2023ರ ಏಷ್ಯನ್ ಗೇಮ್ಸ್‌ಗೆ ಆಯ್ಕೆಗೊಂಡ ಭಾರತದ ಕುಸ್ತಿ ಆಟಗಾರರು
2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಕೋವಿಡ್-19 ಕಾರಣದಿಂದಾಗಿ 2022ರ ಬದಲಾಗಿ 2023ಕ್ಕೆ ಬದಲಾಯಿಸಲಾಗಿದೆ.
15 ದಿನಗಳ ಕಾಲ ನಡೆಯಲಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಪಂದ್ಯಾವಳಿಯಲ್ಲಿ ಭಾರತವು ದೊಡ್ಡ ಇತಿಹಾಸವನ್ನು ಹೊಂದಿದೆ.
ಕಳೆದೆರಡು ಹಲವು ವರ್ಷಗಳಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 36 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲು 570ರ ಕ್ರೀಡಾಪಟುಗಳನ್ನು ಕಳುಹಿಸಿತ್ತು.

ಏಷ್ಯನ್ ಗೇಮ್ಸ್‌ನ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯನ್ನು ಕೂಡ ಆಯೋಜಿಸಿದ ಭಾರತವು ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದೆ.
ಮುಂಬರುವ ಕ್ರೀಡಾಕೂಟವನ್ನು ಅಧಿಕೃತವಾಗಿ 19ನೇ ಏಷ್ಯನ್ ಗೇಮ್ಸ್ ಹ್ಯಾಂಗ್‌ಝೌ 2022 ಎಂದು ಕರೆಯಲಾಗುತ್ತದೆ. ಇದನ್ನು ಮೂಲತಃ ಕಳೆದ ವರ್ಷ 2022ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿತ್ತು.
ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆ ಪಡೆದ ಭಾರತೀಯ ಕುಸ್ತಿ ಆಟಗಾರರ ಪಟ್ಟಿ ಇಲ್ಲಿದೆ.
1. ಪೂಜಾ ಗೆಹ್ಲೋಟ್ - ಮಹಿಳೆಯರ 50 ಕೆ.ಜಿ
2. ವಿನೇಶ್ ಫೋಗಟ್ - ಮಹಿಳೆಯರ 53 ಕೆಜಿ (ಅಂತಿಮ್ ಪಂಘಲ್ ಸ್ಟ್ಯಾಂಡ್‌ಬೈ ಆಗಿ)
3. ಮಾನ್ಸಿ ಅಹ್ಲಾವತ್ - ಮಹಿಳೆಯರ 57 ಕೆ.ಜಿ
4. ಸೋನಮ್ ಮಲಿಕ್ - ಮಹಿಳೆಯರ 62 ಕೆ.ಜಿ
5. ರಾಧಿಕಾ - ಮಹಿಳೆಯರ 68 ಕೆ.ಜಿ
6. ಕಿರಣ್ - ಮಹಿಳೆಯರ 76 ಕೆ.ಜಿ
7. ಜ್ಞಾನೇಂದರ್ - ಗ್ರೀಕೋ-ರೋಮನ್ 60 ಕೆ.ಜಿ
8. ನೀರಜ್ - ಗ್ರೀಕೋ-ರೋಮನ್ 67 ಕೆ.ಜಿ
9. ವಿಕಾಶ್ - ಗ್ರೀಕೋ-ರೋಮನ್ 77 ಕೆ.ಜಿ
10. ಸುನಿಲ್ ಕುಮಾರ್ - ಗ್ರೀಕೋ-ರೋಮನ್ 87 ಕೆ.ಜಿ
11. ನರಿಂದರ್ ಚೀಮಾ - ಗ್ರೀಕೋ-ರೋಮನ್ 97 ಕೆ.ಜಿ
12. ನವೀನ್ - ಗ್ರೀಕೋ-ರೋಮನ್ 130 ಕೆ.ಜಿ
13. ಅಮನ್ ಸೆಹ್ರಾವತ್ - ಪುರುಷರ 57 ಕೆ.ಜಿ
14. ಬಜರಂಗ್ ಪುನಿಯಾ - ಪುರುಷರ 65 ಕೆಜಿ (ವಿಶಾಲ್ ಕಾಲಿರಾಮನ್ ಸ್ಟ್ಯಾಂಡ್‌ಬೈ)
15. ಯಶ್ - ಪುರುಷರ 74 ಕೆ.ಜಿ
16. ದೀಪಕ್ ಪುನಿಯಾ - ಪುರುಷರ 86 ಕೆ.ಜಿ
17. ವಿಕ್ಕಿ - ಪುರುಷರ 97 ಕೆ.ಜಿ
18. ಸುಮಿತ್ - ಪುರುಷರ 125 ಕೆ.ಜಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications