For Quick Alerts
ALLOW NOTIFICATIONS  
For Daily Alerts

Asian Games: ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ಮಹಿಳಾ ತಂಡ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಅಕ್ಟೋಬರ್ 5 ಗುರುವಾರದಂದು ಭಾರತದ ಮಹಿಳಾ ಕಾಂಪೌಡ್ ಆರ್ಚರಿ ತಂಡ ಚೈನೀಸ್ ತೈಪೆ ತಂಡವನ್ನು ಮಣಿಸಿದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಫೈನಲ್ ಸೆಣೆಸಾಟದಲ್ಲಿ ಭಾರತ ತಂಡ ಎದುರಾಳಿ ವಿರುದ್ಧ 230-229 ಅಂತರದಿಂದ ಗೆಲುವು ಸಾಧಿಸಿದ್ದು ಭಾರತದ ಆರ್ಚರ್‌ಗಳಾದ ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿದೆ.

ನಿರ್ಣಾಯಕ ಹಂತದ ಆರಂಭದಲ್ಲಿ ಎರಡು ತಂಡಗಳ ಅಂಕಗಳು ಸಮವಾಗಿದ್ದವು. ಭಾರತಕ್ಕೆ ಮೊದಲ ಗುರಿಯ ಅವಕಾಶವಿತ್ತು ಹೀಗಾಗಿ 230 ಅಂಕಗಳನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಚೈನೀಸ್ ತೈಪೆಗೆ ತಮ್ಮ ಅಂತಿಮ ಮೂರು ಶಾಟ್‌ಗಳಲ್ಲಿ ಸಂಪೂರ್ಣ 30 ಅಂಕಗಳ ಅಗತ್ಯವಿತ್ತು. ಆರೆ 29 ಅಂಕಗಳನ್ನು ಮಾತ್ರವೇ ಅದು ಯಶಸ್ವಿಯಾಯಿತು.

Asian Games Archery: Indian Womens Compound Team clinches Gold medal

ಭಾರತ ಅದ್ಭುತವಾದ ಆರಂಭವನ್ನು ಪಡೆದುಕೊಂಡಿತ್ತು. ಮೊದಲ ಮೂರು ಹೊಡೆತಗಳ ಬಳಿಕ 28-27 ಅಂತರದಿಂದ ಭಾರತ ಮುನ್ನಡೆ ಗಳಿಸಿತ್ತು. ಆದರೆ ನಂತರ ಚೈನೀಸ್ ತೈಪೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸೆಟ್ ಹೊಡೆತಗಳ ನಂತರ 56-54 ಮುನ್ನಡೆ ಸಾಧಿಸಿತ್ತು ಚೈನೀಸ್ ತೈಪೆ.

ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಎರಡನೇ ಸೆಟ್ ಶಾಟ್‌ಗಳಲ್ಲಿ ಒಂಬತ್ತು-ಪಾಯಿಂಟರ್‌ಗಳನ್ನು ಮಾತ್ರ ಗಳಿಸಿದರು. ಇದು ತೈಪೆ ತಮ್ಮ ಮುನ್ನಡೆಯನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿತು. ತೈಪೆಯ ಆರ್ಚರ್ ಏಳು-ಪಾಯಿಂಟ್ ಹೊಡೆತ ಮೊದಲಾರ್ಧದ ಹಂತದಲ್ಲಿ ಭಾರತವನ್ನು 112-111 ರಿಂದ ಮುನ್ನಡೆಸಲು ಅವಕಾಶ ಮಾಡಿಕೊಟ್ಟಿತು.

ಮೂರನೇ ಸೆಟ್‌ನಲ್ಲಿ ತೈಪೆ ಆರು 10-ಪಾಯಿಂಟರ್‌ಗಳನ್ನು ಗಳಿಸಿ ಅಂತರವನ್ನು ಕಡಿಮೆ ಮಾಡಿಕೊಂಡಿತು. ಭಾರತವು ಕೇವಲ ಐದು 10 ಅಂಕಗಳನ್ನು ಮಾತ್ರವೇ ಗಳಿಸಿತ್ತು ಹಾಗೂ ಒಂದು ಒಂಬತ್ತು ಅಂಕಗಳನ್ನು ಪಡೆದುಕೊಂಡಿತ್ತು. ಇದರ ಪರಿಣಾಮವಾಗಿ 171 ಅಂಕಗಳ ಸಮಬಲದ ಸ್ಕೋರ್ ಅಂತಿಮ ಅಂತ್ಯಕ್ಕೆ ಹೋಯಿತು. ನಿರ್ಣಾಯಕ ಕದನದಲ್ಲಿ ಭಾರತದ ಆರ್ಚರ್‌ಗಳು ಭರ್ಜರಿ ಹೋರಾಟ ಪ್ರದರ್ಶಿಸಿ ಚಿನ್ನದ ಪದಕ ಗೆಲ್ಲಲು ಕಾರಣವಾದರು.

Story first published: Thursday, October 5, 2023, 10:41 [IST]
Other articles published on Oct 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+