ಏಷ್ಯನ್ ಗೇಮ್ಸ್: ಮಹಿಳಾ 100 ಮೀ.ನಲ್ಲಿ ಬೆಳ್ಳಿಯೊಂದಿಗೆ ಮಿನುಗಿದ ದ್ಯುತೀ

ಜಕಾರ್ತಾ, ಆಗಸ್ಟ್ 26: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 7ನೇ ದಿನ ಭಾರತದ ಅಥ್ಲೆಟಿಕ್ಸ್ ವಿಭಾಗಕ್ಕೆ ಸಾಲು ಸಾಲು ಪದಕಗಳು ಲಭಿಸಿವೆ. ಮಹಿಳಾ ವಿಭಾಗದ 100 ಮೀ. ಓಟದಲ್ಲಿ ಭಾರತದ ಮಿಂಚಿನ ಓಟಗಾರ್ತಿ ದ್ಯುತೀ ಚಂದ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 26ರ ಭಾನುವಾರ ನಡೆದ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ದ್ಯುತೀ ಬೆಳ್ಳಿಯೊಂದಿಗೆ ಮಿನುಗಿದರು. ಚಂದ್ ಅವರು 11.32 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು. ಲಿಂಗ ವಿವಾದಕ್ಕೆ ಗುರಿಯಾಗಿದ್ದ ದ್ಯುತಿ ಈ ಮೊದಲು ನಿಷೇಧಕ್ಕೆ ಒಳಗಾಗಿದ್ದರು. ಇತ್ತೀಚೆಗಷ್ಟೇ ಚಂದ್ ಮೇಲಿನ ನಿಷೇಧ ತೆಗೆದು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
ಈ ದಿನ (ಆಗಸ್ಟ್ 26) ಶಾಟ್ ಪುಟ್ ನಲ್ಲಿ ತೇಜೀಂದರ್ ಪಾಲ್ ಸಿಂಗ್ ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನ, ಮಹಿಳಾ 400 ಮೀ. ನಲ್ಲಿ ಹಿಮಾದಾಸ್ ಬೆಳ್ಳಿ, ಪುರುಷರ ವಿಭಾಗದಲ್ಲಿ ಮೊಹಮ್ಮದ್ ಅನಸ್ ಯಾಹಿಯ ಬೆಳ್ಳಿ ಜಯಿಸಿದ್ದರು.
Story first published: Sunday, August 26, 2018, 20:30 [IST]
Other articles published on Aug 26, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications