2023ರ ಏಷ್ಯನ್ ಗೇಮ್ಸ್ ಪಂದ್ಯಾವಳಿಯೂ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.
2022ರಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು ಕೋವಿಡ್-19 ಕಾರಣದಿಂದಾಗಿ 2023ಕ್ಕೆ ಬದಲಾಯಿಸಲಾಗಿದೆ. 15 ದಿನಗಳ ಕಾಲ ನಡೆಯುವ ಏಷ್ಯಾಡ್‌ನಲ್ಲಿ ಈ ಬಾರಿ ಏಷ್ಯಾದ ಅತ್ಯುತ್ತಮ 40 ಕ್ರೀಡೆಗಳನ್ನು ಒಳಗೊಂಡಿರುತ್ತದೆ.

ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಏಷ್ಯನ್ ಪಂದ್ಯಾವಳಿಯಲ್ಲಿ ಭಾರತ ದೊಡ್ಡ ಇತಿಹಾಸವನ್ನು ಹೊಂದಿದೆ. ಕಳೆದೆರಡು ದಶಕಗಳಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸ್ಪರ್ಧಿಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ.
2018ರಲ್ಲಿ ಜಕಾರ್ತಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570 ಸ್ಪರ್ಧಿಗಳನ್ನು ಕಳುಹಿಸಿತ್ತು.
ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದ ಭಾರತ ನಂತರದ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದೆ.
ಮುಂಬರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಅಧಿಕೃತವಾಗಿ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲವಾಗಿ ಕಳೆದ ವರ್ಷ 2022ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿತ್ತು.
1. ಅನೀಶ್ ಗೌಡ - ಪುರುಷರ ವಿಭಾಗ
2. ಅದ್ವೈತ್ ಪುಟ - ಪುರುಷರ ವಿಭಾಗ
3. ಆರ್ಯನ್ ನೆಹ್ರಾ - ಪುರುಷರ ವಿಭಾಗ
4. ಆನಂದ್ ಎಎಸ್ - ಪುರುಷರ ವಿಭಾಗ
5. ಕುಶಾಗ್ರಾ ರಾವತ್ - ಪುರುಷರ ವಿಭಾಗ
6. ಲಿಕಿತ್ ಎಸ್ಪಿ - ಪುರುಷರ ವಿಭಾಗ
7. ಸಜನ್ ಪ್ರಕಾಶ್ - ಪುರುಷರ ವಿಭಾಗ
8. ಶ್ರೀಹರಿ ನಟರಾಜ್ - ಪುರುಷರ ವಿಭಾಗ
9. ತನಿಶ್ ಜಾರ್ಜ್ ಮ್ಯಾಥ್ಯೂ - ಪುರುಷರ ವಿಭಾಗ
10. ಉತ್ಕರ್ಷ್ ಸತೋಷ್ ಪಾಟೀಲ್ - ಪುರುಷರ ವಿಭಾಗ
11. ವಿಶಾಲ್ ಗ್ರೆವಾಲ್ - ಪುರುಷರ ವಿಭಾಗ
12. ವಿರ್ಧಾವಲ್ ಖಾಡೆ - ಪುರುಷರ ವಿಭಾಗ
13. ಅನನ್ಯಾ ನಾಯಕ್ - ಮಹಿಳಾ ವಿಭಾಗ
14. ದಿನಿಧಿ ದೇಸಿಂಗು - ಮಹಿಳಾ ವಿಭಾಗ
15. ಹಶಿಕಾ ರಾಮಚಂದ್ರನ್ - ಮಹಿಳಾ ವಿಭಾಗ
16. ಲಿನ್ಯೆಶಾ ಎಕೆ - ಮಹಿಳಾ ವಿಭಾಗ
17. ಮಾನ ಪಟೇಲ್ - ಮಹಿಳಾ ವಿಭಾಗ
18. ನೀನಾ ವೆಂಕಟೇಶ್ - ಮಹಿಳಾ ವಿಭಾಗ
19. ಪಾಲಕ್ ಜೋಶಿ - ಮಹಿಳಾ ವಿಭಾಗ
20. ಶಿವಂಗಿ ಶರ್ಮಾ - ಮಹಿಳಾ ವಿಭಾಗ
21. ವೃತ್ತಿ ಅಗರ್ವಾಲ್ - ಮಹಿಳಾ ವಿಭಾಗ