Asian Games: ಅಂಜು ಬಾಬು ಜಾರ್ಜ್ 'ಚಿನ್ನದ' ಜಿಗಿತದ ಹಿಂದೆ ಇದ್ದಿದ್ದು ಅದೊಂದು ದೃಢ ಸಂಕಲ್ಪ!
ಅಂಜು ಬಾಬಿ ಜಾರ್ಜ್.. ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು. 2002ರಲ್ಲಿ ನಡೆದ ಬೂಸಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಅಂಜು ಚಿನ್ನದ ಪದಕವನ್ನು ಗೆದ್ದು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ರಥಮ ಮಹಿಳಾ ಅಥ್ಲೀಟ್ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದ ಕ್ರೀಡಾ ವಲಯದಲ್ಲಿ ಅಂಜು ಬಾಬಿ ಜಾರ್ಜ್ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದರು.
ಜಾಂಗ್ ಜಂಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಂಜು ಬಾಬಿ ಜಾರ್ಜ್ ಇಡೀ ದೇಶವೇ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದರು. ಅದಾದ ಬಳಿಕ ದೋಹಾದಲ್ಲಿ ನಡೆದ ನಂತರದ ಏಷ್ಯನ್ ಗೇಮ್ಸ್‌ನಲ್ಲಿಯೂ ಅಂಜು ಬಾಬಿ ಜಾರ್ಜ್ ಬೆಳ್ಳಿಯ ಪದಕ ಗೆದ್ದು ಮಿಂಚಿದ್ದರು.

ಕನಸು ಬೆನ್ನತ್ತಿದ್ದ ಅಂಜು
ಏಷ್ಯನ್ ಗೇಮ್ಸ್‌ಗೂ ಮುನ್ನ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಅದೇ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಆಯೊಜನೆಯಾಗಿತ್ತು. ಆ ಕ್ರೀಡಾಕೂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಂಜು ಬಾಬಿ ಜಾರ್ಜ್ ಅಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಆ ಸಂದರ್ಭದಲ್ಲಿಯೇ ಅಂಜು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದೇ ಗೆಲ್ಲಬೇಕು ಎಂಬ ಛಲ ಹುಟ್ಟಿಕೊಂಡಿತ್ತು. ತನ್ನ ಸಂಪೂರ್ಣ ಗಮನವನ್ನು ಆ ಒಂದೇ ಗುರಿಯತ್ತ ನೆಟ್ಟಿದ್ದ ಅಂಜು ಬಾಬಿ ಜಾರ್ಜ್ ಅದಕ್ಕಾಗಿ ಸರ್ವ ಪ್ರಯತ್ನವನ್ನೂ ನಡೆಸಿದ್ದರು.
ಇಡೀ ದೇಶ ಹೆಮ್ಮೆ ಪಟ್ಟುಕೊಂಡ ಕ್ಷಣ
ಬೂಸಾನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವುದು ಮಾತ್ರವೇ ಅಂಜು ಬಾಬಿ ಜಾರ್ಜ್ ಗುರಿಯಾಗಿತ್ತು. ಆದರೆ ಈ ಕ್ರೀಡಾಕೂಟದಲ್ಲಿ ತನ್ನ ಸ್ಪರ್ಧೆಗೆ ಕೇವಲ ಒಂದು ದಿನ ಮುನ್ನ ತಲುಪಿದ್ದರು. ಹಾಗಾಗಿ ಅಲ್ಲಿನ ವಾತಾವರಣದಲ್ಲಿ ಅಭ್ಯಾಸ ನಡೆಸಲು ಅವರಿಗೆ ಸಮಯಾವಕಾಶ ದೊರೆಯಲೇ ಇಲ್ಲ. ಆದರೆ 6.53 ದೂರಕ್ಕೆ ಜಿಗಿದು ಲಾಂಗ್ ಜಂಪ್‌ನಲ್ಲಿ ಅಂಜು ಇತಿಹಾಸವನ್ನು ಬರೆದಿದ್ದರು. ಆ ಕ್ಷಣ ಇಡೀ ದೇಶಕ್ಕೆ ಅಕ್ಷರಶಃ ಸುವರ್ಣ ಕ್ಷಣವಾಗಿತ್ತು.
ಚಿನ್ನ ಗೆದ್ದ ಆ ಕ್ಷಣದ ಬಗ್ಗೆ ಅಂಜು ಮಾತು
2002ರಲ್ಲಿ ಬೂಸಾನ್‌ಗೆ ಪ್ರಯಾಣಿಸುವುದಕ್ಕೂ ಮುನ್ನ ನನ್ನ ಮುಂದಿದ್ದ ಒಂದೇ ಗುರಿಯೆಂದರೆ ಅದು ಚಿನ್ನದ ಪದಕವಾಗಿತ್ತು. ಅದಕ್ಕಿಂತ ಕಡಿಮೆ ಯಾವುದಕ್ಕೂ ನಾನು ಸಿದ್ಧಳಿರಲಿಲ್ಲ. ಅದೇ ವರ್ಷ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾನು ಕಂಚಿನ ಪದಕ ಗೆದ್ದಿದ್ದೆ. ಹಾಗಾಗಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ನನ್ನ ಹುರುಪು ಹೆಚ್ಚಾಗಿತ್ತು. ಅದೇ ಸಂದರ್ಭದಲ್ಲಿ ನನಗೆ ಈ ಕ್ರೀಡಾ ಕೂಟದಲ್ಲಿ ಮಹಿಳಾ ಲಾಂಗ್‌ಜಂಪ್‌ನಲ್ಲಿ ಈವರೆಗೆ ಯಾರೂ ಕೂಡ ಚಿನ್ನ ಗೆದ್ದಿಲ್ಲ ಎಂಬುದು ಕೂಡ ತಿಳಿಯಿತು. ಅದನ್ನು ಸಾಧಿಸಿದ್ದು ನನಗೆ ನಿಜಕ್ಕೂ ಹೆಮ್ಮೆಯಿದೆ. ಬೂಸಾನ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪರವಾಗಿ ಮೊದಲ ಚಿನ್ನದ ಪದಕ ಗೆದ್ದ ಕ್ರೀಡಾಪಟು ನಾನೇ ಆಗಿದ್ದೆ. ಅದು ಕೂಡ ನನ್ನ ಸಂತಸವನ್ನು ಹೆಚ್ಚಿಸಿತ್ತು" ಎಂದು ಅಂಜು ಬಾಬಿ ಜಾರ್ಜ್ ಈ ಬಗ್ಗೆ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications