For Quick Alerts
ALLOW NOTIFICATIONS  
For Daily Alerts

2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತದ 33 ರೋಯಿಂಗ್ ಸ್ಪರ್ಧಿಗಳು ಯಾರು?

15 ದಿನಗಳ ಕಾಲ ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ 2023ರ ಏಷ್ಯನ್ ಗೇಮ್ಸ್ ಪಂದ್ಯಾವಳಿ ನಡೆಯಲಿದೆ.

ಕೋವಿಡ್-19 ಕಾರಣದಿಂದಾಗಿ, ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು 2022ರ ಬದಲಾಗಿ 2023ಕ್ಕೆ ಬದಲಾಯಿಸಲಾಗಿದೆ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಏಷ್ಯನ್ ಪಂದ್ಯಾವಳಿಯಲ್ಲಿ ಭಾರತ ದೊಡ್ಡ ಇತಿಹಾಸವನ್ನು ಹೊಂದಿದೆ.

Asian Games 2023: These 33 Indian Rowing Competitors Participating In 2023 Asian Games in China

ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದ ಭಾರತ ನಂತರದ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದೆ.

ಕಳೆದೆರಡು ಹಲವು ವರ್ಷಗಳಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಕಳೆದ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570ರ ಕ್ರೀಡಾಪಟುಗಳನ್ನು ಕಳುಹಿಸಿತ್ತು.

ಮುಂಬರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಅಧಿಕೃತವಾಗಿ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲವಾಗಿ ಕಳೆದ ವರ್ಷ 2022ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿತ್ತು.

ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆ ಪಡೆದ ಭಾರತೀಯ ರೋಯಿಂಗ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

1. ಅಲ್ರಾಜ್ ಪನ್ವಾರ್ - ಪುರುಷರ ಸಿಂಗಲ್ ಸ್ಕಲ್
2. ಸತ್ನಮ್ ಸಿಂಗ್ - ಪುರುಷರ ಡಬಲ್ ಸ್ಕಲ್ ಮತ್ತು ಕ್ವಾಡ್ರುಪಲ್ ಸ್ಕಲ್
3. ಪರ್ಮಿಂದರ್ ಸಿಂಗ್ - ಪುರುಷರ ಡಬಲ್ ಸ್ಕಲ್ ಮತ್ತು ಕ್ವಾಡ್ರುಪಲ್ ಸ್ಕಲ್
4. ಜಾಕರ್ ಖಾನ್ - ಪುರುಷರ ಕ್ವಾಡ್ರುಪಲ್ ಸ್ಕಲ್

5. ಸುಖಮೀತ್ ಸಿಂಗ್ - ಪುರುಷರ ಕ್ವಾಡ್ರುಪಲ್ ಸ್ಕಲ್
6. ಅರವಿಂದ್ ಸಿಂಗ್ - ಪುರುಷರ ಹಗುರವಾದ ಡಬಲ್ ಸ್ಕಲ್
7. ಅರ್ಜುನ್ ಲಾಲ್ ಜಾಟ್ - ಪುರುಷರ ಹಗುರವಾದ ಡಬಲ್ ಸ್ಕಲ್
8. ಬಾಬು ಲಾಲ್ ಯಾದವ್ - ಪುರುಷರ ಕಾಕ್ಸ್‌ಲೆಸ್ ಜೋಡಿ

9. ಲೇಖ್ ರಾಮ್ - ಪುರುಷರ ಕಾಕ್ಸ್‌ಲೆಸ್ ಜೋಡಿ
10. ಜಸ್ವಿಂದರ್ ಸಿಂಗ್ - ಪುರುಷರ ಕಾಕ್ಸ್‌ಲೆಸ್ ಫೋರ್ ಮತ್ತು ಕಾಕ್ಸ್ಡ್ 8
11. ಭೀಮ್ ಸಿಂಗ್ - ಪುರುಷರ ಕೋಕ್ಸ್‌ಲೆಸ್ ಫೋರ್ ಮತ್ತು ಕಾಕ್ಸ್ಡ್ 8
12. ಪುನಿತ್ ಕುಮಾರ್ - ಪುರುಷರ ಕೋಕ್ಸ್‌ಲೆಸ್ ಫೋರ್ ಮತ್ತು ಕೋಕ್ಸ್ಡ್ 8
13. ಆಶಿಶ್ - ಪುರುಷರ ಕಾಕ್ಸ್‌ಲೆಸ್ ಫೋರ್ ಮತ್ತು ಕಾಕ್ಸ್ಡ್ 8
14. ನೀರಜ್ - ಪುರುಷರ ಕೋಕ್ಸ್ಡ್ 8

