ಆಗಸ್ಟ್ 1: ಟಿ20 ಸರಣಿಗೆ ವಿಂಡೀಸ್ ತಂಡ ಪ್ರಕಟ; ಕಪಿಲ್‌ಗೆ ಜಡ್ಡು ತಿರುಗೇಟು : ಕ್ರೀಡಾ ಲೋಕದ ಇಂದಿನ ಸುದ್ದಿ
* ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಏಕದಿನ ಸರಣಿಯ ಬಳಿಕ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗೆ ವೆಸ್ಟ್ ಇಂಡಿಸ್ ತನ್ನ ಬಲಿಷ್ಠ ಆಟಗಾರರ ತಂಡವನ್ನು ಪ್ರಕಟಿಸಿದ್ದು ಚುಟುಕು ಸರಣಿಯಲ್ಲಿ ಭಾರತಕ್ಕೆ ಠಕ್ಕರ್ ನೀಡಲು ಸಜ್ಜಾಗಿದೆ. ಅನುಭವಿ ಹಾಗೂ ಯುವ ಆಟಗಾರ ಸಮತೋಲಿತ ತಂಡವಾಗಿ ಕಾಣಿಸುತ್ತಿದೆ ಈ ತಂಡ. ಏಕದಿನ ಮಾದರಿಯಲ್ಲಿ ನಾಯಕನಾಗಿರುವ ಶಾಯ್ ಹೋಪ್ ಹಾಗೂ ವೇಗದ ಬೌಲರ್ ಓಶಾನೆ ಥೋಮಸ್ ಈ ತಂಡಕ್ಕೆ ಮರಳಿರುವ ಪ್ರಮುಖ ಆಟಗಾರರಾಗಿದ್ದಾರೆ.
* ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್‌ದೇವ್ ಟೀಮ್ ಇಂಡಿಯಾ ಆಟಗಾರರ ವರ್ತನೆಯ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ ಕೆಲ ಕಟು ಪದಗಳನ್ನು ಬಳಸಿ ಟೀಕಿಸಿದ್ದರು. ಆಟಗಾರರು ತಮಗೆಲ್ಲಾ ತಿಳಿದಿದೆ ಎಂದು ಭಾವಿಸಿಕೊಂಡಿದ್ದು ಹಿರಿಯರಿಂದ ಕೇಳಿ ತಿಳಿದುಕೊಳ್ಳುವುದು ಏನಿಲ್ಲ ಎನ್ನುವಂತಿದ್ದಾರೆ, ಹಾಗೂ ಐಪಿಎಲ್‌ನಿಂದಾಗಿ ಭಾರತೀಯ ಕ್ರಿಕೆಟಿಗರಿಗೆ ಅಹಂಕಾರ ಬಂದಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಕಪಿಲ್ ದೇವ್ ಅವರ ಈ ಹೇಳಿಕೆ ಸಾಕಷ್ಟು ಸದ್ದು ಮಾಡಿದೆ. ಈ ವಿಚಾರವಾಗಿ ಟೀಮ್ ಇಂಡಿಯಾದ ಹಿರಿಯ ಆಟಗಾರ ರವೀಂದ್ರ ಜಡೇಜಾ ತಮ್ಮ ಪ್ರತಿಕ್ರಿಯೆ ನೀಡಿದ್ದು ಖಡಕ್ ಉತ್ತರ ನೀಡಿದ್ದಾರೆ.

* ರವೀಂದ್ರ ಜಡೇಜಾ ಟೀಮ್ ಇಂಡಿಯಾ ಏಷ್ಯಾಕಪ್‌ನಲ್ಲಿ ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದಿದೆ ಎಂದಿದ್ದಾರೆ. ಏಷ್ಯಾಕಪ್‌ನಲ್ಲಿ ಯಾವೆಲ್ಲಾ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯಬೇಕು ಎಂಬುದರ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಸ್ಪಷ್ಟವಾಗಿದ್ದು ಅದರಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದಿದ್ದಾರೆ. "ಯಾವ ಸಂಯೋಜನೆಯಲ್ಲಿ ಆಡಬೇಕು ಎಂದು ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಸ್ಪಷ್ಟತೆಯನ್ನು ಹೊಂದಿದ್ದಾರೆ. ಅಲ್ಲಿ ಯಾವುದೇ ಗೊಂದಲಗಳು ಇಲ್ಲ. ಏಷ್ಯಾಕಪ್‌ನಲ್ಲಿ ಆಡುವ ತಂಡದ ಬಗ್ಗೆ ಈ ಮೊದಲೇ ನಿರ್ಧಾರಗಳು ತೆಗೆದುಕೊಳ್ಳಲಾಗಿದೆ. ಈಗ ಕೆಲ ಆಟಗಾರರನ್ನು ಕೆಲ ಸ್ಥಾನಗಳಿಗೆ ಸೂಕ್ತವಾಗುತ್ತಾರೆಯೇ ಎನ್ನುವುದನ್ನು ಕಂಡುಕೊಳ್ಳುವುದಷ್ಟೇ ಆಗಿದೆ" ಎಂದಿದ್ದಾರೆ ರವೀಂದ್ರ ಜಡೇಜಾ.
* ಭಾರತದಲ್ಲಿ ಬಾಜ್‌ಬಾಲ್ ಯಶಸ್ವಿಯಾಗಲಿದೆಯಾ ಎಂಬ ಪ್ರಶ್ನೆಗೆ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ. "ನ್ಯೂಜಿಲೆಂಡ್ ತಂಡವನ್ನು ನಾವು 3-0 ಅಂತರದಿಂದ ಮಣಿಸಿದಾಗ ದಕ್ಷಿಣ ಆಫ್ರಿಖಾದಲ್ಲಿ ಇದು ಸಾಧ್ಯವಾ?, ಪಾಕಿಸ್ತಾನದಲ್ಲಿ ಇದನ್ನು ಸಾಧಿಸಲು ಸಾಧ್ಯವಾ, ಆಸ್ಟ್ರೇಲಿಯಾ ವಿರುದ್ಧ ನಾವು ಸಾಧಿಸಲಿದ್ದೇವಾ? ಎಂಬ ಮಾತುಗಳು ಕೇಲಿಬರುತ್ತಲೇ ಇತ್ತು. ಭಾರತದ ವಿರುದ್ಧ ನಾವು ಏನು ಮಾಡಲಿದ್ದೇವೆ ಎನ್ನುವುದು ಯಾರಿಗೆ ಗೊತ್ತದೆ? ಅದನ್ನು ಸಮಯವೇ ಹೇಳಲಿದೆ" ಎಂದಿದ್ದಾರೆ ಬೆನ್ ಸ್ಟೋಕ್ಸ್.
* ಬಹುನಿರೀಕ್ಷಿತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನಲ್ಲಿ ಆಗಸ್ಟ್ 3 ಗುರುವಾರದಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಏಷ್ಯಾದ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕೂಡ ಭಾಗವಹಿಸಲಿದ್ದು ಇದಕ್ಕಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಅಠಾರಿ-ವಾಘಾ ಗಡಿ ಮೂಲಕ ಪ್ರವೇಶ ಪಡೆದಿದೆ. ಏಷ್ಯನ್ ಹಾಕಿ ಫೆಡರೇಶನ್ 2011ರಿಂದ ವಾರ್ಷಿಕವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿದೆ. ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ರೌಂಡ್-ರಾಬಿನ್ ಸ್ವರೂಪದಲ್ಲಿ ನಡೆಯಲಿದ್ದು ಏಷ್ಯಾದ ಅಗ್ರ ಆರು ತಂಡಗಳು ಇಲ್ಲಿ ಸೆಣೆಸಾಟ ನಡೆಸಲಿದೆ.
* ಭಾರತದ ಮಹಿಳಾ ರಗ್ಬಿ ಸೆವೆನ್ಸ್ ತಂಡ ಏಷ್ಯನ್ ಗೇಮ್ಸ್‌ನ ಮುಂಬರುವ ಆವೃತ್ತಿಗೆ ಅರ್ಹತೆ ಪಡೆದುಕೊಂಡಿದೆ. ಏಷ್ಯಾ ರಾಷ್ಟ್ರಗಳ ಪೈಕಿ ಏಳನೇ ಶ್ರೇಯಾಂಕವನ್ನು ಪಡೆಯುವ ಮೂಲಕ ಅರ್ಹತೆಯನ್ನು ಸಂಪಾದಿಸಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದೆ. ಭಾರತ ಮಹಿಳಾ ರಗ್ಬಿ ತಂಡ ಕಳೆದ ಕೆಲ ವರ್ಷಗಳಿಮದ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications