂಡಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 655 ಭಾರತೀಯ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ, ಇದು ಇದುವರೆಗಿನ ಅತಿದೊಡ್ಡ ತುಕಡಿಯಾಗಿದೆ ಎಂಬುದು ಗಮನಾರ್ಹ.

2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗಾಗಿ ಭಾರತದ ಒಟ್ಟು 655 ಕ್ರೀಡಾಪಟುಗಳ ಪೈಕಿ ಹರಿಯಾಣ (89) ಮತ್ತು ಮಹಾರಾಷ್ಟ್ರ (73) ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳನ್ನು ಹೊಂದಿದೆ. ಉಳಿದಂತೆ ಪಂಜಾಬ್ (50), ತಮಿಳುನಾಡು (46), ದೆಹಲಿ (45) ಮತ್ತು ಕೇರಳ (42) ಹೆಚ್ಚು ಪ್ರತಿನಿಧಿಸುವ ಇತರ ರಾಜ್ಯಗಳಾಗಿವೆ.

Asian Games 2023 List of Athletes From Karnataka

ಇನ್ನು ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕದಿಂದ ಒಟ್ಟು 37 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಅವರ ಹೆಸರು ಮತ್ತು ಕ್ರೀಡೆಯ ಪಟ್ಟಿ ಇಲ್ಲಿದೆ.

ಆಟಗಾರರ ಹೆಸರು ಕ್ರೀಡೆ
ಶ್ರೀಹರಿ ನಟರಾಜ್ ಈಜು
ಉತ್ಕರ್ಷ್ ಪಾಟೀಲ್ ಈಜು
ಲಿಖಿತ್ ಎಸ್‌ಪಿ ಈಜು
ತನಿಷ್ ಜಾರ್ಜ್ ಮ್ಯಾಥ್ಯೂ ಈಜು
ಅನೀಶ್ ಗೌಡ ಈಜು
ನೀನಾ ವೆಂಕಟೇಶ್ ಈಜು
ಲಿನೇಶಾ ಎಕೆ ಈಜು
ಧಿನಿಧಿ ದೇಸಿಂಗು ಈಜು
ಹಾಶಿಕಾ ರಾಮಚಂದ್ರನ್ ಈಜು
ಯಶಸ್ ಪಾಲಾಕ್ಷ ಅಥ್ಲೆಟಿಕ್ಸ್
ಮಿಜೋ ಚಾಕೋ ಕುರಿಯನ್ ಅಥ್ಲೆಟಿಕ್ಸ್
ಜೆಸ್ಸಿ ಸಂದೇಶ್ ಅಥ್ಲೆಟಿಕ್ಸ್
ಅಪ್ಪಚಂಗಡ ಬೆಳ್ಳಿಯಪ್ಪ ಅಥ್ಲೆಟಿಕ್ಸ್
ನಿಹಾಲ್ ಜೋಯಲ್ ವಿಲಿಯಂ ಅಥ್ಲೆಟಿಕ್ಸ್
ಸಿಂಚಲ್ ಕಾವೇರಮ್ಮ ಅಥ್ಲೆಟಿಕ್ಸ್
ಖಾಲಿನ್ ಜೋಶಿ ಗಾಲ್ಫ್
ಅದಿತಿ ಅಶೋಕ್ ಗಾಲ್ಫ್
ಅವನಿ ಪ್ರಶಾಂತ್ ಗಾಲ್ಫ್
ಪ್ರಣವಿ ಅರಸ್ ಗಾಲ್ಫ್
ಮಿಥುನ್ ಮಂಜುನಾಥ್ ಬ್ಯಾಡ್ಮಿಂಟನ್
ಅಶ್ವಿನಿ ಪೊನ್ನಪ್ಪ ಬ್ಯಾಡ್ಮಿಂಟನ್
ಸಾಯಿ ಪ್ರತೀಕ್ ಬ್ಯಾಡ್ಮಿಂಟನ್
ಅಕ್ಷಜ್ ಶೆಣೈ ಎಸ್ಪೋರ್ಟ್ಸ್
ಆದಿತ್ಯ ಸೆಲ್ವರಾಜ್ ಎಸ್ಪೋರ್ಟ್ಸ್
ಅಶ್ವಲ್ ರೈ ವಾಲಿಬಾಲ್
ಹರಿಪ್ರಸಾದ್ ಬಿಎಸ್ ವಾಲಿಬಾಲ್
ಭರತ್ ಪರೇರಾ ಕಾಮತ್ ಕ್ಲೈಂಬಿಂಗ್
ಪ್ರತೀಕ್ಷಾ ಕಾಜನೆ ಕ್ಲೈಂಬಿಂಗ್
ಅಂಜನಾ ರಮೇಶ್ ಬ್ಯಾಸ್ಕೆಟ್‌ಬಾಲ್
ಭಾಂಡವ್ಯ ಹೆಮ್ಮಿಗೆ ಮಹೇಶ ಬ್ಯಾಸ್ಕೆಟ್‌ಬಾಲ್
ಸಹನಾ ಶಿವಮೊಗ್ಗ ಮೋಹನ್ ಬ್ಯಾಸ್ಕೆಟ್‌ಬಾಲ್
ನಿಶಾಂತ್ ದೇವ್ ಬಾಕ್ಸಿಂಗ್
ರಾಜೇಶ್ವರಿ ಗಾಯಕ್ವಾಡ್ ಕ್ರಿಕೆಟ್
ವೆಂಕಪ್ಪ ಕೆಂಗಲಗುತ್ತಿ ಸೈಕ್ಲಿಂಗ್
ದಿವ್ಯಾ ಟಿಎಸ್ ಶೂಟಿಂಗ್
ರೋಹನ್ ಬೋಪಣ್ಣ ಟೆನಿಸ್
ಉಮಾ ಮಹೇಶ್ವರ್ ರೆಡ್ಡಿ ಜಿಯು-ಜಿತ್ಸು

Story first published: Thursday, September 21, 2023, 11:13 [IST]
Other articles published on Sep 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+