Asian Games 2023: ಚೀನಾದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತದ ಬ್ಯಾಡ್ಮಿಂಟನ್ ಆಟಗಾರರು
2022ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು 2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.
ಕೋವಿಡ್-19 ಕಾರಣದಿಂದಾಗಿ 2022ರಿಂದ 2023ಕ್ಕೆ ಬದಲಾಯಿಸಲಾಗಿದ್ದು, 15-ದಿನಗಳ ಕಾಲ 2023ರ ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಈ ವರ್ಷ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಒಳಗೊಂಡಿರುತ್ತದೆ.
ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಪಂದ್ಯಾವಳಿಯಲ್ಲಿ ಭಾರತವು ದೊಡ್ಡ ಇತಿಹಾಸವನ್ನು ಹೊಂದಿದೆ. ಅಲ್ಲದೆ ಕಳೆದೆರಡು ದಶಕಗಳಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ.

ಕಳೆದ ಆವೃತ್ತಿ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570ರ ಕ್ರೀಡಾಪಟುಗಳ ತುಕಡಿಯನ್ನು ಕಳುಹಿಸಿತ್ತು.
ಮುಂಬರುವ ಕ್ರೀಡಾಕೂಟವನ್ನು ಅಧಿಕೃತವಾಗಿ 19ನೇ ಏಷ್ಯನ್ ಗೇಮ್ಸ್ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲತಃ ಕಳೆದ ವರ್ಷ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿದೆ.
ಇನ್ನು ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆ ಪಡೆದ ಭಾರತೀಯ ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ.
ಪುರುಷ ಬ್ಯಾಡ್ಮಿಂಟನ್ ಕ್ರೀಡಾಪಟುಗಳು:
1. ಎಚ್ಎಸ್ ಪ್ರಣಯ್ - ಪುರುಷರ ಸಿಂಗಲ್ಸ್
2. ಕಿಡಂಬಿ ಶ್ರೀಕಾಂತ್ - ಪುರುಷರ ಸಿಂಗಲ್ಸ್
3. ಲಕ್ಷ್ಯ ಸೇನ್ - ಪುರುಷರ ಸಿಂಗಲ್ಸ್
4. ಮಿಥುನ್ ಮಂಜುನಾಥ್ - ಪುರುಷರ ಸಿಂಗಲ್ಸ್
5. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ - ಪುರುಷರ ಡಬಲ್ಸ್
6. ಚಿರಾಗ್ ಶೆಟ್ಟಿ - ಪುರುಷರ ಡಬಲ್ಸ್
7. ಧ್ರುವ ಕಪಿಲ - ಪುರುಷರ ಡಬಲ್ಸ್
8. ಎಂಆರ್ ಅರ್ಜುನ್ - ಪುರುಷರ ಡಬಲ್ಸ್
ಮಹಿಳಾ ಬ್ಯಾಡ್ಮಿಂಟನ್ ಕ್ರೀಡಾಪಟುಗಳು
9. ಪಿವಿ ಸಿಂಧು - ಮಹಿಳೆಯರ ಸಿಂಗಲ್ಸ್
10. ಅಶ್ಮಿತಾ ಚಲಿಹಾ - ಮಹಿಳೆಯರ ಸಿಂಗಲ್ಸ್
11. ಅನುಪಮಾ ಉಪಾಧ್ಯಾಯ - ಮಹಿಳೆಯರ ಸಿಂಗಲ್ಸ್
12. ಮಾಳವಿಕಾ ಬನ್ಸೋಡ್ - ಮಹಿಳೆಯರ ಸಿಂಗಲ್ಸ್
13. ಗಾಯತ್ರಿ ಗೋಪಿಚಂದ್ - ಮಹಿಳೆಯರ ಡಬಲ್ಸ್
14. ಟ್ರೀಸಾ ಜಾಲಿ - ಮಹಿಳೆಯರ ಡಬಲ್ಸ್
15. ಅಶ್ವಿನಿ ಪೊನ್ನಪ್ಪ - ಮಹಿಳೆಯರ ಡಬಲ್ಸ್
16. ತನಿಶಾ ಕ್ರಾಸ್ಟೊ - ಮಹಿಳೆಯರ/ಮಿಶ್ರ ಡಬಲ್ಸ್
17. ರೋಹನ್ ಕಪೂರ್ - ಮಿಶ್ರ ಡಬಲ್ಸ್
18. ಎನ್ ಸಿಕ್ಕಿ ರೆಡ್ಡಿ - ಮಿಶ್ರ ಡಬಲ್ಸ್
19. ಸಾಯಿ ಪ್ರತೀಕ್ ಕೆ - ಮಿಶ್ರ ಡಬಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications