For Quick Alerts
ALLOW NOTIFICATIONS  
For Daily Alerts

Asian Games: ಮಹಿಳೆಯರ ಬಳಿಕ ಪುರುಷರ ಆರ್ಚರಿ ತಂಡಕ್ಕೂ ಚಿನ್ನದ ಪದಕ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕಾಂಪೌಂಡ್ ಪುರುಷರ ಸ್ಪರ್ಧೆಯಲ್ಲಿಯೂ ಭಾರತ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಓಜಸ್ ಪ್ರವೀಣ್ ಡಿಯೋಟಾಲೆ, ಅಭಿಷೇಕ್ ವರ್ಮಾ ಮತ್ತು ಪ್ರಥಮೇಶ್ ಸಮಾಧಾನ್ ಜಾವ್ಕರ್ ಅವರನ್ನೊಳಗೊಂಡ ತಂಡ ಈ ಸಾಧನೆ ಮಾಡಿದೆ. ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗಿದ್ದ ದಕ್ಷಿಣ ಕೊರಿಯಾ ವಿರುದ್ಧ 235-230 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ.

ಇನ್ನು ಈ ಸ್ಪರ್ಧೆಯಲ್ಲಿ ಭಾರತ ಆರಂಭಿಕ ಹಂತದಿಂದಲೇ ಪ್ರಾಬಲ್ಯ ಸಾಧಿಸಿತ್ತು. ಮೊದಲ ಸುತ್ತಿನಲ್ಲಿ ಭಾರತ 58-55 ಅಂತರದಿಂದ ಮುನ್ನಡೆ ಪಡೆದುಕೊಂಡಿತ್ತು. ಆದರೆ ಎರಡನೇ ಸುತ್ತಿನಲ್ಲೊ ಕೊರಿಯಾ ಕೂಡ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ದರೂ ಭಾರತ ತಂಡ ಮೊದಲಾರ್ಧದ ಅಂತ್ಯದಲ್ಲಿ 116-114 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.

Asian Games: After Indian Womens team Mens archery Compound Team also won Gold medal

ಇನ್ನು ಮೂರನೇ ಸುತ್ತಿನಲ್ಲಿ ಭಾರತ 59 ಅಂಕಗಳನ್ನು ಗಳಿಸಿಕೊಂಡಿತು. ಈ ಮೂಲಕ 175-171ಕ್ಕೆ ಅಂತರದಿಂದ ಮುನ್ನಡೆ ಪಡೆದುಕೊಂಡಿತು. ಕೊನೆಯ 4ನೇ ಹಂತದಲ್ಲಿ ದಕ್ಷಿಣ ಕೊರಿಯಾದ ಜೊಂಘೋ ಕಿಮ್, ಜೇವೊನ್ ಯಾಂಗ್ ಮತ್ತು ಜೇಹೂನ್ ಮತ್ತು ಜು ಅವರು ತೀವ್ರವಾಗಿ ಹೋರಾಟ ನಡೆಸಿದರು. ಭಾರತದ ಅಂತರದವನ್ನು ತಗ್ಗಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಂತಾಗಿದೆ.

ಇನ್ನು ಇದಕ್ಕೂ ಮುನ್ನ ಗುರುವಾರ ಮುಂಜಾನೆ ಭಾರತದ ಮಹಿಳಾ ಕಾಂಪೌಡ್ ಆರ್ಚರಿ ತಂಡ ಚೈನೀಸ್ ತೈಪೆ ತಂಡವನ್ನು ಮಣಿಸಿದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಫೈನಲ್ ಸೆಣೆಸಾಟದಲ್ಲಿ ಭಾರತ ತಂಡ ಎದುರಾಳಿ ವಿರುದ್ಧ 230-229 ಅಂತರದಿಂದ ಗೆಲುವು ಸಾಧಿಸಿದ್ದು ಭಾರತದ ಆರ್ಚರ್‌ಗಳಾದ ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿತು.

ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭಾರತ ಪುರುಷರ ಆರ್ಚರಿಯಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ತನ್ನ 21 ನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿಯೇ ಇದು ಭಾರತದ ಸಾರ್ವಕಾಲಿಕ ಶ್ರೇಷ್ಠ ಸಾಧನೆಯಾಗಿದೆ. ಇದರ ಜೊತೆಗೆ ಭಾರತ 31 ಬೆಳ್ಳಿ ಪದಕ ಹಾಗೂ 32 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಒಟ್ಟಾರೆಯಾಗಿ 84 ಪದಕಗಳನ್ನು ಗಳಿಸಿದ್ದು ಇದು ಕೂಡ ಭಾರತದ ಅತ್ಯುನ್ನತ ಸಾಧನೆ ಎನಿಸಿಕೊಂಡಿದೆ.

Story first published: Thursday, October 5, 2023, 16:24 [IST]
Other articles published on Oct 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+