ಏಷ್ಯನ್ ಗೇಮ್ಸ್ 2018: ಪುರುಷರ ಹಾಕಿ, ಟೆನಿಸ್ ಡಬಲ್ಸ್ ತಂಡ ಮುನ್ನಡೆ

ಜಕಾರ್ತಾ, ಆಗಸ್ಟ್ 20: ಏಷ್ಯನ್ ಗೇಮ್ಸ್ ಆರಂಭಗೊಂಡು ಎರಡನೇ ದಿನದಾಂತ್ಯಕ್ಕೆ ಭಾರತ 5 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪುರುಷರ ಹಾಕಿ ತಂಡ ಮತ್ತು ಪುರುಷರ ಟೆನಿಸ್ ಡಬಲ್ಸ್ ತಂಡವೂ ಮುನ್ನಡೆ ಸಾಧಿಸಿದ್ದು ಪದಕದಾಸೆ ಮೂಡಿಸಿದೆ.
ಪೂಲ್ ಎಯಲ್ಲಿರುವ ಭಾರತ ಪುರುಷರ ಹಾಕಿ ತಂಡ ಸೋಮವಾರ (ಆಗಸ್ಟ್ 20) ಆತಿಥೇಯ ಇಂಡೋನೇಷ್ಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಮುನ್ನಡೆದಿದೆ. ಎದುರಾಳಿ ವಿರುದ್ಧ ಭಾರತ 17-0 ಗೋಲ್ ದಾಖಲಿಸಿತು. ದ್ವಿತೀಯ ಸುತ್ತಿನ ಪಂದ್ಯ ಆಗಸ್ಟ್ 22ರಂದು ನಡೆಯಲಿದ್ದು, ಭಾರತ ಅಂದು ಹಾಂಗ್ ಕಾಂಗ್ ಸವಾಲು ಸ್ವೀಕರಿಸಲಿದೆ.
ಏಷ್ಯನ್ ಗೇಮ್ಸ್ 2018ರ ಮುಖಪುಟಕ್ಕಾಗಿ ಕ್ಲಿಕ್ ಮಾಡಿ
ಸೋಮವಾರ ಮುಕ್ತಾಯಗೊಂಡ ಪುರುಷರ ಟೆನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ದಿವಿಜ್ ಶರಣ್ ಮತ್ತು ರೋಹನ್ ಬೋಪಣ್ಣ ಅವರನ್ನೊಳಗೊಂಡ ತಂಡ ಆತಿಥೇಯ ಇಂಡೋನೇಷ್ಯವನ್ನು ಹಿಮ್ಮೆಟ್ಟಿಸಿದೆ. ಭಾರತದ ಜೋಡಿ ಇಂಡೋನೇಷ್ಯಾ ವಿರುದ್ಧ 6-3, 6-3ರ ಗೆಲುವು ಸಾಧಿಸಿದೆ.
ಸೋಮವಾರ ಭಾರತ ಪದಕ ಖಾತೆಯಲ್ಲಿ 1 ಕಂಚು (ಶೂಟಿಂಗ್-ರವಿಕುಮಾರ್ ಮತ್ತು ಅಪೂರ್ವಿ), 2 ಬಂಗಾರ (ರಸ್ಲಿಂಗ್- ಬಜರಂಗ್ ಮತ್ತು ವಿನೇಶ್) ಮತ್ತು 2 ಬೆಳ್ಳಿ (ಶೂಟಿಂಗ್-ದೀಪಕ್ ಮತ್ತು ಲಕ್ಷಯ್) ಪದಕಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications