Asian Games: ಮಿಂಚಿದ ಕನ್ನಡಿಗ ಅಶ್ವಲ್ ರೈ: ದ. ಕೊರಿಯಾಗೆ ಆಘಾತ ನೀಡಿದ ಭಾರತದ ವಾಲಿಬಾಲ್ ತಂಡ
ಭಾರತದ ಪುರುಷರ ವಾಲಿಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಬೃಹತ್ ಬೇಟೆಯಾಡಿದೆ. ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ತಂಡ ದಕ್ಷಿಣ ಕೊರಿಯಾವನ್ನು ಭಾರತ ಮಣಿಸಿದ್ದು ರೋಚಕ ಗೆಲುವು ಸಾಧಿಸಿದೆ. ಐದು ಸೆಟ್‌ಗಳ ರೋಚಕ ಕದನದಲ್ಲಿ ಗೆಲುವು ಸಾಧಿಸಿದ ಭಾರತ ತಂಡ ನಾಕೌಟ್‌ಗೆ ಪ್ರವೇಶ ಪಡೆದುಕೊಂಡಿದೆ.
ಎರಡು ಗಂಟೆ 38 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ 3-2 (25-27, 29-27, 25-22, 20-25, 17-15) ಅಂತರದದಿಂದ ಗೆಲುವು ಸಾಧಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಕಾಂಬೋಡಿಯಾವನ್ನು 3-0 ಗೋಲುಗಳಿಂದ ಸೋಲಿಸಿದ್ದ ಭಾರತ ಐದು ಅಂಕ ಕಲೆಹಾಕಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಈ ಪಂದ್ಯದಲ್ಲಿ ಕನ್ನಡಿಗ ಅಶ್ವಲ್ ರೈ ಮತ್ತು ಅಮಿತ್ ಗುಲಿಯಾ ಭಾರತದ ಪರವಾಗಿ ಸ್ಟಾರ್ ಪ್ರದರ್ಶನಕಾರರಾಗಿ ಹೊರಹೊಮ್ಮಿದ್ದಾರೆ. ಈ ಇಬ್ಬರು ಆಟಗಾರರು ಈ ಪಂದ್ಯದಲ್ಲಿ ಭಾರತ ತಂಡ ತಂಡವು ನಿರ್ಣಾಯಕ ಅಂಕಗಳನ್ನು ಗಳಿಸಲು ಸಹಾಯ ಮಾಡಿದರು. ಈ ಮೂಲಕ ಭಾರತ ತಂಡ ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧ ರೋಮಾಂಚನಕಾರಿ ಗೆಲುವು ಸಾಧಿಸಿದೆ.
ಭಾರತ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆ ಅಥವಾ ಮಂಗೋಲಿಯಾ ವಿರುದ್ಧ ಆಡಲಿದೆ. ಭಾರತ ಏಷ್ಯನ್ ಗೇಮ್ಸ್ ವಾಲಿಬಾಲ್‌ನಲ್ಲಿ ತನ್ನ ಕೊನೆಯ ಪದಕವನ್ನು 1986 ಆವೃತ್ತಿಯಲ್ಲಿ (ಕಂಚಿನ) ಗೆದ್ದುಕೊಂಡಿತ್ತು. ಇಂಡೋನೇಷ್ಯಾದಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಭಾರತ 12ನೇ ಸ್ಥಾನವನ್ನು ಪಡೆದುಕೊಂಡಿತ್ತು. ದಕ್ಷಿಣ ಕೊರಿಯಾ ವಿರುದ್ಧ ಇಂದು ಭಾರತ ಸಾಧಿಸಿದ ಗೆಲುವು ಐತಿಹಾಸಿಕ ಪದಕದ ಭರವಸೆ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications