Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂತ್ ವರ್ಲ್ಡ್ ರೆಕಾರ್ಡ್, ಏಷ್ಯನ್ ರೆಕಾರ್ಡ್ ಬರೆದ ಭಾರತದ ಲಿಫ್ಟರ್ ಜೆರೆಮಿ

Asian Weighlifting: Jeremy Lalrinnunga smashes Youth World record

ನಿಂಗ್ಬೋ, ಏಪ್ರಿಲ್ 21: ಚೀನಾದ ನಿಂಗ್ಬೋದಲ್ಲಿ ಭಾನುವಾರ (ಏಪ್ರಿಲ್ 21) ನಡೆದ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 67 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪ್ರತಿಭಾನ್ವಿತ ಲಿಫ್ಟರ್ ಜೆರೆಮಿ ಲಲ್ರಿನ್ನಂಗ ಅವರು ಯೂತ್ ವರ್ಲ್ಡ್ ರೆಕಾರ್ಡ್, ನ್ಯಾಷನಲ್ ಸೀನಿಯರ್ ರೆಕಾರ್ಡ್ ನೊಂದಿಗೆ ಗ್ರೂಪ್ 'ಬಿ'ಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಗ್ರೂಪ್ 'ಬಿ'ಯ ಪುರುಷರ 67 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ 16ರ ಹರೆಯದ ಜೆರೆಮಿ, ಸ್ನ್ಯಾಚ್, ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ ಒಟ್ಟು 297 ಕೆಜಿ (134 ಕೆಜಿ+163 ಕೆಜಿ) ಭಾರ ಎತ್ತುವ ಮೂಲಕ ಯೂತ್ ವಿಶ್ವ ದಾಖಲೆ ಮತ್ತು ಏಷ್ಯನ್ ದಾಖಲೆ ನಿರ್ಮಿಸಿದ್ದಾರೆ. ಜೆರೆಮಿ ಈ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಹಿರಿಯರ ವಿಭಾಗದ ದಾಖಲೆಯಾಗಿಯೂ ಗುರುತಿಸಿಕೊಂಡಿದೆ.

ಜೆರೆಮಿ ಈ ಸಾಧನೆ ಅವರನ್ನು ಗ್ರೂಪ್ ಬಿಭಾಗದಲ್ಲಿ ದ್ವಿತೀಯ ಸ್ಥಾನದಲ್ಲಿ ತಂದು ನಿಲ್ಲಿಸಿದೆ. ಗ್ರೂಪ್ 'ಬಿ'ಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನದ ಲಿಫ್ಟರ್ ತಲ್ಹಾ ತಾಲಿಬ್ ಒಟ್ಟು 304 ಕೆಜಿ (140 ಕೆಜಿ+164 ಕೆಜಿ) ಸಾಧನೆ ತೋರಿದ್ದರು. ಸೋಮವಾರ (ಏಪ್ರಿಲ್ 22) ಗ್ರೂಪ್ 'ಎ' ಸ್ಪರ್ಧೆಯ ಬಳಿಕ ಪುರುಷರ 67 ಕೆಜಿ ವಿಭಾಗದ ಅಂತಿಮ ಸ್ಥಾನಗಳ ಸ್ಪಷ್ಟ ಚಿತ್ರಣ ಲಭಿಸಲಿದೆ.

Story first published: Sunday, April 21, 2019, 17:20 [IST]
Other articles published on Apr 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+