2023ರ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಬಾಕ್ಸರ್‌ಗಳು
ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ 15 ದಿನಗಳ ಕಾಲ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.
ಕೋವಿಡ್-19 ಕಾರಣದಿಂದಾಗಿ 2022ರ ಬದಲಾಗಿ 2023ಕ್ಕೆ ಬದಲಾಯಿಸಲಾಗಿದ್ದು, 2023ರ ಏಷ್ಯನ್ ಗೇಮ್ಸ್‌ನಲ್ಲಿ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಏಷ್ಯನ್ ಪಂದ್ಯಾವಳಿಯಲ್ಲಿ ಭಾರತ ದೊಡ್ಡ ಇತಿಹಾಸವನ್ನು ಹೊಂದಿದೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದ ಭಾರತವು ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದೆ.
ಕಳೆದೆರಡು ಹಲವು ವರ್ಷಗಳಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570ರ ಕ್ರೀಡಾಪಟುಗಳನ್ನು ಕಳುಹಿಸಿತ್ತು.
ಮುಂಬರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಅಧಿಕೃತವಾಗಿ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲವಾಗಿ ಕಳೆದ ವರ್ಷ 2022ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿತ್ತು.
ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆ ಪಡೆದ ಭಾರತೀಯ ಬಾಕ್ಸರ್‌ಗಳ ಪಟ್ಟಿ ಇಲ್ಲಿದೆ.
1. ನಿಖತ್ ಜರೀನ್ - ಮಹಿಳೆಯರ 51 ಕೆ.ಜಿ
2. ಪ್ರೀತಿ ಪವಾರ್ - ಮಹಿಳೆಯರ 54 ಕೆ.ಜಿ
3. ಪರ್ವೀನ್ ಹೂಡಾ - ಮಹಿಳೆಯರ 57 ಕೆ.ಜಿ
4. ಜೈಸ್ಮಿನ್ ಲಂಬೋರಿಯಾ - ಮಹಿಳೆಯರ 60 ಕೆ.ಜಿ
5. ಅರುಂಧತಿ ಚೌಧರಿ - ಮಹಿಳೆಯರ 66 ಕೆ.ಜಿ
6. ಲೊವ್ಲಿನಾ ಬೊರ್ಗೊಹೈನ್ - ಮಹಿಳೆಯರ 75 ಕೆ.ಜಿ
7. ದೀಪಕ್ ಭೋರಿಯಾ - ಪುರುಷರ 51 ಕೆ.ಜಿ
8. ಸಚಿನ್ ಸಿವಾಚ್ - ಪುರುಷರ 57 ಕೆ.ಜಿ
9. ಶಿವ ಥಾಪಾ - ಪುರುಷರ 63.5 ಕೆ.ಜಿ
10. ನಿಶಾಂತ್ ದೇವ್ - ಪುರುಷರ 71 ಕೆ.ಜಿ
11. ಲಕ್ಷ್ಯ ಚಹಾರ್ - ಪುರುಷರ 80 ಕೆ.ಜಿ
12. ಸಂಜೀತ್ - ಪುರುಷರ 92 ಕೆ.ಜಿ
13. ನರೇಂದರ್ ಬರ್ವಾಲ್ - ಪುರುಷರ +92 ಕೆ.ಜಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications