Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games Facts: ಏಷ್ಯನ್ ಗೇಮ್ಸ್ ಇತಿಹಾಸದ 5 ಕುತೂಹಲಕಾರಿ ಸತ್ಯಗಳು!

2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನು ಮೂರು ತಿಂಗಳಿಗೂ ಕಡಿಮೆ ಸಮಯವಿದ್ದು ಈಗಾಗಲೇ ದಿನಗಣನೆ ಶುರುವಾಗಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ಚೀನಾದ ಹಾಂಗ್ಜೂ ನಗರದಲ್ಲಿ ನಡೆಯಲಿದ್ದು ಮುಂಬರುವ ಸೆಪ್ಟೆಂಬರ್ 23ರಂದು ಆರಂಭವಾಗಿ ಅಕ್ಟೋಬರ್ 8ರಂದು ಟೂರ್ನಿ ಅಂತ್ಯವಾಗಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲು ಏಷ್ಯಾದ ಕ್ರೀಡಾಪಟುಗಳು ಸರ್ವ ಸಿದ್ಧತೆಯನ್ನು ನಡೆಸುತ್ತಿದ್ದಾರೆ.

ಏಷ್ಯಾದ ರಾಷ್ಟ್ರಗಳು ಭಾಗಿಯಾಗುವ ಈ ಅತಿ ದೊಡ್ಡ ಕ್ರೀಡಾಕೂಟ ಸುದೀರ್ಘ ಇತಿಹಾಸವನ್ನು ಹೊಂದಿದ್ದು 1951ರಿಂದ ಆಯೋಜನೆಯಾಗುತ್ತಾ ಬಂದಿದೆ. ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ಸ್ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಮತ್ತೊಂದು ಅತ್ಯುನ್ನತ ಕ್ರೀಡಾಕೂಟ ಎನಿಸಕೊಂಡಿದೆ ಏಷ್ಯನ್ ಗೇಮ್ಸ್. ಈ ಏಷ್ಯನ್ ಗೇಮ್ಸ್ ಕುರಿತ ನಿಮಗೆ ತಿಳಿದಿರದ 6 ಕುತೂಹಲಕಾರಿ ಮಾಹಿತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮುಂದೆ ಓದಿ..

Asian Games: 5 Interesting Facts of Asiad in Kannada

1. ಭಾರತದಲ್ಲೇ ನಡೆದಿತ್ತು ಮೊದಲ ಏಷ್ಯನ್ ಗೇಮ್ಸ್
ಏಷ್ಯನ್ ಗೇಮ್ಸ್ ಕ್ರೀಡಾಕೂಟ 1951ರಿಂದ ಆರಂಬವಾಯಿತು. ಮೊದಲ ಕ್ರೀಡಾಕೂಟವನ್ನು ಭಾರತವೇ ಆಯೋಜನ ಮಾಡಿದ್ದು ದೆಹಲಿಯಲ್ಲಿ ಈ ಕ್ರೀಡಾಕೂಟ ನಡೆದಿತ್ತು ಎಂಬುದು ಭಾರತದ ಹೆಗ್ಗಳಿಕೆ.

2. ಏಷ್ಯನ್ ಗೇಮ್ಸ್‌ಗೆ ಇದೆ ಮತ್ತೊಂದು ಹೆಸರು
ಏಷ್ಯನ್ ಗೇಮ್ಸ್ ಮತ್ತೊಂದು ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ. ಅದುವೇ ಏಷ್ಯಾಡ್. ಈ ಬಹು ಕ್ರೀಡೆಗಳ ಕ್ರೀಡಾಕೂಟ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುತ್ತಿದ್ದು ಏಷ್ಯಾದ ಎಲ್ಲಾ ರಾಷ್ಟ್ರಗಳ ಕ್ರೀಡಾಪಟುಗಳು ಇದರಲ್ಲಿ ಭಾಗುಯಾಗುತ್ತಾರೆ.

3.ಏಷ್ಯನ್ ಗೇಮ್ಸ್ ನಿಯಂತ್ರಿಸುವುದು ಯಾರು?
ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಮೇಲ್ವಿಚಾರಣೆಯಲ್ಲಿ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ನಿಯಂತ್ರಣ ಮಾಡುತ್ತದೆ.

4. ಜಕಾರ್ತಾದಲ್ಲಿ ನಡೆದಿತ್ತು ಈ ಹಿಂದಿನ ಏಷ್ಯನ್ ಗೇಮ್ಸ್
ಏಷ್ಯನ್ ಗೇಮ್ಸ್ ಕ್ರೀಡಾಕೂಟ 18ನೇ ಆವೃತ್ತಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ಆಯೋಜನೆಯಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾರತ 15 ಚಿನ್ನದ ಪದಕ, 24 ಬೆಳ್ಳಿ ಪದಕ ಹಾಗೂ 30 ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿತ್ತು.

5. 2022ರಲ್ಲಿ ಆಯೋಜನೆಯಾಗಬೇಕಿದ್ದ ಏಷ್ಯನ್ ಗೇಮ್ಸ್
ಏಷ್ಯನ್ ಗೇಮ್ಸ್ ಕ್ರೀಡಾಕೂಟದ 19ನೇ ಆವೃತ್ತಿ ಜೀನಾದ ಹಾಂಗ್ಜೂ ನಗರದಲ್ಲಿ ಆಯೋಜನೆಯಾಗಲಿದೆ. ಈ ಕ್ರೀಡಾಕೂಟ 2022ರಲ್ಲಿ ಆಯೋಜನೆಗೆ ನಿಗದಿಯಾಗಿತ್ತು. ಆದರೆ ಆ ಸಂದರ್ಬದಲ್ಲಿ ಚೀನಾದಲ್ಲಿ ಕೊರೊನಾವೈರಸ್ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದ ಕಾರಣ 2023ಕ್ಕೆ ಮುಂದೂಡಲಾಗಿತ್ತು. ಮುಂಬರುವ ಸೆಪ್ಟೆಂಬರ್ 23ರಂದು ಆರಂಭವಾಗಿ ಅಕ್ಟೋಬರ್ 8ರಂದು ಟೂರ್ನಿ ಅಂತ್ಯವಾಗಲಿದೆ

Story first published: Tuesday, July 11, 2023, 22:01 [IST]
Other articles published on Jul 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+