2022ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಚೀನಾದ ಹ್ಯಾಂಗ್‌ಝೌನಲ್ಲಿ 2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಕೋವಿಡ್-19 ಕಾರಣದಿಂದಾಗಿ 2022ರಿಂದ 2023ಕ್ಕೆ ಬದಲಾಯಿಸಲಾಗಿದೆ.
15 ದಿನಗಳ ಕಾಲ ನಡೆಯಲಿರುವ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಆಡಿಸಲಾಗುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಪಂದ್ಯಾವಳಿಯಲ್ಲಿ ಭಾರತವು ದೊಡ್ಡ ಇತಿಹಾಸವನ್ನು ಹೊಂದಿದೆ.

ಅಲ್ಲದೆ ಕಳೆದೆರಡು ದಶಕಗಳಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸ್ಪರ್ಧಿಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570ರ ಕ್ರೀಡಾಪಟುಗಳನ್ನು ಕಳುಹಿಸಿತ್ತು.
ಮುಂಬರುವ ಕ್ರೀಡಾಕೂಟವನ್ನು ಅಧಿಕೃತವಾಗಿ 19ನೇ ಏಷ್ಯನ್ ಗೇಮ್ಸ್ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲತಃ ಕಳೆದ ವರ್ಷ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿದೆ.

1. ದಿವ್ಯಾಂಶ್ ಸಿಂಗ್ ಪನ್ವಾರ್ - ಪುರುಷರ 10 ಮೀ ಏರ್ ರೈಫಲ್, ಏರ್ ರೈಫಲ್ ಮಿಶ್ರ ತಂಡ
2. ಐಶ್ವರಿ ಪ್ರತಾಪ್ ಸಿಂಗ್ ತೋಮರ್ - ಪುರುಷರ 10 ಮೀ ಏರ್ ರೈಫಲ್, ಪುರುಷರ 50 ಮೀ ರೈಫಲ್ 3-ಸ್ಥಾನ, ಏರ್ ರೈಫಲ್ ಮಿಶ್ರ ತಂಡ
3. ರುದ್ರಂಕ್ಷ್ ಪಾಟೀಲ್ - ಪುರುಷರ 10 ಮೀ ಏರ್ ರೈಫಲ್
4. ರಮಿತಾ - ಮಹಿಳೆಯರ 10 ಮೀ ಏರ್ ರೈಫಲ್, ಏರ್ ರೈಫಲ್ ಮಿಶ್ರ ತಂಡ
5. ಮೆಹುಲಿ ಘೋಷ್ - ಮಹಿಳೆಯರ 10 ಮೀ ಏರ್ ರೈಫಲ್, ಏರ್ ರೈಫಲ್ ಮಿಶ್ರ ತಂಡ
6. ಆಶಿ ಚೌಕ್ಸೆ - ಮಹಿಳೆಯರ 10 ಮೀ ಏರ್ ರೈಫಲ್, ಮಹಿಳೆಯರ 50 ಮೀ ರೈಫಲ್ 3-ಸ್ಥಾನ
7. ಸ್ವಪ್ನಿಲ್ ಕುಸಾಲೆ - ಪುರುಷರ 50 ಮೀ ರೈಫಲ್ 3-ಸ್ಥಾನ
8. ಅಖಿಲ್ ಶೆರಾನ್ - ಪುರುಷರ 50 ಮೀ ರೈಫಲ್ 3-ಸ್ಥಾನ
9. ಸಿಫ್ಟ್ ಕೌರ್ ಸಮ್ರಾ - ಮಹಿಳೆಯರ 50 ಮೀ ರೈಫಲ್ 3-ಸ್ಥಾನ
10. ಮಾನಿನಿ ಕೌಶಿಕ್ - ಮಹಿಳೆಯರ 50 ಮೀಟರ್ ರೈಫಲ್ 3-ಸ್ಥಾನ
11. ಸರಬ್ಜೋತ್ ಸಿಂಗ್ - ಪುರುಷರ 10 ಮೀ ಏರ್ ಪಿಸ್ತೂಲ್, ಏರ್ ಪಿಸ್ತೂಲ್ ಮಿಶ್ರ ತಂಡ
12. ಶಿವ ನರ್ವಾಲ್ - ಪುರುಷರ 10 ಮೀ ಏರ್ ಪಿಸ್ತೂಲ್, ಏರ್ ಪಿಸ್ತೂಲ್ ಮಿಶ್ರ ತಂಡ
13. ಅರ್ಜುನ್ ಸಿಂಗ್ ಚೀಮಾ - ಪುರುಷರ 10 ಮೀ ಏರ್ ಪಿಸ್ತೂಲ್
14. ದಿವ್ಯಾ ಟಿಎಸ್ - ಮಹಿಳೆಯರ 10 ಮೀ ಏರ್ ಪಿಸ್ತೂಲ್, ಏರ್ ಪಿಸ್ತೂಲ್ ಮಿಶ್ರ ತಂಡ
15. ಇಶಾ ಸಿಂಗ್ - ಮಹಿಳಾ 10 ಮೀ ಏರ್ ಪಿಸ್ತೂಲ್, ಮಹಿಳಾ 25 ಮೀ ಸ್ಪೋರ್ಟ್ಸ್ ಪಿಸ್ತೂಲ್, ಏರ್ ಪಿಸ್ತೂಲ್ ಮಿಶ್ರ ತಂಡ
16. ಪಾಲಕ್ - ಮಹಿಳೆಯರ 10 ಮೀ ಏರ್ ಪಿಸ್ತೂಲ್
17. ಅನೀಶ್ - ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
18. ವಿಜಯವೀರ್ ಸಿಧು - ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್
19. ಆದರ್ಶ್ ಸಿಂಗ್ - ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
20. ರಿದಮ್ ಸಾಂಗ್ವಾನ್ - ಮಹಿಳೆಯರ 25 ಮೀ ಸ್ಪೋರ್ಟ್ಸ್ ಪಿಸ್ತೂಲ್
21. ಮನು ಭಾಕರ್ - ಮಹಿಳೆಯರ 25 ಮೀ ಸ್ಪೋರ್ಟ್ಸ್ ಪಿಸ್ತೂಲ್
22. ಪೃಥ್ವಿರಾಜ್ ತೊಯಿಂಡಮಾನ್ - ಪುರುಷರ ಟ್ರ್ಯಾಪ್
23. ಕಿನಾನ್ ಚೆನೈ - ಪುರುಷರ ಟ್ರ್ಯಾಪ್
24. ಜೋರವರ್ ಸಿಂಗ್ ಸಂಧು - ಪುರುಷರ ಟ್ರ್ಯಾಪ್
25. ಮನೀಶಾ ಕೀರ್ - ಮಹಿಳೆಯರ ಟ್ರ್ಯಾಪ್
26. ಪ್ರೀತಿ ರಾಜಕ್ - ಮಹಿಳೆಯರ ಟ್ರ್ಯಾಪ್
27. ರಾಜೇಶ್ವರಿ ಕುಮಾರಿ - ಮಹಿಳೆಯರ ಟ್ರ್ಯಾಪ್
28. ಅನಂತಜೀತ್ ಸಿಂಗ್ ನರುಕಾ - ಪುರುಷರ ಸ್ಕೀಟ್, ಸ್ಕೀಟ್ ಮಿಶ್ರ ತಂಡ
29. ಅಂಗದ್ ವೀರ್ ಸಿಂಗ್ ಬಾಜ್ವಾ - ಪುರುಷರ ಸ್ಕೀಟ್, ಸ್ಕೀಟ್ ಮಿಶ್ರ ತಂಡ
30. ಗುರ್ಜೋತ್ ಸಿಂಗ್ ಖಂಗುರಾ - ಪುರುಷರ ಸ್ಕೀಟ್
31. ಗನೆಮತ್ ಸೆಖೋನ್ - ಮಹಿಳೆಯರ ಸ್ಕೀಟ್, ಸ್ಕೀಟ್ ಮಿಶ್ರ ತಂಡ
32. ಪರಿನಾಜ್ ಧಲಿವಾಲ್ - ಮಹಿಳೆಯರ ಸ್ಕೀಟ್, ಸ್ಕೀಟ್ ಮಿಶ್ರ ತಂಡ
33. ದರ್ಶ ರಾಥೋಡ್ - ಮಹಿಳೆಯರ ಸ್ಕೀಟ್