15. ನರೇಶ್ ಕಲ್ವಾನಿಯಾ - ಪುರುಷರ ಕೋಕ್ಸ್ಡ್ 8
16. ನೀತೇಶ್ ಕುಮಾರ್ - ಪುರುಷರ ಕೋಕ್ಸ್ಡ್ 8
17. ಚರಣಜೀತ್ ಸಿಂಗ್ - ಪುರುಷರ ಕಾಕ್ಸ್ಡ್ 8
18. ಡಿಯು ಪಾಂಡೆ - ಪುರುಷರ ಕೋಕ್ಸ್ಡ್ 8
19. ಆಶಿಶ್ ಗೋಲಿಯಾನ್ - ಪುರುಷರ ಸ್ವೀಪ್ (ಬದಲಿ ಆಟಗಾರ)
20. ಕುಲ್ವಿಂದರ್ ಸಿಂಗ್ - ಪುರುಷರ ಸ್ಕಲ್ಸ್ (ಬದಲಿ ಆಟಗಾರ)

21. ಕಿರಣ್ - ಮಹಿಳಾ ಹಗುರವಾದ ಡಬಲ್ ಸ್ಕಲ್
22. ಅಂಶಿಕಾ ಭಾರ್ತಿ - ಮಹಿಳಾ ಹಗುರವಾದ ಡಬಲ್ ಸ್ಕಲ್
23. ಅಶ್ವತಿ ಪಿಬಿ - ಮಹಿಳಾ ಕೋಕ್ಸ್‌ಲೆಸ್ ಫೋರ್ ಮತ್ತು ಕಾಕ್ಸ್ಡ್ 8
24. ಮೃಣಾಮಯಿ ನೀಲೇಶ್ ಎಸ್ - ಮಹಿಳಾ ಕೋಕ್ಸ್‌ಲೆಸ್ ಫೋರ್ ಮತ್ತು ಕಾಕ್ಸ್ಡ್ 8
25. ತಂಗ್ಜಮ್ ಪ್ರಿಯಾ ದೇವಿ - ಮಹಿಳಾ ಕೋಕ್ಸ್‌ಲೆಸ್ ಫೋರ್ ಮತ್ತು ಕೋಕ್ಸ್ಡ್ 8

26. ರುಕ್ಮಣಿ - ಮಹಿಳೆಯರ ಕೋಕ್ಸ್‌ಲೆಸ್ ಫೋರ್ ಮತ್ತು ಕೋಕ್ಸ್ಡ್ 8
27. ಸೋನಾಲಿ ಸ್ವೇನ್ - ಮಹಿಳೆಯರ ಕೋಕ್ಸ್ಡ್ 8
28. ರಿತು ಕೌಡಿ - ಮಹಿಳೆಯರ ಕೋಕ್ಸ್ಡ್ 8
29. ವರ್ಷಾ ಕೆಬಿ - ಮಹಿಳೆಯರ ಕಾಕ್ಸ್ಡ್ 8
30. ಹೆಚ್ ಟೆಂಡೆಂತೋಯ್ ದೇವಿ - ಮಹಿಳೆಯರ ಕೋಕ್ಸ್ಡ್ 8

31. ಜಿ ಗೀತಾಂಜಲಿ - ಮಹಿಳೆಯರ ಕೋಕ್ಸ್ಡ್ 8
32. ರೋಸ್ ಮೆಸ್ಟಿಕಾ ಮೆರಿಲ್ ಎ - ಮಹಿಳೆಯರ (ಬದಲಿ)
33. ಅರ್ಚಾ ಅಜಿ - ಮಹಿಳಾ (ಬದಲಿ)

Story first published: Wednesday, August 2, 2023, 22:32 [IST]
Other articles published on Aug 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+