Asian Games 2023: 4x400 ಮೀ ಮಿಶ್ರ ರಿಲೇಯಲ್ಲಿ ಶ್ರೀಲಂಕಾ ಅನರ್ಹ; ಭಾರತಕ್ಕೆ ಬೆಳ್ಳಿ ಪದಕ
ಸೋಮವಾರ, ಅಕ್ಟೋಬರ್ 2ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ 100 ಪದಕ ಗೆಲ್ಲುವ ಗುರಿಯೊಂದಿಗೆ, ಈಗಾಗಲೇ ಭಾರತ 60 ಪದಕಗಳ ಗಡಿಯನ್ನು ಮುಟ್ಟಿದೆ.
ಏಷ್ಯನ್ ಗೇಮ್ಸ್ 2023ರ ಅಥ್ಲೆಟಿಕ್ಸ್‌ನಲ್ಲಿ ಭಾರತವು ಸೋಮವಾರ ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದಿದ್ದರಿಂದ ಹೆಚ್ಚಿನ ಕೊಡುಗೆಯನ್ನು ಮುಂದುವರೆಸಿದೆ.

ಇನ್ನು ಲೇನ್ ಉಲ್ಲಂಘನೆಗಾಗಿ ಶ್ರೀಲಂಕಾ ತಂಡವು ಅನರ್ಹಗೊಂಡ ನಂತರ ಸೋಮವಾರ ನಡೆದ 4x400 ಮೀ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡವು ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಆರಂಭದಲ್ಲಿ ಭಾರತ ತಂಡ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡಿತ್ತು.
ಮುಹಮ್ಮದ್ ಅಜ್ಮಲ್, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ಭಾರತ ತಂಡವು 3:14.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.
ಬಹ್ರೇನ್ 3:14.02 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಕಜಕಿಸ್ತಾನ್ ತಮ್ಮ ಋತುವಿನ ಅತ್ಯುತ್ತಮ ಸಮಯ 3:24.85 ಸೆಕೆಂಡ್‌ಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಇದೇ ವೇಳೆ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಭಾರತದ ಅಥ್ಲೀಟ್ ಆನ್ಸಿ ಸೋಜನ್ ಎಡಪ್ಪಿಳ್ಳಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ತನ್ನ ಐದನೇ ಪ್ರಯತ್ನದಲ್ಲಿ, ಅವರು ತಮ್ಮ ವೈಯಕ್ತಿಕ ಅತ್ಯುತ್ತಮ 6.63 ಮೀಟರ್ ಅನ್ನು ನೋಂದಾಯಿಸಿದರು.
ಈ ಮೂಲಕ ಪದಕ ವಿತರಣೆ ವೇದಿಕೆಯಲ್ಲಿ ಸ್ಥಾನ ಪಡೆದರು. ಚೀನಾದ ಶಿಕಿ ಕ್ಸಿಯಾಂಗ್ ಕೂಡ ತನ್ನ ಮಿತಿಯನ್ನು ಭೇದಿಸಿ 6.73 ಮೀಟರ್‌ಗಳ ವೈಯಕ್ತಿಕ ಅತ್ಯುತ್ತಮ ಪ್ರಯತ್ನ ಮಾಡುವ ಮೂಲಕ ಚಿನ್ನದ ಪದಕ ಗೆದ್ದರು.
ಕಂಚಿನ ಪದಕವನ್ನು ಚೀನಾದ ಹಾಂಗ್ ಕಾಂಗ್‌ನ ನ್ಗಾ ಯಾನ್ ಅವರು 6.50 ಮೀಟರ್ ದೂರ ಜಿಗಿದು ಪಡೆದರು. ಇದು ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವೂ ಆಗಿತ್ತು.
ಶೈಲಿ ಸಿಂಗ್ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಸ್ಪರ್ಧಿಸುತ್ತಿದ್ದ ಭಾರತದ ಮತ್ತೊಬ್ಬ ಅಥ್ಲೀಟ್ ಆಗಿದ್ದರು. ಆದರೆ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಡಲು ಅವಳ ಪ್ರಯತ್ನ ಸಾಕಾಗಲಿಲ್ಲ. 6.48 ಮೀಟರ್ ದೂರ ಕ್ರಮಿಸುವ ಮೂಲಕ ಐದನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಪಾರುಲ್ ಚೌಧರಿ ಮತ್ತು ಪ್ರೀತಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು.
ಏಷ್ಯನ್ ಗೇಮ್ಸ್ ದಾಖಲೆಯ ಸಮಯ 9 ನಿಮಿಷ 18.28 ಸೆಕೆಂಡ್‌ಗಳಲ್ಲಿ ಸ್ಥಾಪಿಸಿದ ಬಹ್ರೇನ್‌ನ ವಿನ್‌ಫ್ರೆಡ್ ಮ್ಯೂಟೈಲ್ ನಂತರ, ಭಾರತದ ಪಾರುಲ್ ಚೌಧರಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು 9 ನಿಮಿಷ 27.63 ಸೆಕೆಂಡ್‌ಗಳಲ್ಲಿ ಪೋಡಿಯಂನಲ್ಲಿ ಸ್ಥಾನ ಗಳಿಸಿದರು.
ಮತ್ತೊಂದೆಡೆ, ಪ್ರೀತಿ ತನ್ನ ವೈಯಕ್ತಿಕ ಅತ್ಯುತ್ತಮ ಸಮಯ 9 ನಿಮಿಷ 43.32 ಸೆಕೆಂಡ್‌ಗಳಲ್ಲಿ ಕಂಚಿನ ಪದಕದೊಂದಿಗೆ ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications