For Quick Alerts
ALLOW NOTIFICATIONS  
For Daily Alerts

ಆಗಸ್ಟ್ 19: ದಾಖಲೆ ಬರೆದ ಅಂತಿಮ್ ಪಂಘಾಲ್: ಪಿಸಿಬಿ ಪರಿಸ್ಥಿತಿ ಬಿಚ್ಚಿಟ್ಟ ಅಖ್ತರ್: ಕ್ರೀಡಾ ಲೋಕದ ಇಂದಿನ ಸುದ್ದಿ

* ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಡಿಎಲ್ ನಿಯಮದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ನಾಯಕನಾಗಿ ಜಸ್ಪ್ರೀತ್ ಬೂಮ್ರಾ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದಾರೆ. ಇನ್ನು ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಬೂಮ್ರಾ ನೀಡಿದ ಪ್ರದರ್ಶರ್ ಎಲ್ಲರ ಗಮನಸೆಳೆದಿದ್ದು 10 ತಿಂಗಳ ಬಳಿಕ ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. "ಬಹಳ ಸಂತಸವಾಗುತ್ತದೆ. ಎನ್‌ಸಿಎನಲ್ಲಿ ಸಾಕಷ್ಟು ಸಮಯ ತಾಲೀಮು ನಡೆಸಿದ್ದೇನೆ. ಹಾಗಾಗಿ ಕ್ರಿಕೆಟ್‌ನಿಂದ ದೂರವಾಗಿದ್ದೇನೆ ಎಂಬ ಭಾವನೆ ಮೂಡಿರಲಿಲ್ಲ. ಈಗ ಮತ್ತೆ ಅಂಗಳಕ್ಕಿಳಿದು ಆಟವಾಡುತ್ತಿರುವುದಕ್ಕೆ ಬಹಳ ಸಂತಸವಾಗುತ್ತದೆ. ಇಲ್ಲಿ ತಂಡಕ್ಕೆ ನೆರವಾಗುವುವು ಯಾವಾಗಲೂ ಖುಷಿ ನೀಡುವ ವಿಚಾರ" ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.

* ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(FIDE) ಟ್ರಾನ್ಸ್‌ಜಂಡರ್ ಮಹಿಳೆಯರನ್ನು ತನ್ನ ಟೂರ್ನಮೆಂಟ್‌ನ ಮಹಿಳಾ ವಿಭಾಗದಿಂದ ತಾತ್ಕಾಲಿಕವಾಗಿ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರವಾಗಿ ವೈಯಕ್ತಿಕವಾಗಿ ಪುನರ್‌ವಿಮರ್ಶೆ ನಡೆಸುವ ಅಗತ್ಯವಿದೆ ಎಂದಿರುವ FIDE ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದಿದೆ. ಈ ನಿರ್ಧಾರ ಈಗ ಹಲವು ಕ್ರೀಡಾಪಟುಗಳು ಹಾಘೂ ಉತ್ಸಾಹಿಗಳಿಂದ ಟೀಕೆಗೆ ಗುರಿಯಾಗಿದೆ.

August 19, what happened in sports World: Todays Top sports news and headlines

* ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್ ರೀತಿ ಪರಿಣಾಮಕಾರಿಯಾದ ಚಾಣಾಕ್ಷ ಫಿನಿಷರ್ ಆಗಬಲ್ಲ ಯುವ ಕ್ರಿಕೆಟಿಗನನ್ನು ಹೆಸರಿಸಿದ್ದಾರೆ ಕಿರಣ್ ಮೋರೆ. ಆ ಕ್ರಿಕೆಟಿಗ ಯಾರೂ ಅಲ್ಲ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಗಳಿಸಿಕೊಂಡ ರಿಂಕು ಸಿಂಗ್. "ಭಾರತ ತಂಡದಲ್ಲಿ ಆತನಿಗೆ ಅವಕಾಶ ದೊರೆಯಬೇಕು ಎಂದು ನಾನು ಬಹಳ ಕಾದಿದ್ದೇನೆ. ಐದು ಮತ್ತು ಆರನೇ ಕ್ರಮಾಂಕದಲ್ಲಿ ಆತ ಬಹಳ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಚಾಣಾಕ್ಷ ಪಿನಿಷರ್ ಎನಿಸಿಕೊಳ್ಳಬಲ್ಲರು" ಎಂದಿದ್ದಾರೆ ಮೋರೆ.

* ಈ ಏಷ್ಯಾ ಕಪ್ ಟೂರ್ನಿಗಾಗಿ ಎಲ್ಲಾ ತಂಡಗಳು ಈಗ ಕೊನೆಯ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಆಟಗಾರರು ಕೂಡ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ಬಾಂಗ್ಲಾದೇಶದ ಕ್ರಿಕೆಟಿಗನೋರ್ವ ಈ ಏಷ್ಯಾಕಪ್ ಟೂರ್ನಿಗಾಗಿ ಮಾಡಿದ ವಿಚಿತ್ರವಾದ ಸಿದ್ಧತೆ ನೀಡು ಅಭಿಮಾನಿಗಳು ಅಕ್ಷರಶಃ ಬೆಚ್ಚಿಬೀಳುವಂತಾಗಿದೆ. ಬಾಂಗ್ಲಾದೇಶದ ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ ಶೇಕ್ ಹೀಗೆ ಹಿಂದೆಂದೂ ಕಂಡರಿಯದಂತೆ ಕ್ರಿಕೆಟ್ ಟೂರ್ನಿಯೊಂದಕ್ಕೆ ಸಿದ್ಧತೆಯನ್ನು ನಡೆಸಿದ ಆಟಗಾರ. ಸೈಫ್ ಅಹ್ಮದ್ ಎಂಬವರು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೈದಾನದ ಮಧ್ಯ ಭಾಗದಲ್ಲಿ ಉರಿಯುತ್ತಿರುವ ಕೆಂಡದ ರಾಶಿಯಿದ್ದು ಅದರಲ್ಲಿ ಮೊಹಮ್ಮದ್ ನಯೀಮ್ ಕೆಂಡದ ಮೇಲೆ ನಡೆಯುತ್ತಿರುವ ದೃಶ್ಯಗಳಿದೆ.

* ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಮಂಡಳಿ ಎನ್ನುವದು ತಿಳಿದೇ ಇದೆ. ಭಾರತದ ಕ್ರಿಕೆಟ್ ಮಂಡಳಿಯ ಪ್ರಭಾವ ಎಷ್ಟು ಪ್ರಮಾಣದಲ್ಲಿ ಇದೆ ಎನ್ನುವುದನ್ನು ಹೇಳುವ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡುವ ಹಣವನ್ನು ನೆಚ್ಚಿಕೊಂಡಿದೆ ಎನ್ನುವುದನ್ನು ನೇರವಾಗಿ ಹೇಳಿದ್ದಾರೆ. ಇದರಿಂದಾಗಿ ಪಾಕ್ ಮಂಡಳಿ ಈಗ ಮುಜುಗರಕ್ಕೆ ಒಳಗಾಗುವಂತಾಗಿದೆ. ಭಾರತದ ಪತ್ರಕರ್ತ ಬೋರಿಯಾ ಮಜುಂದಾರ್ ಅವರೊಂದಿಗೆ ಶೋಯೆಬ್ ಅಖ್ತರ್ ಸಂವಾದವೊಂದರಲ್ಲಿ ಭಾಗಿಯಾಗಿದ್ದರು. ಈ ಸಂವಾದದಲ್ಲಿ ವಿಶ್ವಕ್ರಿಕೆಟ್‌ನಲ್ಲಿ ಬಿಸಿಸಿಐ ಹೊಂದಿರುವ ಶಕ್ತಿ ಎಷ್ಟು ಎಂಬುದರ ಬಗ್ಗೆ ಕೇಳಲಾಗಿತ್ತು.ಈ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಬಿಸಿಸಿಐ ಆದಾಯದಿಂದ ಅನೇಕ ಕ್ರಿಕೆಟ್ ಮಂಡಳಿಗಳು ನೆರವು ಪಡೆಯುತ್ತಿದ್ದು ಸ್ವತಃ ಪಾಕಿಸ್ತಾನ ಕೂಡ ಅದನ್ನೇ ನೆಚ್ಚಿಕೊಂಡಿದೆ ಎನ್ನುವ ಅಂಶವನ್ನು ವಿವರಿಸಿದ್ದಾರೆ.

* ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದೆ. ಇದೀಗ ಎರಡನೇ ಪಂದ್ಯಕ್ಕೆ ಎರಡು ತಂಡಗಳು ಸಜ್ಜಾಗಿದ್ದು ಕುತೂಹಲ ಮೂಡಿಸಿದೆ. ಮಳೆಯಿಂದಾಗಿ ಮೊದಲ ಪಂದ್ಯದಲ್ಲಿ ಪೂರ್ಣಪ್ರಮಾಣದ ಆಟ ನಡೆಯದಿದ್ದರೂ ಡಿಎಲ್ ನಿಯಮದ ಆಧಾರದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತು. ಇದೀಗ ಎರಡನೇ ಪಂದ್ಯದಲ್ಲಿಯೂ ಗೆದ್ದು ಸರಣಿ ಗೆಲುವು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ.

Story first published: Saturday, August 19, 2023, 19:57 [IST]
Other articles published on Aug 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+