2023ರ ಏಷ್ಯನ್ ಗೇಮ್ಸ್‌ಗೆ ಅಂತಿಮಗೊಂಡ ಭಾರತದ ಟೆನ್ನಿಸ್ ಆಟಗಾರರು ಯಾರು?
ಇದೇ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಕೋವಿಡ್-19 ಕಾರಣದಿಂದಾಗಿ 2022ರ ಬದಲಾಗಿ 2023ಕ್ಕೆ ಬದಲಾಯಿಸಲಾಗಿದೆ.
15 ದಿನಗಳ ಕಾಲ ನಡೆಯಲಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಪಂದ್ಯಾವಳಿಯಲ್ಲಿ ಭಾರತವು ದೊಡ್ಡ ಇತಿಹಾಸವನ್ನು ಹೊಂದಿದೆ.

ಏಷ್ಯನ್ ಗೇಮ್ಸ್‌ನ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದ ಭಾರತವು ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದೆ.
ಅಲ್ಲದೆ, ಕಳೆದೆರಡು ಹಲವು ವರ್ಷಗಳಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570ರ ಕ್ರೀಡಾಪಟುಗಳನ್ನು ಕಳುಹಿಸಿತ್ತು.
ಮುಂಬರುವ ಕ್ರೀಡಾಕೂಟವನ್ನು ಅಧಿಕೃತವಾಗಿ 19ನೇ ಏಷ್ಯನ್ ಗೇಮ್ಸ್ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲತಃ ಕಳೆದ ವರ್ಷ 2022ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿತ್ತು.
ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆ ಪಡೆದ ಭಾರತೀಯ ಟೆನ್ನಿಸ್ ಆಟಗಾರರ ಪಟ್ಟಿ ಇಲ್ಲಿದೆ.
* ರೋಹನ್ ಬೋಪಣ್ಣ - ಪುರುಷರ ಸಿಂಗಲ್ಸ್
* ಸುಮಿತ್ ನಗಲ್ - ಪುರುಷರ ಸಿಂಗಲ್ಸ್
* ಯೂಕಿ ಭಾಂಬ್ರಿ - ಪುರುಷರ ಸಿಂಗಲ್ಸ್
* ಸಾಕೇತ್ ಮೈನೇನಿ - ಪುರುಷರ ಸಿಂಗಲ್ಸ್
* ಮುಕುಂದ್ ಶಶಿಕುಮಾರ್ - ಪುರುಷರ ಸಿಂಗಲ್ಸ್
* ರಾಮ್‌ಕುಮಾರ್ ರಾಮನಾಥನ್ - ಪುರುಷರ ಸಿಂಗಲ್ಸ್
* ರುತುಜಾ ಭೋಸ್ಲೆ - ಮಹಿಳೆಯರ ಸಿಂಗಲ್ಸ್
* ಅಂಕಿತಾ ರೈನಾ - ಮಹಿಳೆಯರ ಸಿಂಗಲ್ಸ್
* ಕರ್ಮನ್ ಕೌರ್ ಥಂಡಿ - ಮಹಿಳೆಯರ ಸಿಂಗಲ್ಸ್
* ಪ್ರಾರ್ಥನಾ ತೋಂಬಾರೆ - ಮಹಿಳೆಯರ ಸಿಂಗಲ್ಸ್
* ವೈದೇಹಿ ಚೌಧರಿ - ಮಹಿಳೆಯರ ಸಿಂಗಲ್ಸ್
* ಸಹಜ ಯಮಲಪಲ್ಲಿ - ಮಹಿಳೆಯರ ಸಿಂಗಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications