For Quick Alerts
ALLOW NOTIFICATIONS  
For Daily Alerts

ಆಗಸ್ಟ್ 12: ಹಾಕಿ ಫೈನಲ್ ಮುಖಾಮುಖಿ; ವಿಂಡೀಸ್ ವಿರುದ್ಧ 4ನೇ ಟಿ20: ಕ್ರೀಡಾ ಲೋಕದ ಇಂದಿನ ಸುದ್ದಿ

* ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಹಾಕಿ ಅಭಿಮಾನಿಗಳ ಸಂತೃಪ್ತಿಪಡಿಸಿದೆ. ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ 5-0 ಅಂತರದಿಂದ ಅಮೋಘ ಗೆಲುವು ಸಾಧಿಸಿರುವ ಭಾರತ ಈ ಟೂರ್ನಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲು ಭಾರತ ಸಜ್ಜಾಗಿದ್ದು ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಭಾರತ ಈ ಟೂರ್ನಿಯಲ್ಲಿ ಈವರೆಗೆ ಸಂಪೂರ್ಣವಾಗಿ ಅಧಿಪತ್ಯ ಸಾಧಿಸಿದೆ. ಫೈನಲ್‌ನಲ್ಲಿ ಎದುರಾಳಿಯಾಗಿರುವ ಮಲೇಷ್ಯಾ ತಂಡವನ್ನು ಲೀಗ್ ಹಂತದಲ್ಲಿ ಭರ್ಜರಿ 5-0 ಅಂತರದಿಂದ ಸೋಲಿಸುವುದು ಸೇರಿದಂತೆ ಪ್ರತಿ ಎದುರಾಲಿಯ ವಿರುದ್ಧವೂ ಸಂಪೂರ್ಣ ಮೇಲುಗೈ ಸಾಧಿಸಿಕೊಂಡು ಬಂದಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ನಿಶ್ಚಿತ ಎನ್ನುವುದು ಅಭಿಮಾನಿಗಳ ವಿಶ್ವಾಸ.

* 'ಹೂಪರ್ ಹೆಚ್‌ಕ್ಯೂ' ಎಂಬ ಸಾಮಾಜಿಕ ಜಾಲತಾಣದ ಮಾರ್ಕೆಟಿಂಗ್ ಸೊಲ್ಯುಶನ್ ಸಂಸ್ಥೆಯೊಂದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಗಳಿಸುವ ಆದಾಯವನ್ನು ಪ್ರಕಟಿಸಿತ್ತು. ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ 11.45 ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ ಎಂದು ವರದಿಯಾಗಿತ್ತು. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಸಾಕಷ್ಟು ವೈರಲ್ ಆದ ಬಳಿಕ ಸ್ವತಃ ವಿರಾಟ್ ಕೊಹ್ಲಿ ಈ ವಿಚಾರವಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿರಾಟ್ ಕೊಹ್ಲಿ ಈ ವರದಿಯನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಆ ಮಾಹಿತಿ ಸತ್ಯಕ್ಕೆ ದೂರವಾಗಿದ್ದು ಎಂಬ ವಿಚಾರವನ್ನು ವಿರಾಟ್ ಕೊಹ್ಲಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

August 12, what happened in sports World: Todays Top sports news and headlines

* ಏಷ್ಯಾಕಪ್ ಟೂರ್ನಿಗೆ ದಿನಗಳು ಸಮೀಪಿಸುತ್ತಿರುವಂತೆಯೇ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಸ್ಕ್ವಾಡ್ ಪ್ರಕಟಿಸಲು ಆರಂಭಿಸಿದೆ. ಬಾಂಗ್ಲಾದೇಶ ಕೂಡ ಏಷ್ಯಾಕಪ್ ಟೂರ್ನಿಗೆ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಶಕೀಬ್ ಅಲ್ ಹಸನ್ ನಾಯಕತ್ವದಲ್ಲಿ 17 ಆಟಗಾರರ ಪಡೆಯನ್ನು ಇಂದು ಘೋಷಣೆ ಮಾಡಿದೆ. ಈ ಟೂರ್ನಿಗೆ ಯುವ ಬ್ಯಾಟರ್‌ಗಳಾದ ತಂಜಿದ್ ಹಸನ್ ತಮೀಮ್ ಮತ್ತು ಶಮೀಮ್ ಹೊಸೈನ್ ಪಟ್ವಾರಿ ಕೂಡ ಬಾಂಗ್ಲಾದೇಶ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಕೂಡ 2020ರಲ್ಲಿ ಬಾಂಗ್ಲಾದೇಶ ಅಂಡರ್‌19 ತಂಡ ವಿರ್ಶವಕಪ್ ಗೆದ್ದಾಗ ಆ ತಂಡದ ಭಾಗವಾಗಿದ್ದರು.

* ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯ ಆರಂಭವಾಗಿದೆ. ಅಮೆರಿಕಾದ ಫ್ಲೋರಿಡಾದಲ್ಲಿ ಈ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಟೀಮ್ ಇಂಡಿಯಾ ಆರಂಭದಲ್ಲಿ ಬೌಲಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.

* ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಪ್ರಸ್ತಿತ ಟಿ20 ಸರಣಿಯನ್ನು ಆಡಿತ್ತಿದೆ. ಈ ಪ್ರವಾಸದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಇಬ್ಬರು ಆಟಗಾರರು ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಯಶಸ್ವಿ ಜೈಸ್ವಾಲ್ ಹಾಗು ತಿಲಕ್ ವರ್ಮಾ. ಯಶಸ್ವಿ ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆಇದ್ದು ನಂತರ ಟಿ20 ಯಲ್ಲಿಯೂ ಒಂದು ಪಂದ್ಯವನ್ನು ಆಡಿದ್ದಾರೆ. ಇದೀಗ ಈ ಇಬ್ಬರು ಯುವ ಆಟಗಾರರಿಂದ ಭಾರತ ತಂಡ ಮತ್ತಷ್ಟು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದೆ ಎನ್ನುವ ವಿಚಾರವನ್ನು ತಂಡದ ಬೌಲಿಂಗ್ ಕೋಚ್ ಪರಾಸ್ ಎಮ್ಹಾಂಬ್ರೆ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿರುವ ಈ ಇಬ್ಬರು ಆಟಗಾರರಿ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಿಗಾಗಿ ಮುಂದಿನ ಪಂದ್ಯಗಳಲ್ಲಿ ಕನಿಷ್ಠ ಒಂದು ಓವರ್‌ ಬೌಲಿಂಗ್ ಮಾಡಲು ಸಾಧ್ಯವಿದೆಯೇ ಎನ್ನುವತ್ತ ಚಿತ್ತಹರಿಸಲಾಗುತ್ತಿದೆ ಎಂದಿದ್ದಾರೆ ಪರಾಸ್.

Story first published: Saturday, August 12, 2023, 20:08 [IST]
Other articles published on Aug 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+